ಏಕತಾ ಪ್ರತಿಮೆ ವೀಕ್ಷಣೆಯ ಟಿಕೆಟ್‌ ಮಾರಾಟದ 5.24 ರೂ ನಾಪತ್ತೆ: ಎಫ್‌ಐಆರ್‌ ದಾಖಲು

ಗುಜರಾತ್‌ನಲ್ಲಿರುವ ಸರ್ದಾರ್ ವಲ್ಲಭಾಯ್ ಪಟೇಲ್‌ ಏಕತಾ ಪ್ರತಿಮೆ ವೀಕ್ಷಣೆಯ ಟಿಕೆಟ್ ಮಾರಾಟದಿಂದ ಸಂಗ್ರಹವಾಗಿದ್ದ 5.24 ರೂ ಕಾಣೆಯಾಗಿದ್ದು, ಕಳ್ಳತನದ ಆರೋಪಗಳು ಕೇಳಿ ಬಂದಿವೆ. ಹೀಗಾಗಿ ಏಜೆನ್ಸಿಯೊಂದರ ಕೆಲವು ನೌಕರರ ವಿರುದ್ಧ ಕೇವಡಿಯಾ ಠಾಣೆ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಏಕತಾ ಪ್ರತಿಮೆ ಉದ್ಘಾಟನೆಗೊಂಡ ನಂತರ ಟಿಕೆಟ್‌ ಮಾರಾಟ ಮತ್ತು ಹಣ ಸಂಗ್ರಹಣೆಯ ಹೊಣೆಯನ್ನು ಏಜೆನ್ಸಿಯೊಂದಕ್ಕೆ ವಹಿಸಲಾಗಿತ್ತು. ಏಕತಾ ಪ್ರತಿಮೆ ಆಡಳಿತ ಮಂಡಳಿಯು ಪ್ರವಾಸಿಗರಿಂದ ಸಂಗ್ರಹವಾದ ಹಣವನ್ನು ಸಂದಾಯ ಮಾಡಲು ವಡೋದರಾದಲ್ಲಿ ಖಾತೆಯನ್ನು ತೆರೆದಿದೆ. ಆದರೆ, ಆ ಏಜೆನ್ಸಿಯು ಕಳೆದ ಒಂದೂವರೆ ವರ್ಷದಿಂದ ಸಂಗ್ರಹವಾಗಿದ್ದ 5.24 ರೂ ಹಣವನ್ನು ಆಡಳಿತ ಮಂಡಳಿಯ ಖಾತೆಗೆ ಸಂದಾಯ ಮಾಡಿಲ್ಲ ಎಂದು ಆರೋಪಿಸಲಾಗಿದೆ.

5,24,77,375 ರೂ ಹಣವನ್ನು ಬ್ಯಾಂಕ್‌ಗೆ ಪಾವತಿಸದ ಕಾರಣ ಬ್ಯಾಂಕ್‌ನ ವ್ಯವಸ್ಥಾಪಕರು ನೀಡಿರುವ ದೂರಿನನ್ವಯ ಏಜೆನ್ಸಿಯ ನೌಕರರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ’ ಎಂದು ಡಿಎಸ್‌ಪಿ ವಾಣಿ ದುಧಾತ್‌ ತಿಳಿಸಿದ್ದಾರೆ.

‘ಹಣ ನಾಪತ್ತೆಯಾದ ಪ್ರಕರಣಕ್ಕೂ ಏಕತಾ ಪ್ರತಿಮೆಯ ಮಂಡಳಿಗೂ ಸಂಬಂಧವಿಲ್ಲ. ಇದು ಬ್ಯಾಂಕ್‌ ಹಾಗೂ ಟಿಕೆಟ್‌ ಮಾರಾಟ ಮಾಡುವ ಏಜೆನ್ಸಿ ನಡುವಿನ ಸಮಸ್ಯೆ’ ಎಂದೂ ಅಧಿಕಾರಿ ಹೇಳಿದ್ದಾರೆ.

‘ಟಿಕೆಟ್‌ ಮಾರಾಟ ಮತ್ತು ಸಂಗ್ರಹವಾದ ಹಣವನ್ನು ಬ್ಯಾಂಕ್‌ಗೆ ತಲುಪಿಸುವ ಸಲುವಾಗಿ ಬ್ಯಾಂಕ್‌ ಈ ಏಜೆನ್ಸಿಯನ್ನು ನೇಮಿಸಿಕೊಂಡಿದೆ’.


ಇದನ್ನೂ ಓದಿ: ಪೂಜಾರಿಗಿಲ್ಲದ ಸಾಂಪ್ರದಾಯಿಕ ಉಡುಗೆ ಭಕ್ತರಿಗೆ ಯಾಕೆ: ತೃಪ್ತಿ ದೇಸಾಯಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights