ಭಗತ್‌ಸಿಂಗ್‌ ಜೀವನಾಧಾರಿತ ‘ಮಹಾನ್‌ ಹುತಾತ್ಮ’ ಕನ್ನಡ ಕಿರುಚಿತ್ರ ಬಿಡುಗಡೆ!

ಭಾರತ ಸ್ವಾತಂತ್ರ್ಯ ಹೋರಾಟದ ಯುವ ಚಿಲುಮೆ, ಯುವಜನರ ಸ್ಪೂರ್ತಿ, ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ 23ನೇ ವಯಸ್ಸಿಗೆ ಬ್ರಿಟಿಷರ ನೇಣಿಗೆ ಕೊರಳೊಡ್ಡಿದ ಕಾಂತ್ರಿಯ ಕಿಡಿ ಹುತಾತ್ಮ ಭಗತ್‌ ಸಿಂಗ್‌ ಅವರ ಜೀವನಾಧಾರಿತ ‘ಮಹಾನ್‌ ಹುತಾತ್ಮ’ ಕನ್ನಡದ ಕಿರುಚಿತ್ರವು ಏಪ್ರಿಲ್‌ 03 ರಂದು ಮೊದಲ ಬಾರಿಗೆ ಪ್ರದರ್ಶನಗೊಳಲ್ಲಿದೆ. ಅಲ್ಲದೆ, ಓಟಿಟಿಯಲ್ಲಿಯೂ ಕಿರುಚಿತ್ರ ಬಿಡುಗಡೆಯಾಗಲಿದ್ದು, ಈ ಬಗ್ಗೆ ಏಪ್ರಿಲ್‌ 03ರಂದು ಘೋಷಿಸಲಾಗುವುದು ಎಂದು ಚಿತ್ರದ ನಿರ್ದೇಶಕ ಸಾಗರ್ ಪುರಾಣಿಕ್ ತಿಳಿಸಿದ್ದಾರೆ.

ಏಪ್ರಿಲ್ 3ರಂದು ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಈ ಕುರುಚಿತ್ರ ಪ್ರದರ್ಶನಗೊಳ್ಳಲಿದೆ. ಈಗಾಗಲೇ ಹಾಲಿವುಡ್‌ ಸಿಲ್ವರ್‌ ಸ್ಕ್ರೀನ್‌ ಫೆಸ್ಟಿವಲ್, ಜೈಪುರ್‌ ಇಂಟರ್‌ನ್ಯಾಷನಲ್‌ ಫಿಲ್ಮ್‌ ಫೆಸ್ಟಿವಲ್‌ ಸೇರಿದಂತೆ ಹಲವು ಚಲನ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿರುವ ‘ಮಹಾನ್ ಹುತಾತ್ಮ’ ಕಿರುಚಿತ್ರವು, ದಾದಾ ಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲಚಿತ್ರೋತ್ಸವ 2020ರಲ್ಲಿ ವಿಶೇಷ ಮನ್ನಣೆ ಪಡೆದುಕೊಂಡಿದೆ.

ಅಲ್ಲದೆ, 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನೂ ಪಡೆದುಕೊಂಡಿದೆ. ಚಿತ್ರದಲ್ಲಿ ಕನ್ನಡದ ಖ್ಯಾತ ನಟ ಶ್ರೀನಾಥ್, ಅಕ್ಷಯ್ ಚಂದ್ರಶೇಖರ್, ಅದ್ವಿತಿ ಶೆಟ್ಟಿ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

ಕಿರುಚಿತ್ರದ ಪ್ರದರ್ಶನಕ್ಕೆ ಎರಡೂವರೆ ವರ್ಷಗಳಿಂದ ಕಾಯಲಾಗಿತ್ತು. ಇದು ದೊಡ್ಡ ಬಜೆಟ್‌ನ ಕಿರುಚಿತ್ರವಾಗಿದ್ದು, 20 ಲಕ್ಷ ರೂ ಖರ್ಚು ಮಾಡಲಾಗಿದೆ. ಹೀಗಾಗಿ ಬಿಡುಗಡೆಗೂ ಮುನ್ನ ಖರ್ಚಿ ಅರ್ಧದಷ್ಟು ಹಣವನ್ನು ಸಂಗ್ರಹಿಸಬೇಕಾಗಿತ್ತು. ಅಲ್ಲದೆ, ಕೋವಿಡ್‌ ಕಾರಣದಿಂದಾಗಿಯೂ ಕಿರುಚಿತ್ರದ ಬಿಡುಗಡೆ ತಡವಾಯಿತು ಎಂದು ನಿರ್ದೇಶಕ ಸಾಗರ್ ಪುರಾಣಿಕ್ ತಿಳಿಸಿದ್ದಾರೆ.

ಇದನ್ನೂ ಓದಿ: ಭಗತ್‌ಸಿಂಗ್‌ ಹುತಾತ್ಮ ದಿನ: ರೈತ ಹೋರಾಟದತ್ತ ಯುವಜನರ ದಂಡು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights