ನಾಯಿಯನ್ನು ಅಟ್ಟಾಡಿಸಿಕೊಂಡು ಶೌಚಾಲಯದಲ್ಲಿ ಬಂಧಿಯಾದ ಚಿರತೆ ಏನಾಯ್ತು..?

ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಕೈಕಂಬ ಗ್ರಾಮದಲ್ಲಿ ನಾಯಿಯನ್ನು ಅಟ್ಟಾಡಿಸಿಕೊಂಡು ಶೌಚಾಲಯದಲ್ಲಿ ಬಂಧಿಯಾಗಿದ್ದ ಚಿರತೆ ತನ್ನ ಕಾಡು ಬುದ್ದಿಯನ್ನು ತೋರಿಸಿ ಎಸ್ಕೇಪ್ ಆಗಿದೆ.

ಹೌದು.. ಚಿರತೆಯೊಂದು ನಾಯಿಯನ್ನು ಅಟ್ಟಾಡಿಸಿಕೊಂಡು ರೇಗಪ್ಪ ಎಂಬವರ ಮನೆಯ ಟಾಯ್ಲೆಟ್ ನಲ್ಲಿ ಸೇರಿತ್ತು. ಚಿರತೆ ನುಗ್ಗುತ್ತಿದ್ದಂತೆ ಗಾಬರಿಗೊಂಡ ಮನೆ ಮಂದಿ ಹೊರಗಡೆ ಓಡಿ ಬಂದಿದ್ದಾರೆ. ಈ ವೇಳೆ ಎಚ್ಚೆತ್ತ ಮನೆಯವರು ಶೌಚಾಯದ ಬಾಗಿಲು ಮುಚ್ಚಿ ಕೂಡಿ ಹಾಕಿದ್ದಾರೆ. ಚಿರತೆ ಮತ್ತು ನಾಯಿ ಒಂದೇ ಕಡೆ ಇರುವ ಫೋಟೋ ವೈರಲ್ ಆಗಿದೆ.

ಹೀಗಾಗಿ ಟಾಯ್ಲೆಟ್ ಒಳಗಡೆ ನಾಯಿಯೊಂದಿಗೆ ಚಿರತೆ ಕೂಡ ಸಿಲುಕಿಕೊಂಡಿತ್ತು. ಕೂಡಲೆ ಸ್ಥಳಕ್ಕೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಗಳು ದೌಡಾಯಿಸಿ ಚಿರತೆ ಸೆರೆಗೆ ಬಲೆ ಬೀಸಿದ್ದರು. ಆದರೆ ಚಾಲಾಕಿ ಚಿರತೆ ತನ್ನ ಕಾಡು ಬುದ್ದಿ ತೋರಿಸಿ ಎಸ್ಕೇಪ್ ಆಗಿದೆ.

ಹೌದು.. ಕಾಡಿನಿಂದ ನಾಡಿಗೆ ಬಂದು ಬಂಧಿಯಾಗಿದ್ದ ಚಿರತೆಯನ್ನು ಹಿಡಿಯಲು ಅರಣ್ಯಾಧಿಕಾರಿಗಳು ವಿಫಲರಾಗಿದ್ದಾರೆ. ಚಿರತೆಗೆ ಮತ್ತುಬರೋ ಮದ್ದು ಕೊಡಲು ಮುಂದಾಗಿ ಇಡೀ ಶೌಚಾಲಯಕ್ಕೆ ಬಲೆ ಹಾಕಲಾಗಿತ್ತು. ಚುಚ್ಚು ಮದ್ದು ಕೊಡಲು ಶೌಚಾಯದ ಮೇಲಿನಿಂದ ಶೀಟ್ ಓಪನ್ ಮಾಡಿದ ಕೂಡಲೇ ಚಿರತೆ ಹಾರಿ ಹೊರಬಂದಿದೆ. ಬಲೆ ಸರಳವಾಗಿದ್ದ ಕಾರಣ ಚಾಲಾಕಿ ಚಿರತೆ ತಪ್ಪಿಸಿಕೊಂಡು ಓಡಿ ಹೋಗಿದೆ.

ಹೀಗಾಗಿ ಸ್ಥಳೀಯರು ಚಿಕ್ಕಿಬಿದ್ದ ಚಿರತೆಯನ್ನು ಹಿಡಿಯಲು ವಿಫಲವಾದ ಅರಣ್ಯ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ. ಆದರೂ ಚಿರತೆ ಸೆರೆ ಹಿಡಿಯುವ ವಿಶ್ವಾಸ ಅರಣ್ಯಾಧಿಕರಿಗಳು ವ್ಯಕ್ತಪಡಿಸಿದ್ದಾರೆ.

 

Spread the love

Leave a Reply

Your email address will not be published. Required fields are marked *