ಇತ್ತ ಸಿಡಿ ಲೇಡಿ ಹೇಳಿಕೆ : ಅತ್ತ ರಮೇಶ್ ಜಾರಕಿಹೊಳಿ ಟೆಂಪಲ್ ರನ್!
ಭಾರೀ ಸಂಚಲನ ಮೂಡಿಸಿದ್ದ ರಮೆಶ್ ಜಾರಕಿಹೊಳಿ ಸಿಡಿ ಕೇಸ್ ಯುವತಿ ನೇರವಾಗಿ ನ್ಯಾಯಾಧೀಶರ ಮುಂದೆ ಹಾಜರಾಗಿ ಹೇಳಿಕೆ ಕೊಟ್ಟಿದ್ದಾಳೆ. ಸದ್ಯ ಎಸ್ಐಟಿ ಅಧಿಕಾರಿಗಳು ಯುವತಿಯನ್ನು ವಿಚಾರಣೆಗೆ ಕರೆದೊಯ್ದಿದ್ದಾರೆ. ಇತ್ತ ಮಾಜಿ ಸಚಿವ ರಮೇಶ್ ಜಾರಕಿಹೊಳಿ ದೇವಸ್ಥಾನದ ಮೊರೆ ಹೋಗಿದ್ದಾರೆ.
ಹೌದು… ಬೆಂಗಳೂರಿಗೆ ವಿಮಾನದಿಂದ ಬಂದಿಳಿದ ಸಿಡಿ ಯುವತಿ ಕೋರ್ಟ್ ಗೆ ಹಾಜರಾಗಿದ್ದು ತನ್ನ ಹೇಳಿಕೆಯನ್ನು ದಾಖಲಿಸಿದ್ದಾಳೆ. ಅತ್ತ ರಮೇಶ್ ಜಾರಕಿಹೊಳಿ ಕೊಲ್ಹಾಪುರದ ಮಹಾಲಕ್ಷ್ಮಿ ದೇವಾಲಯಕ್ಕೆ ಭೇಟಿ ನೀಡಿ ವಾಪಾಸ್ಸಾಗುತ್ತಿದ್ದಾರೆ.
ಇತ್ತ ಯುವತಿ ಹೇಳಿಕೆ ಮುಕ್ತಾಯಗೊಂಡಿದ್ದು, ವಸಂತನಗರದ ಗುರುನಾನಕ್ ಭವನದಿಂದ ಎಸ್ಐಟಿ ಯುವತಿಯನ್ನು ವಿಚಾರಣೆಗೆ ಕರೆದೊಯ್ದಿದೆ.
ಈ ಬಗ್ಗೆ ಮಾತನಾಡಿದ ಯುವತಿ ಪರ ವಕೀಲರು ಜಗದೀಶ್, ‘ಆಡುಗೋಡೆ ಟೆಕ್ನಿಕಲ್ ಸೆಲ್ ನತ್ತ ಯುವತಿಯನ್ನು ಕರೆದೊಯ್ಯಲಾಗಿದೆ. ಎಸ್ಐಟಿಗೆ ನಾನು ಯುವತಿಯನ್ನು ಒಪ್ಪಿಸಿಲ್ಲ. 161 ಹೇಳಿಕೆ ಪಡೆಯಲು ಎಸ್ಐಟಿ ಪಡೆದು ಕಳುಹಿಸಿಕೊಡುತ್ತಾರೆ. ಹೇಳಿಕೆ ಕೊಡಿಸಲು ಕರೆದುಕೊಂಡು ಬಂದಿದ್ದೇವೆ. ಯುವತಿ ದೂರು ಕೊಟ್ಟಿಲ್ಲ ಎಂದು ಹೇಳುತ್ತಿದ್ದರು ಅದನ್ನು ನಾವು ಫುಲ್ ಫಿಲ್ ಮಾಡಿದ್ದೇವೆ. ಇನ್ನೂ ತುಂಬಾ ವಿಚಾರಣೆಯಾಗುವುದಿದೆ. ವೈದ್ಯಕೀಯ ಪರೀಕ್ಷೆಯಾಗುವುದಿದೆ’ ಎಂದು ಹೇಳಿದ್ದಾರೆ.