ಮೋದಿ ರೈತರು ಎಲ್ಲಿ ಬೇಕಾದರೂ ಬೆಳೆಗಳನ್ನು ಮಾರಾಟ ಮಾಡಬಹುದು ಎಂದಿದ್ದಾರೆ; ಸಂಸತ್‌ನಲ್ಲಿ ಮಂಡಿ ತೆರೆಯುತ್ತೇವೆ: ರಾಕೇಶ್‌ ಟಿಕಾಯತ್‌

ಟ್ರಾಕ್ಟರುಗಳು ಮತ್ತೆ ದೆಹಲಿಗೆ ಪ್ರವೇಶಿಸಲಿವೆ. ಸಂಸತ್ತಿನಲ್ಲಿ ಹೊಸ ಮಂಡಿಗಳನ್ನು ತೆರೆಯುವ ಬಗ್ಗೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ನಿರ್ಧರಿಸಲಿದೆ. ರೈತ ಮುಖಂಡರು ಈ ಬಗ್ಗೆ ನಿರ್ಧರಿಸಿದ ದಿನ ಟ್ರಾಕ್ಟರ್‌ಗಳು ದೆಹಲಿಯ ಕೇಂದ್ರ ಭಾಗಕ್ಕೆ ತೆರಳಲಿವೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್‌ ನಂದಿಗ್ರಾಮದಲ್ಲಿ ಹೇಳಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮುಖ್ಯ ಯುದ್ಧಭೂಮಿಯಾಗಿ ಮಾರ್ಪಟ್ಟಿರುವ ಸಂದಿಗ್ರಾಮದಲ್ಲಿ ಮಾತನಾಡಿದ ಟಿಕಾಯತ್‌, ಬಿಜೆಪಿ ನೇತೃತ್ವದ ಸರ್ಕಾರ ಕಾರ್ಪೊರೇಟ್‌ಗಳ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದ್ದಾರೆ.

“ಸಂಯುಕ್ತ ಕಿಸಾನ್‌ ಮೋರ್ಚಾ ನಿರ್ಧರಿಸಿದ ದಿನ ಸಂಸತ್ತಿನೆಡೆಗೆ ರೈತರ ಟ್ರಾಕ್ಟರ್‌ಗಳು ಹೊರಡಲಿವೆ. ಅಲ್ಲಿ ಹೊಸ ಮಂಡಿ ತೆರೆಯಲಾಗುವುದು. ಆ ಮಂಡಿಗಳಲ್ಲಿ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ)ಗೆ ಮಾರಾಟ ಮಾಡಲಾಗುತ್ತದೆ. ಅಂದು 3.5 ಲಕ್ಷ ಟ್ರಾಕ್ಟರುಗಳು ಮತ್ತು 25 ಲಕ್ಷ ರೈತರು ದೆಹಲಿಗೆ ಹೊರಡಲಿದ್ದಾರೆ. ಮುಂದಿನ ಟ್ರಾಕ್ಟರ್‌ ಪರೇಡ್‌ ವೇಳೆ ಸಂಸತ್ತಿನಲ್ಲಿ ಬೆಳೆಗಳನ್ನು ಮಾರಾಟ ಮಾಡುವುದು ನಮ್ಮ ಗುರಿಯಾಗಿದೆ” ಎಂದು ಅವರು ಹೇಳಿದ್ದಾರೆ.

ರೈತರು ತಮ್ಮ ಬೆಳೆಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ ಎಂದು ಟಿಕಾಯತ್ ನೆನಪಿಸಿದ್ದಾರೆ. ಹೀಗಾಗಿ ಸಂಸತ್ತಿನಲ್ಲಿ ಮಂಡಿಗಳನ್ನು ತೆರೆಯುವುದು ಅತ್ಯುತ್ತಮ ಎಂದು ನಾನು ಭಾವಿಸುತ್ತೇನೆ. ರೈತ ಹೊರಗಿದ್ದಾನೆ ಮತ್ತು ವ್ಯಾಪಾರಿ ಹೊರಗಿದ್ದಾನೆ, ಖಂಡಿತವಾಗಿಯೂ ಖರೀದಿ ಉತ್ತಮವಾಗಲಿದೆ ಎಂದು ಅವರು ಹೇಳಿದರು.

ಕೃಷಿ ಕಾಯ್ದೆಗಳ ವಿರುದ್ಧ ಕೊಲ್ಕತ್ತಾದಲ್ಲಿ ನಡೆದ ರೈತ ಮಹಾಪಂಚಾಯತ್‌ ನಡೆಸಿದ್ದು, ಇದರಲ್ಲಿ ರಾಕೇಶ್‌ ಟಿಕಾಯತ್‌ ಭಾಗವಹಿಸಿದ್ದರು. ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಚಲಾಯಿಸಬೇಡಿ ಎಂದು ಮತದಾರರಿಗೆ ಟಿಕಾಯತ್‌ ಮನವಿ ಮಾಡಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಮಾರ್ಚ್ 27 ರಿಂದ ಏಪ್ರಿಲ್ 29 ರವರೆಗೆ ಎಂಟು ಹಂತಗಳಲ್ಲಿ ನಡೆಯಲಿದೆ. ಮತ ಎಣಿಕೆ ಮೇ 2 ರಂದು ನಡೆಯಲಿದೆ.

ಇದನ್ನೂ ಓದಿ: ರೈತ ಹೋರಾಟಕ್ಕೆ ಬೇಸಿಗೆ ಕಾವು; ದೆಹಲಿ ಗಡಿಯಲ್ಲಿ ಇಟ್ಟಿಗೆ ಮನೆಗಳನ್ನು ನಿರ್ಮಿಸುತ್ತಿದ್ದಾರೆ ರೈತರು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights