ದೆಹಲಿ ಗಡಿ ರಸ್ತೆಗಳು ಬಂದ್‌: ರೈತರ ಹೋರಾಟಕ್ಕೆ ವೈದ್ಯರು, ವಿದ್ಯಾರ್ಥಿಗಳು, ವಕೀಲರ ಬೆಂಬಲ!

ಕೇಂದ್ರದ ಕೃಷಿ ನೀತಿಗಳ ವಿರುದ್ಧ ರೈತರ ಪ್ರತಿಭಟನೆ ಮುಂದುವರೆದಿದೆ. ಸರ್ಕಾರದ ಜೊತೆ ಮೊನ್ನೆ (ಮಂಗಳವಾರ) ನಡೆದ ಮಾತುಕತೆ ಮುರಿದು ಬಿದ್ದ ನಂತರ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದೆ. ದೆಹಲಿಯ ಸಿಂಘು, ಟಿಕ್ರಿ, ಚಿಲ್ಲ ಮತ್ತು ಗಜಿಪುರ್ ಗಡಿಗಳಲ್ಲಿ ಪ್ರತಿಭಟನೆ ತೀವ್ರವಾಗಿದೆ. ದೆಹಲಿ ಮತ್ತು ಉತ್ತರ ಪ್ರದೇಶದ ನೊಯ್ಡಾ ಗಡಿ ರಸ್ತೆಯನ್ನು ರೈತರು ಸಂಪೂರ್ಣ ಬಂದ್‌ ಮಾಡಿದ್ದಾರೆ.

ಚಳಿಯ ನಡುವೆಯೂ ಹೋರಾಟ ನಡೆಸುತ್ತಿರುವ ರೈತರಿಗೆ ವಿದ್ಯಾರ್ಥಿಗಳು, ವೈದ್ಯರು, ವಕೀಲರು ಬೆಂಬಲ ನೀಡಿದ್ದಾರೆ. ದೆಹಲಿಯ ಏಮ್ಸ್, ಸಫ್ದರ್ಜಂಗ್, ಹಿಂದೂ ರಾವ್ ಮತ್ತು ಇತರ ಆಸ್ಪತ್ರೆಗಳ ವೈದ್ಯರು ಪ್ರತಿನಿತ್ಯ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತರ ಆರೋಗ್ಯ ತಪಾಸಣೆಗಳನ್ನು ಮಾಡುತ್ತಿದ್ದಾರೆ. ಅನಾರೋಗ್ಯಕ್ಕೆ ಒಳಗಾದ ರೈತರಿಗೆ ಸ್ಥಳದಲ್ಲಿಯೇ ಅಗತ್ಯ ಔಷಧಗಳನ್ನು ಒದಗಿಸುತ್ತಿದ್ದಾರೆ. ಟಿಕ್ರಿ ಗಡಿಯಲ್ಲಿ ರೆಡ್ ಕ್ರಾಸ್ ಸೊಸೈಟಿ 5 ಆಂಬ್ಯುಲೆನ್ಸ್ ಸೇವೆಗಳನ್ನು ನೀಡುತ್ತಿದೆ. ಸಿಂಘು ಗಡಿಭಾಗದಲ್ಲಿ ರೈತರಿಗೆ ಆರೋಗ್ಯ ತಪಾಸಭೆ ಏರ್ಪಡಿಸಲಾಗಿದ್ದು ಇತರ ಪ್ರತಿಭಟನಾ ಸ್ಥಳಗಳಲ್ಲಿ ವೈದ್ಯಕೀಯ ತಪಾಸಣೆ ನಡೆಸುತ್ತೇವೆ ಎಂದು ಡಾ ಹರ್ಜಿತ್ ಸಿಂಗ್ ಭಟ್ಟಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಒದಿ: ಸೂಟು-ಬೂಟು ಸರ್ಕಾರದಿಂದ ರೈತರ ಆದಾಯ ಅರ್ಧದಷ್ಟಾಗಿದೆ; ಸ್ನೇಹಿತರ ಆದಾಯ ದುಪ್ಪಟ್ಟಾಗಿದೆ: ರಾಹುಲ್‌ಗಾಂಧಿ

ದೆಹಲಿಯ ಗಡಿ ಭಾಗದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಸುತ್ತಮುತ್ತಲ ಗ್ರಾಮಸ್ತರು ದಿನನಿತ್ಯದ ಅಗತ್ಯ ಸಾಮಗ್ರಿಗಳನ್ನು ಒದಗಿಸುತ್ತಿದ್ದಾರೆ. ಚಳಿಯ ಭೀಕರತೆಯಿಂದ ರಕ್ಷಿಸಿಕೊಳ್ಳಲು ಹಲವು ರಾಜ್ಯಗಳ ಗುರುದ್ವಾರ ಸಮಿತಿ ಮತ್ತು ಸಿಖ್‌ ಕಾರ್ಯಕರ್ತರು ಕಂಬಳಿಗಳನ್ನು ಪೂರೈಸುತ್ತಿದ್ದಾರೆ. ಪಕ್ಕದ ಇಂಧನ ಕೇಂದ್ರಗಳು ಬೆಂಕಿ ಕಾಯಿಸಿಕೊಳ್ಳಲು ಉಚಿತವಾಗಿ ಪೆಟ್ರೋಲ್‌, ಡೀಸೆಲ್‌ಗಳನ್ನು ನೀಡುತ್ತಿದ್ದಾರೆ.

ಮೋದಿ ಸರ್ಕಾರ ಈಸ್ಟ್ ಇಂಡಿಯಾ ಕಂಪೆನಿಯ ಆಡಳಿತವನ್ನು ಮತ್ತೆ ತರಲು ಪ್ರಯತ್ನಿಸುತ್ತಿದ್ದು, ರೈತರ ಜೀವನವನ್ನು ನಾಶ ಮಾಡಲು ಹೊರಟಿದೆ ಎಂದು ದೆಹಲಿ ವಿಶ್ವವಿದ್ಯಾಲಯದ ಶಿಕ್ಷಕರ ಸಂಘಟನೆ ಮಾಜಿ ಅಧ್ಯಕ್ಷೆ ನಂದಿತಾ ನಾರಾಯಣ್ ಹೇಳಿದ್ದಾರೆ.

ಇಂದು (ಗುರುವಾರ) ಸರ್ಕಾರ ಜೊತೆಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ. ಸಭೆಗೆ 35 ರೈತ ನಾಯಕರು ಭಾಗಿಯಾಗಲಿದ್ದಾರೆ. ಸಭೆಗೆ ಭಾಗಿಯಾಗಲು ಕಿಸಾನ್‌ ಮಜ್ದೂರ್‌ ಸಂಘರ್ಷ ಸಮಿತಿ ನಿರಾಕರಿಸಿದ್ದು, ರೈತರನ್ನು ಇಬ್ಭಾಗ ಮಾಡಲು ಕೇಂದ್ರ ಸರ್ಕಾರ ನೋಡುತ್ತಿದೆ. ಪ್ರಧಾನಿ ಮೋದಿಯವರೇ ಸ್ವತಃ ಸಭೆ ನಡೆಸದೆ ನಾವು ಯಾವುದೇ ಸಭೆಯಲ್ಲಿ ಭಾಗವಹಿಸುವುದಿಲ್ಲ. ಅವರು ಎಲ್ಲಾ 507 ರೈತ ಸಂಘಟನೆಗಳ ಜೊತೆ ಸಭೆ ನಡೆಸಬೇಕು ಎಂದು ಎಸ್ ಎಸ್ ಸುಬ್ರನ್ ಒತ್ತಾಯಿಸಿದ್ದಾರೆ.


ಇದನ್ನೂ ಒದಿ: ಕೆಲಸಗಳಲ್ಲಿ ಬ್ಯುಸಿಯಾಗಿದೆ ಮೋದಿ ಸರ್ಕಾರ; 06 ವರ್ಷದಲ್ಲಿ ಬಿಜೆಪಿ ಸಾಧನೆಗಳೇನು ಗೊತ್ತೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights