Lockdown: ದೇಶದ ಭವಿಷ್ಯ ಮಕ್ಕಳು: ಈ ಮಕ್ಕಳ ಭವಿಷ್ಯಕ್ಕೆ ಯಾವ ದೇಶವಿದೆ?

9 ವರ್ಷದ ಸುಷ್ಮಾ (ಹೆಸರು ಬದಲಿಸಿದೆ) ಹಸಿವಿನಿಂದ ಬಳಲುತ್ತಿದ್ದಳು. ಆಕೆಗೆ ಕಳೆದ ಎರಡು ದಿನಗಳದ ಊಟ ದೊರೆತಿರಲಿಲ್ಲ. ಆಕೆಯ ತಂದೆ ದೈನಂದಿನ ಕೂಲಿಕಾರ, ಲಾಕ್‌ಡನ್‌ನಿಂದಾಗಿ ಆತನಿಗೆ ಕೂಲಿಯೂ ದೊರೆಯುತ್ತಿಲ್ಲ. ಕಾನ್ಪುರದ ಈ ಕುಟುಂಬ ಈಗ ಅವರ ಪ್ರದೇಶದಲ್ಲಿ ನೀಡುವ ದಾನ ಅಥವಾ ಸಾಮುದಾಯಿಕ ಆಹಾರವನ್ನು ಅವಲಂಬಿಸಿ ಬದುಕುತ್ತಿದೆ.

ಸಮುದಾಯಿಕ ಆಹಾರ ವ್ಯವಸ್ಥೆ ಮುಚ್ಚಿದ ಸಂದರ್ಭದಲ್ಲಿ, ಇವರ ಕುಟುಂಬವು ಹಸಿವಿನಿಂದ ಬಳಲುತ್ತಿದೆ. ಮಗುವಿಗೆ ಹಸಿವನ್ನು ಸಹಿಸಲಾಗಲಿಲ್ಲ ಮತ್ತು ಆಹಾರಕ್ಕಾಗಿ ನರಳಲು ಪ್ರಾರಂಭಿಸಿದಳು. ಆಕೆಯ ತಾಯಿ ಮಗುವಿಗೆ ಆಹಾರ ನೀಡಲಾಗದೆ ಖಿನ್ನತೆ ಒಳಗಾಗಿದ್ದಳು. ಆ ಸಂದರ್ಭದಲ್ಲಿ ಮಕ್ಕಳಿಗಾಗಿ ಕೆಲಸ ಮಾಡುವ ಎನ್‌ಜಿಓದವರು ಆ ಮಗುವನ್ನು ಕರೆದುಕೊಂಡು ಹೋಗಿದ್ದಾರೆ.

ಮಕ್ಕಳು ಮುಗ್ಧರು, ಲಾಕ್‌ಡೌನ್‌ಗೆ ಬಲಿಯಾದವರಲ್ಲಿ ಪ್ರಮುಖ ಸಂತ್ರಸ್ಥರೂ ಇವರೇ. ಈ ಮಕ್ಕಳು ಹಸಿವು, ಹತಾಶೆಗೊಳಗಾಗಿ ನಾಲ್ಕುಗೋಡೆಗಳ ಮಧ್ಯೆ ಸೀಮಿತರಾಗಿದ್ದಾರೆ- ಅಲ್ಲದೆ, ಹಲವಾರು ಮಕ್ಕಳು ಹೆತ್ತವರೊಂದಿಗೆ ರಸ್ತೆಯಲ್ಲಿದ್ದಾರೆ, ಬಹುದೂರದ ಪ್ರಯಾಣದ ಕಾಲ್ನಡಿಗೆಯಲ್ಲಿದ್ದಾರೆ. ಒತ್ತಡ, ನಿರುತ್ಸಾಹದ ನಡುವೆಯೂ ಆಹಾರ ಮತ್ತು ನೀರಿಗಾಗಿ ಒತ್ತಾಯಿಸುತ್ತಿರುವ ಆ ಮಕ್ಕಳಿಗೆ ಅವುಗಳನ್ನೂ ಒದಗಿಸಲು ಸಾಧ್ಯವಾಗುತ್ತಿಲ್ಲ.

ಮನೆಯಲ್ಲಿರುವ ಹಲವಾರು ಮಕ್ಕಳು ಗದ್ದಲ ಮಾಡುತ್ತಿದ್ದಾರೆ. ಅವರನ್ನು ಮನೆಯೊಳಗೇ ಬಂದಿಸಿದ ನಂತರ ಇದು ಹೆಚ್ಚಾಗುತ್ತಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಇದು ದುಪ್ಪಟ್ಟಾಗುತ್ತಿದೆ” ಎಂದು ಲಖನೌನ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ಸಂಗೀತ್‌ ಶರ್ಮಾ ಹೇಳುತ್ತಾರೆ.

ಮಕ್ಕಳು ತಮ್ಮ ಜೊತೆಗಾರರ ಗುಂಪನ್ನು ಕಳೆದುಕೊಂಡಿದ್ದಾರೆ. ಅನೇಕ ಮಕ್ಕಳು ಹೆತ್ತವರೊಂದಿಗೆ ಇಷ್ಟು ಸಮಯ ಕಳೆದಿರಲಿಲ್ಲ. ಅವರ ಜೀವನಶೈಲಿ ಬದಲಾಗಿದೆ. ಅವರ ಸ್ವಾತಂತ್ರ್ಯವನ್ನು ಮಿತಿಗೊಳಿಸಿ ಅವರನ್ನು ನಿರ್ಬಂಧಗಳೊಂದಿಗೆ ಹಿಡಿದಿಡಲಾಗಿದೆ. ಈ ನಿರ್ಬಂಧಗಳು ಅವರನ್ನು ಸಾಕಷ್ಟು ಬದಲಾಯಿಸಿವೆ.

ಪೋಷಕರು ಸಹ ಮಕ್ಕಳಿಗೆ ಒತ್ತಡ ನೀಡುವುದರಿಂದ, ಮಕ್ಕಳ ಭಾವನಾತ್ಮಕ ಯೋಗಕ್ಷೇಮವು ಪರಿಗಣನೆಗೆ ಸಿಗದಂತಾಗಿದೆ. ಅವರನ್ನು ಕೂಗಲಾಗುತ್ತದೆ, ಹೊಡೆಯಲಾಗುತ್ತದೆ ಮತ್ತು ಹೇಳಿದಂತೆ ವರ್ತಿಸಬೇಕೆಂದು ಹೇಳಲಾಗುತ್ತದೆ. ಇದು ಮಕ್ಕಳ ಮೇಲೆ ಮಾನಸಿಕ ಪರಿಣಾಮವನ್ನು ಬೀರುತ್ತದೆ. ದೇಶದ ಪ್ರತಿಯೊಂದು ನಗರಗಳಲ್ಲಿಯೂ, ಪ್ರತಿಯೊಂದು ಭಾಗಗಳಲ್ಲಿಯೂ ಮಕ್ಕಳ ನೋವಿನ ಕೂಗುಗಳನ್ನು ಕೇಳಬಹುದು. ಆದರೆ, ನಾವು ಅವರಿಗೆ ಸಹಾಯ ಮಾಡುವ ಸ್ಥಿತಿಯಲ್ಲಿಲ್ಲ ಎಂದು ಶರ್ಮಾ ಹೇಳುತ್ತಾರೆ.

******

ಲಾಕ್ ಡೌನ್ ಸಮಯದಲ್ಲಿ ಮಕ್ಕಳ ದುರುಪಯೋಗದ ಪ್ರಕರಣಗಳು ಹೆಚ್ಚಿವೆ ಎಂದು ಮಕ್ಕಳೊಂದಿಗೆ ಕೆಲಸ ಮಾಡುವ ತಜ್ಞರು ಹೇಳುತ್ತಾರೆ. ಮಕ್ಕಳು ಬಡತನ, ಕೌಟುಂಬಿಕ ಹಿಂಸೆ ಮನರಂಜನಾ ಸೌಲಭ್ಯಗಳ ಕೊರತೆ ಹಾಗೂ ಆಲ್ಕೋಹಾಲ್‌ಯುಕ್ತ ಅಥವಾ ಮಾದಕವಸ್ತುಗಳನ್ನು ಸೇವಿಸುವ ತಂದೆ, ಈ ಎಲ್ಲದರಿಂದಾಗಿ ಮಕ್ಕಳ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದೆ. ಮಕ್ಕಳ ಮೇಲಿನ ಕೌಟುಂಬಿಕ ದೌರ್ಜನ್ಯದ ಪರಿಣಾಮಗಳು ಅವರ ಮನಸ್ಸಿನ ಮೇಲೆ ಮಹತ್ತರ ಪಾತ್ರವಹಿಸುತ್ತವೆ. ಕುಟುಂಬವು ಮಕ್ಕಳಿಗೆ ಹಿಂಜರಿತದಂತಹ ವರ್ತನೆಯ ಸಮಸ್ಯೆಗಳನ್ನು ಬೆಳೆಸುವ ಸಾಧ್ಯತೆಯಿದೆ ಮತ್ತು ಅವರು ನಿರಂತರವಾಗಿ ಭಯದ ಸ್ಥಿತಿಯಲ್ಲಿರಲು ಪ್ರಾರಂಭಿಸುತ್ತಾರೆ.

ಲಾಕ್‌ಡೌನ್ ಹಂತಗಳ ಹೆಚ್ಚಾದಂತೆ, ಮಕ್ಕಳಿಗೆ ಜೀವನವು ಹೆಚ್ಚು ಕಷ್ಟಕರವಾಗಿದೆ, ‘ಮಕ್ಕಳನ್ನು ಉಳಿಸಿ’ ಎಂದು ಸುರೋಜಿತ್ ಚಟರ್ಜಿ ಹೇಳಿದರು. ಯಾವುದೇ ಓದು ಅಥವಾ ಆಟಗಳು ಅವರನ್ನು ಹತಾಶರನ್ನಾಗಿ ಮಾಡುತ್ತಿಲ್ಲ. ಆದರೆ, “ಅವರು ಹೊರಗೆ ಹೋಗಿ ಜೊತೆಗಾರರೊಂದಿಗೆ ಆಟವಾಡಲು ಬಯಸುತ್ತಿದ್ದರು. ಈಗ ಅವರು ಮನೆಯೊಳಗೆ ಸೀಮಿತರಾಗಿದ್ದಾರೆ. ಇದು ಅವರು ಕಿರಿಕಿರಿ ಮತ್ತು ಒತ್ತಡಕಕ್ಕೆ ಒಳಗಾಗುವಂತೆ ಮಾಡುತ್ತಿದೆ” ಎಂದು ಸಂಗೀತ ಶರ್ಮಿ ಹೇಳಿದ್ದಾರೆ.

ಸರಿತಾ (ಹೆಸರು ಬದಲಾಯಿಸಲಾಗಿದೆ) ಲಕ್ನೋಗೆ ವಿದ್ಯಾಭ್ಯಾಸಕ್ಕಾಗಿ ಬಂದು ಹಾಸ್ಟೆಲ್‌ನಲ್ಲಿ ತಂಗಿದ್ದಳು. ಲಾಕ್ ಡೌನ್ ನಂತರ ಅವಳು ಲಕ್ನೋದಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆ ಹೋದಳು, ಅಲ್ಲಿ ಅವಳನ್ನು ಥಳಿಸಲಾಯಿತು ಮತ್ತು ಅವ್ಯಾಚ್ಯ ಶಬ್ದಗಳಿಂದ ನಿಂದಿಸಲಾಯಿತು. ಚೈಲ್ಡ್‌ಲೈನ್‌ಗೆ ಮಾಹಿತಿ ನೀಡಿದ ಆಕೆ ಪೊಲೀಸರಿಗೆ ದೂರು ನೀಡಿದ್ದು, ನಂತರ ಆಕೆಯನ್ನು ಮಕ್ಕಳ ಕಲ್ಯಾಣ ಸಮಿತಿಗೆ ರೆಫರ್‌ ಮಾಡಲಾಗಿದೆ.

12 ವರ್ಷದ ರಮೇಶ್(ಹೆಸರು ಬದಲಾಗಿದೆ)ನ ಕುಟುಂಬವು ಬಡತನದಲ್ಲಿದೆ, ಎರಡು ಹೊತ್ತಿನ ಊಟಕ್ಕಾಗಿ ಹೆಣಗಾಡುತ್ತಿದೆ. ಒಂದು ರಾತ್ರಿ ಅತನ ತಂದೆ ಕುಡಿದು ಮನೆಗೆ ಬಂದ ಮತ್ತು ಹೆಂಡತಿಯ ಜೊತೆಗೆ ಜಗಳ ಶುರುಮಾಡಿದ್ದ. ಜಗಳ ಬಿಡಿಸಲು ಮಧ್ಯ ಪ್ರವೇಶಿಸಿದ ರಮೇಶ್‌ನನ್ನು ಆತ ಹೊಡೆದನು. ಇದರಿಂದಾಗಿ ಆತನಿಗೆ ಪೆಟ್ಟು ಬಿತ್ತು. ಅಲ್ಲದೆ, ಆತ ಆಘಾತಕ್ಕೆ ಒಳಗಾದ ಎಂದು ಅವರು ನೆನಪಿಸಿಕೊಂಡರು.

21 ದಿನಗಳ ಮೊದಲ ಲಾಕ್‌ಡೌನ್‌ನಲ್ಲಿ 4.6 ಲಕ್ಷ ದೂರುಗಳು ಬಂದಿರುವುದನ್ನು ಎಂದು ಚೈಲ್ಡ್‌ಲೈನ್‌ ಇಂಡಿಯಾ ಖಚಿತಪಡಿಸಿದೆ. 9385 ಪ್ರಕರಣಗಳಲ್ಲಿ ಮಧ್ಯಸ್ಥಿಕೆಗಳನ್ನು ಸ್ಪಷ್ಟವಾಗಿ ನಡೆಸಲಾಯಿತು. ಈ ಪ್ರಕರಣಗಳಲ್ಲಿ ಶೇಕಡಾ 20 ರಷ್ಟು ಕಿರುಕುಳದಿಂದ ಮಕ್ಕಳ ರಕ್ಷಣೆಗೆ ಸಂಬಂಧಿಸಿವೆ.

“ನಾವು ಕಡಿಮೆ ಮಾಹಿತಿಯನ್ನು ಪಡೆಯುತ್ತಿರುವುದು ಮಾತ್ರವಲ್ಲದೆ ಮಕ್ಕಳನ್ನು ರಕ್ಷಿಸುವುದು ಕಷ್ಟ; ಪ್ರಯಾಣ ಮತ್ತು ಸಂವಹನ ಸಮಸ್ಯೆಗಳು; ಸಮುದಾಯಗಳು ತಮ್ಮನ್ನು ತಾವು ಶೀಘ್ರವಾಗಿ ನಿರ್ಬಂಧಿಸಿಕೊಳ್ಳುತ್ತಿವೆ ಮತ್ತು ಹೊರಗಿನವರಿಗೆ ಹಳ್ಳಿಗಳಿಗೆ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ” ಎಂದು ಸಂಘಟನೆ ಮುಖಂಡರು ವಿವರಿಸಿದರು.

 *******

“ಯಾವುದೇ ರೂಪದಲ್ಲಿನ ಹಿಂಸಾಚಾರವು ಮಗುವಿನ ಒಟ್ಟಾರೆ ಬೆಳವಣಿಗೆಯ ಮೇಲೆ ಬಹಳ ಆಳವಾದ ಪರಿಣಾಮವನ್ನು ಬೀರುತ್ತದೆ. ಮಕ್ಕಳ ಮೇಲಿನ ದೌರ್ಜನ್ಯವು ಮಗುವಿನ ಆರೋಗ್ಯ, ಉಳಿವು, ಅಭಿವೃದ್ಧಿ ಮತ್ತು ಘನತೆಗೆ ಹಾನಿಯನ್ನುಂಟುಮಾಡುತ್ತದೆ”ಎಂದು ಸಲಾಮ್ ಬಾಲಾಕ್ ಟ್ರಸ್ಟ್‌ನ (ಎಸ್‌ಬಿಟಿ) ಅಂಜನಿ ತಿವಾರಿ ಹೇಳುತ್ತಾರೆ.

ಎಸ್‌ಬಿಟಿ ದೆಹಲಿಯ ಬೀದಿ ಮಕ್ಕಳಿಗಾಗಿ ಕೆಲಸ ಮಾಡುತ್ತದೆ. ಈ ಮಕ್ಕಳು ನಡೆಸುವ ಅನೇಕ ಬೀದಿ ಜಗಳಗಳಿಗೆ ತಿವಾರಿ ಸಾಕ್ಷಿಯಾಗಿದ್ದಾರೆ. ಸಾರ್ವಜನಿಕ ಸ್ಥಳಗಳಾದ ಕ್ರೀಡಾಂಗಣ, ರೈಲ್ವೆ ನಿಲ್ದಾಣಗಳು ಮತ್ತು ಬಸ್ ನಿಲ್ದಾಣಗಳು ಅವರ ಮನೆಗಳಾಗಿದ್ದವು. ಅವರು ಅಲ್ಲಿ ವಾಸಿಸುತ್ತಿದ್ದರು, ಭಿಕ್ಷಾಟನೆಯ ಮೂಲಕ ತಮ್ಮ ಜೀವನವನ್ನು ನಡೆಸುತ್ತಿದ್ದರು. ಕ್ರಮೇಣ ಅವರು ಮಾದಕಗಳನ್ನು ತೆಗೆದುಕೊಳ್ಳಲು ಆರಂಭಿಸಿದ್ದರು. ನಿಯಮಿತ ಬೀದಿ ಜಗಳಗಳು ಅವರನ್ನು ಕಠಿಣಗೊಳಿಸುತ್ತವೆ ಮತ್ತು ಅವರನ್ನು ಅಜಾಗರೂಕವಾಗಿಸುತ್ತವೆ ಎಂದು ಅವರು ಹೇಳುತ್ತಾರೆ.

“ಲಾಕ್‌ಡೌನ್‌ನ ಮೂರನೇ ದಿನ ಮಕ್ಕಳು ಜಮುನಾ ಬಜಾರ್ ಬಳಿ ಹಾದುಹೋಗುವ ವಾಹನಗಳ ಮೇಲೆ ಕಲ್ಲು ತೂರಿಸುವುದನ್ನು ನಾನು ನೋಡಿದೆ. ಇದು ವಾಪಸಾತಿ ರೋಗಲಕ್ಷಣದ ಭಾಗವಾಗಿತ್ತು. ಎರಡು ದಿನಗಳಿಂದ ಅವರು ಸೇವಿಸುತ್ತಿದ್ದ ಮಾದಕಗಳು ಸಿಗಲಿಲ್ಲ. ಆದ್ದರಿಂದ ಅವರು ವಾಹನಗಳಿಗೆ ಕಲ್ಲು ತೂರಿಸುವ ಮೂಲಕ ತಮ್ಮ ಕೋಪವನ್ನು ತೋರಿಸುತ್ತಿದ್ದಾರೆ” ಎಂದು ತಿವಾರಿ ಹೇಳಿದರು.

ಆದರೆ ಈ ಬೀದಿ ಮಕ್ಕಳು ಈಗ ಕಣ್ಮರೆಯಾಗಿದ್ದಾರೆ. ಅವರು ಎಲ್ಲಿಯೂ ಕಾಣಿಸುವುದಿಲ್ಲ. ರೈಲ್ವೆ ನಿಲ್ದಾಣಗಳು ಮತ್ತು ಬಸ್ ನಿಲ್ದಾಣಗಳು ಅವರ ವಾಸಸ್ಥಾನವಾಗಿದ್ದವು. ಅವರು ಭಿಕ್ಷೆ ಬೇಡುವ ದೊಡ್ಡ ದೇವಾಲಯಗಳನ್ನು ಮುಚ್ಚಲಾಗಿದೆ. ಅವರ ಸುಳಿವೇ ಇಲ್ಲ ಎಂಬುದನ್ನು ತಿವಾರಿ ದೃಢಪಡಿಸಿಕೊಂಡಿದ್ದಾರೆ.

ಸಂವಿಧಾನ ಮತ್ತು ಮಕ್ಕಳ ಹಕ್ಕುಗಳು ಭಾರತದ ಸಂವಿಧಾನವು ಮಕ್ಕಳ ರಕ್ಷಣೆ ಮತ್ತು ಕಲ್ಯಾಣಕ್ಕಾಗಿ ಹಲವಾರು ನಿಬಂಧನೆಗಳನ್ನು ಒಳಗೊಂಡಿದೆ.

  • ಮಕ್ಕಳ ಹಕ್ಕುಗಳನ್ನು ಕಾಪಾಡಲು ವಿಶೇಷ ಕಾನೂನು ಮತ್ತು ನೀತಿಗಳನ್ನು ರೂಪಿಸಲು ಇದು ಶಾಸಕಾಂಗಕ್ಕೆ ಅಧಿಕಾರ ನೀಡಿದೆ. ಭಾರತದ ಸಂವಿಧಾನದ 14, 15, 15 (3), 19(1)(ಎ), 21, 21(ಎ), 23, 24, 39(ಇ) 39(ಎಫ್) ಪರಿಚೇಧಗಳು ಮಕ್ಕಳ ರಕ್ಷಣೆ, ಸುರಕ್ಷತೆ ಸೇರಿದಂತೆ ಎಲ್ಲ ಜನರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಒತ್ತುಕೊಡುತ್ತವೆ.
  • ಅಲ್ಲದೆ, ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದ ಹಲವಾರು ಅಂತರರಾಷ್ಟ್ರೀಯ ದಾಖಲೆಗಳು ಮತ್ತು ಘೋಷಣೆಗಳಿಗೆ ಭಾರತ ಸಹಿ ಹಾಕಿದೆ.
  • ಮಕ್ಕಳ ಹಕ್ಕುಗಳ ಕುರಿತ ವಿಶ್ವಸಂಸ್ಥೆಯ ಸಮಾವೇಶದಲ್ಲಿ 1992 ರಲ್ಲಿ ಭಾರತವು ಸಹಿ ಹಾಕಿ, ಅಂಗೀಕರಿಸಿತು.
  • 1989 ರಲ್ಲಿ ನಡೆದ ಯುಎನ್ ಜನರಲ್ ಅಸೆಂಬ್ಲಿ ಅಂಗೀಕರಿಸಿದ ಮಕ್ಕಳ ಹಕ್ಕುಗಳ ಸಮಾವೇಶದಲ್ಲಿ (ಸಿಆರ್‌ಸಿ) ಭಾರತ ಸಹಿ ಹಾಕಿದ್ದು, ಮಗುವಿನ ಹಿತಾಸಕ್ತಿ ಕಾಪಾಡುವಲ್ಲಿ ಎಲ್ಲಾ ಸರ್ಕಾರಗಳು ಅನುಸರಿಸಬೇಕಾದ ಮಾನದಂಡಗಳನ್ನು ಸೂಚಿಸುತ್ತದೆ ಮತ್ತು ಮೂಲಭೂತ ಹಕ್ಕುಗಳ ರೂಪರೇಖೆಯನ್ನು ಆ ಸಮಾವೇಶದಲ್ಲಿ ನೀಡಲಾಗಿದೆ.
  • ಮಹಿಳೆಯರ ಮೇಲಿನ ಎಲ್ಲಾ ರೀತಿಯ ತಾರತಮ್ಯವನ್ನು ತೆಗೆದುಹಾಕುವ ಸಮಾವೇಶ (ಸಿಡಿಎಡಬ್ಲ್ಯೂ) 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರಿಗೂ ಅನ್ವಯಿಸುತ್ತದೆ.
  • ವೇಶ್ಯಾವಾಟಿಕೆಗಾಗಿ ಮಹಿಳೆಯರು ಮತ್ತು ಮಕ್ಕಳಲ್ಲಿ ಕಳ್ಳಸಾಗಣೆ ತಡೆಗಟ್ಟುವಿಕೆಗೆ ಬದ್ದವಾಗಿರುವುದಾಗಿ ಸಾರ್ಕ್ ಸಮಾವೇಶದಲ್ಲಿ ಅಂಗೀಕರಿಸಲಾಗಿದೆ.
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights