Coronavirus : ಕೊರೋನಾ ಸೋಂಕಿತರ ಸಂಖ್ಯೆ 20, 2 ತಿಂಗಳ ರೇಶನ್‌ ಒಂದೇ ಬಾರಿ ಪೂರೈಕೆ..

ಶನಿವಾರ ಒಂದೇ ದಿನ ಐವರಲ್ಲಿ ಕೊರೋನಾ ವೈರಾಣು ಸೋಂಕು ದೃಢಪಡುವ ಮೂಲಕ ರಾಜ್ಯದಲ್ಲಿ ಮಾರಕ ಸೋಂಕು ತಗುಲಿದವರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ತನ್ನ ಸಂಚಾರನ್ನು ಕಡಿತಗೊಳಿಸಲು ಹಾಗೂ ಅಗತ್ಯ ಸೇವಾದಾರರಿಗೆ ಮಾತ್ರ ಸೀಮಿತಗೊಳಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿರ್ಧರಿಸಿದೆ.

ಇದೆಲ್ಲದರ ನಡುವೆ ಜನರಿಗೆ ಆಹಾರ ಪದಾರ್ಥಗಳ ಪೂರೈಕೆಯಲ್ಲಿ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಎರಡು ತಿಂಗಳ ಪಡಿತರವನ್ನು ಒಮ್ಮೆಲೆ ವಿತರಿಸುವುದಾಗಿ ಸರಕಾರ ಹೇಳಿದೆ.

ಏಪ್ರಿಲ್ ಮತ್ತು ಮೇ ತಿಂಗಳ ಪಡಿತರವನ್ನು ಒಂದೇ ಬಾರಿಗೆ ಏಪ್ರಿಲ್ ಮೊದಲ ವಾರದಲ್ಲಿ ವಿತರಣೆ ಮಾಡಲಾಗುವುದು ಎಂದು ಆಹಾರ ಸಚಿವ ಗೋಪಾಲಯ್ಯ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಜನ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಬೆಂಗಳೂರು ಮೆಟ್ರೊ ರೈಲಿನ ಸಂಚಾರವನ್ನು 31ರವರೆಗೆ ಕಡಿತಗೊಳಿಸಲಾಗಿದ್ದು ಬೆಳಗ್ಗೆ 10ರಿಂದ ಸಂಜೆ 4 ಮತ್ತು ರಾತ್ರಿ 8ರ ನಂತರ  ಸೇವೆ ಅಲಭ್ಯವಾಗಲಿದೆ.

ಅಲ್ಲದೇ ಸರಕಾರಿ ನೌಕರರು, ಅಗತ್ಯ ಸಿಬ್ಬಂದಿ ವರ್ಗ ಮತ್ತು ಅಧಿಕೃತ ಗುರುತು ಚೀಟಿ ಹೊಂದಿದವರಿಗೆ ಮಾತ್ರ ಸಂಚಾರಕ್ಕೆ ಅನುಮತಿ ನೀಡಲಾಗುವುದು ಎಂದು ನಮ್ಮ ಮೆಟ್ರೊ ತಿಳಿಸಿದೆ.

ಇದೆಲ್ಲದರ ಮಡುವೆ ಗೌರಿಬಿದನೂರು, ಮೈಸೂರು ಮತ್ತು ಬೆಂಗಳೂರಿನಲ್ಲಿ ಒಟ್ಟು ಐದು ಮಂದಿಗೆ ಸೋಮಕು ತಗುಲಿರುವುದು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ ಇಪ್ಪತ್ತಕ್ಕೇರಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights