ಭಗತ್‌ಸಿಂಗ್‌ ಹುತಾತ್ಮ ದಿನ: ರೈತ ಹೋರಾಟದತ್ತ ಯುವಜನರ ದಂಡು!

ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಹೋರಾಟಗಾರ ಭಗತ್ ಸಿಂಗ್, ರಾಜ್‌ಗುರು ಮತ್ತು ಸುಖದೇವ್ ಅವರ ಹುತಾತ್ಮ ದಿನ(ಮಾರ್ಚ್‌ 23)ರಂದು ರೈತ ಹೋರಾಟ ನಡೆಯುತ್ತಿರುವ ದೆಹಲಿಯ ಗಡಿಗಳಿಗೆ ದೇಶಾದ್ಯಂತ ಇರುವ ಯುವಜನರ ದಂಡು ತೆರಳುತ್ತಿದೆ. ಇಂದು ಬೆಳಗ್ಗೆ 11 ಗಂಟೆಗೆ ಯುವಜನರ ಸಮಾವೇಶ ಆರಂಭವಾಗಲಿವೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸಮಾವೇಶಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಪ್ರಸ್ತುತಪಡಿಸಲಾಗುವುದು, ಅಲ್ಲಿ ಭಗತ್ ಸಿಂಗ್, ರಾಜ್‌ಗುರು ಮತ್ತು ಸುಖದೇವ್ ಅವರ ವಿಚಾರಗಳನ್ನು ಪ್ರಸ್ತುತ ಪಡಿಸಲಾಗುವುದು. ಈ ಹುತಾತ್ಮ ದಿನವನ್ನು ರೈತರಿಗೆ ಸಮರ್ಪಿಸಲಾಗುವುದು, ಇದರಲ್ಲಿ ರೈತರು ಮತ್ತು ಕಾರ್ಮಿಕರ ಶೋಷಣೆಯ ಬಗ್ಗೆ ಭಗತ್ ಸಿಂಗ್ ಅವರ ಅಭಿಪ್ರಾಯಗಳನ್ನು ತೋರಿಸಲಾಗುವುದು ಮತ್ತು ಆಂದೋಲನವನ್ನು ಮತ್ತಷ್ಟು ಬಲಪಡಿಸಲಾಗುತ್ತದೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನು ಖಟ್ಕಾಡ್ ಕಲನ್, ಹಿಸಾರ್ ಮತ್ತು ಮಥುರಾದಿಂದ ಪಾದ ಯಾತ್ರೆಗಳು ದೆಹಲಿಯ ಗಡಿಯನ್ನು ತಲುಪುತ್ತಿವೆ. ಈ ಯಾತ್ರೆಗಳಿಗೆ ಭಾರಿ ಸಾರ್ವಜನಿಕ ಬೆಂಬಲ ಸಿಗುತ್ತಿದೆ. ಮಾರ್ಚ್ 26 ರ ಸಂಪೂರ್ಣ ಭಾರತ್ ಬಂದ್ ಸಂದೇಶಗಳನ್ನು ಈ ಯಾತ್ರೆಗಳ ಮೂಲಕ ಸಾರ್ವಜನಿಕರಿಗೆ ರವಾನಿಸಲಾಗುತ್ತಿದೆ ಎಂದು ತಿಳಿಸಲಾಗಿದೆ.

Read Also: ಮೋದಿ ರೈತರು ಎಲ್ಲಿ ಬೇಕಾದರೂ ಬೆಳೆಗಳನ್ನು ಮಾರಾಟ ಮಾಡಬಹುದು ಎಂದಿದ್ದಾರೆ; ಸಂಸತ್‌ನಲ್ಲಿ ಮಂಡಿ ತೆರೆಯುತ್ತೇವೆ: ರಾಕೇಶ್‌ ಟಿಕಾಯತ್‌

ಬಿಜೆಪಿ ಸರ್ಕಾರ ತನ್ನ ವೈಫಲ್ಯವನ್ನು ರೈತರ ಮೇಲೆ ಹೇರಲು ಬಯಸುತ್ತಿದೆ. ವಾಸ್ತವವಾಗಿ, ರೈತರ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಬದಲು, ಅನಾನುಕೂಲತೆಯನ್ನು ಸೃಷ್ಟಿಸಿ ರೈತರನ್ನು ದೂಷಿಸುತ್ತಿದ್ದಾರೆ. ಸಂಧಾನ ಮಾತುಕತೆಯನ್ನು ರೈತರು ನಿಗದಿಪಡಿಸಬೇಕು ಎಂದು ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ. ರೈತ ಮುಖಂಡರು ಮಾತುಕತೆಗೆ ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ. ಆದರೆ, ಸರಿಯಾದ ವಾತಾವರಣದಲ್ಲಿ ಸಂವಾದದ ಪ್ರಸ್ತಾಪವನ್ನು ಸರ್ಕಾರ ಕಳುಹಿಸಬೇಕು ಎಂದು ನಾವು ಮತ್ತೆ ಸ್ಪಷ್ಟಪಡಿಸುತ್ತೇವೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.

ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲಿ ವಿಧಾನಸೌಧ ಚಲೋ ರ್‍ಯಾಲಿ ನಡೆದಿದೆ, ಇದರಲ್ಲಿ ಸಮುಕ್ತ ಕಿಸಾನ್ ಮೋರ್ಚಾದ ನಾಯಕರು ಭಾಗವಹಿಸಿದ್ದರು. ರಾಜ್ಯದ ಕೃಷಿ ಸಚಿವರು ರೈತರನ್ನು ಭೇಟಿಯಾಗಿ ಅವರಿಂದ ಮನವಿ ಪತ್ರವನ್ನು ಸ್ವೀಕರಿಸಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಎಸ್‌ಕೆಎಂ ತಿಳಿಸಿದೆ.

ಸೋಮವಾರ ನಡೆದ ವಿಧಾನಸೌಧ ಚಲೋ ರ್‍ಯಾಲಿಯಲ್ಲಿ, ದೆಹಲಿಯ ರೈತ ಹೋರಾಟ ಮುನ್ನಡೆಸುತ್ತಿರುವ ಭಾರತೀಯ ಕಿಸಾನ್ ಯೂನಿಯನ್ ರಾಷ್ಟ್ರೀಯ ಕಾರ್ಯದರ್ಶಿ ಯುದುವೀರ್ ಸಿಂಗ್, ಸಂಯುಕ್ತ ಕಿಸಾನ್ ಮೋರ್ಚಾದ ಡಾ.ದರ್ಶನ್ ಪಾಲ್, ರಾಕೇಶ್ ಟಿಕಾಯತ್, ಕುಲ್‌ಬೀರ್‌ ಸಿಂಗ್, ರಾಜ್ಯದ ಬಡಗಲಪುರ ನಾಗೇಂದ್ರ, ಕೋಡಿಹಳ್ಳಿ ಚಂದ್ರಶೇಖರ್, ನಟ ಚೇತನ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Read Also: ಮೋದಿಯವರ ವಸತಿ ಜಾಹೀರಾತು ನಕಲಿ? ನನಗೆ ಸ್ವಂತ ಮನೆಯೇ ಇಲ್ಲ ಎಂದ ಮಹಿಳೆ…!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights