ಪೂಜಾರಿಗಿಲ್ಲದ ಸಾಂಪ್ರದಾಯಿಕ ಉಡುಗೆ ಭಕ್ತರಿಗೆ ಯಾಕೆ: ತೃಪ್ತಿ ದೇಸಾಯಿ

ದೇವರ ದರ್ಶನಕ್ಕೆ ಬರುವ ಭಕ್ತರು ಸಾಂಪ್ರದಾಯಿಕ ವಸ್ತ್ರವನ್ನು ಧರಿಸಿರಬೇಕು ಎಂದು ಶಿರಿಡಿ ಸಾಯಿಬಾಬಾ ದೇವಾಲಯದ ಟ್ರಸ್ಟ್‌ ಭಕ್ತಿರಿಗೆ ಸೂಚಿಸಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸಾಮಾಜಿಕ ಹೋರಾಟಗಾರ್ತಿ ತೃಪ್ತಿ ದೇಸಾಯಿ, ಸಾಂಪ್ರದಾಯಿಕ ಉಡುಗೆ ಧರಿಸಿ ದೇವಸ್ಥಾನಕ್ಕೆ ಬರಬೇಕೆಂಬ ನಿಯಮ ಕೇವಲ ಭಕ್ತರಿಗೆ ಮಾತ್ರವೇ ಏಕೆ ಅನ್ವಯವಾಗಬೇಕು, ಈ ನಿಯಮ ಅರ್ಚಕರು ಮತ್ತು ಪೂಜಾರಿಗಳಿಗೆ ಏಕೆ ಅನ್ವಯವಾಗುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.

ಸಾಂಪ್ರದಾಯಿಕ ಉಡುಗೆ ಕಡ್ಡಾಯವೆಂದು ದೇವಾಲಯದ ಮಂಡಳಿಯವರು ಭಕ್ತರಿಗೆ ಮಾಡುತ್ತಿರುವ ಅವಮಾನವಾಗಿದೆ. ಸಂವಿಧಾನವು ಜನರಿಗೆ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವಾಗಿದೆ. ಈ ನಿಯಮಗಳನ್ನು ತೆಗೆಯದಿದ್ದರೆ ಶಿರಡಿಯಲ್ಲಿ ಹೋರಾಟ ಮಾಡುತ್ತೇವೆ ಎಂದು ತೃಪ್ತಿ ದೇಸಾಯಿ ಎಚ್ಚರಿಸಿದ್ದಾರೆ.

ಸಾಯಿಬಾಬಾ ಸಂಸ್ಥಾನ್ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾನ್ಹುರಾಜ್‌ ಬಗಟೆ ಅವರು , ‘ದೇವರ ದರ್ಶನಕ್ಕೆ ಬರುವರು ಸಾಂಪ್ರದಾಯಿಕ ಉಡುಗೆಯೊಂದಿಗೆ ಆಗಮಿಸುವಂತೆ ಭಕ್ತರಲ್ಲಿ ಮನವಿ ಮಾಡಿದ್ದೇವೆಯೇ ಹೊರತು ಯಾವುದೇ ವಸ್ತ್ರ ಸಂಹಿತೆಯನ್ನು ಹೇರಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ. ‘ದೇವಾಲಯಕ್ಕೆ ಬರುವವರಲ್ಲಿ ಕೆಲವರು ಆಕ್ಷೇಪಾರ್ಹ ಉಡುಗೆ ಧರಿಸಿರುತ್ತಾರೆ’ ಎಂಬ ಭಕ್ತರ ದೂರನ್ನು ಆಧರಿಸಿ ಭಕ್ತರಲ್ಲಿ ಈ ರೀತಿ ಮನವಿ ಮಾಡಿದೆವು’ ಎಂದು ಸಿಇಒ ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದರುವ ದೇಸಾಯಿ, ‘ದೇವಾಲಯದಲ್ಲಿರುವ ಅರ್ಚಕರು ಅರೆ ಬೆತ್ತಲೆಯಲ್ಲಿರುತ್ತಾರೆ. ಯಾವ ಭಕ್ತರೂ ಇದಕ್ಕೆ ಆಕ್ಷೇಪ ಎತ್ತುವುದಿಲ್ಲ. ದೇವಾಲಯದ ಮಂಡಳಿ ಮೊದಲು ಇಂಥ ನಿಯಮಗಳನ್ನು ತೆಗೆದು ಹಾಕಬೇಕು’ ಎಂದು ಒತ್ತಾಯಿಸಿದ್ದಾರೆ.


ಇದನ್ನೂ ಓದಿ: ಯಡಿಯೂರಪ್ಪ ಜೈಲಿಗೆ ಹೋಗಿ ಬಂದ್ರೂ ಬುದ್ದಿ ಬಂದಿಲ್ಲ: ವಾಟಾಳ್‌ ನಾಗರಾಜ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights