ಜನತಾ ಕರ್ಪ್ಯೂವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ: ಮೋದಿ ಅಸಮಾಧಾನ

ಭಾರತದಲ್ಲಿ 390 ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿ ಎಂಟು ಮಂದಿ ಸಾವನ್ನಪ್ಪಿದ್ದರೂ, ಬಹಳಷ್ಟು ಜನ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಸರ್ಕಾರ ದೇಶಾದ್ಯಂತ ತೀವ್ರ ನಿರ್ಬಂಧಗಳನ್ನು ಹೇರಿದ ನಂತರವೂ ಲಾಕ್‌ಡೌನ್ ಅನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಿನ್ನೆ ಇಡೀ ದಿನ ಜನತಾ ಕರ್ಫ್ಯೂ ಆಚರಿಸುವಂತೆ ಮೋದಿ ಮನವಿ ಮಾಡಿದ್ದರು. ಮನೆಯಿಂದ ಹೊರಗೆ ಬಾರದೇ ಮನೆಯಲ್ಲಿಯೇ ಇದ್ದುಕೊಂಡು ಸಂಜೆ 5 ಗಂಟೆಗೆ ಕಿಟಿಕಿ, ಬಾಲ್ಕನಿಗಳಲ್ಲಿ ನಿಂತು ಚಪ್ಪಾಳೆ ತಟ್ಟುವ ಮೂಲಕ ಕೊರೊನಾ ವಿರುದ್ಧ ಹೋರಾಡುತ್ತಿರುವವರಿಗೆ ಗೌರವ ಸಲ್ಲಿಸಲು ಸೂಚಿಸಿದ್ದರು. ಆದರೆ ದೇಶದ ಒಂದಷ್ಟು ಜನ ಗುಂಪು ಗುಂಪಾಗಿ ಸೇರಿ ರಸ್ತೆಯಲ್ಲಿ, ಬೀದಿಗಳಲ್ಲಿ ಚಪ್ಪಾಳೆ ತಟ್ಟುತ್ತಾ, ಜಾಗಟೆ ಬಡಿಯುತ್ತಾ ಮೆರವಣಿಗೆ ಮತ್ತು ಸಾಮೂಹಿಕ ನೃತ್ಯ ಮಾಡುವ ಮೂಲಕ ಮೋದಿಯವರ ಉದ್ದೇಶವನ್ನೇ ಮಣ್ಣು ಪಾಲು ಮಾಡಿದ್ದರು.

https://www.facebook.com/balu.mk4/videos/2828244957267557/?t=1

ಕರ್ನಾಟಕದ ರಾಜ್ಯಪಾಲರಾದ ವಜುಬಾಯಿವಾಲರವರೂ ಸಹ ಜನಸಮೂಹದೊಂದಿಗೆ ಸೇರಿ ಜಾಗಟೆ ಬಾರಿಸುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು ಜನರ ಟೀಕೆಗೆ ಒಳಗಾಗಿದೆ.

ಭಕ್ತರ ಟೀಮ್ ಲೀಡರ್, our ಗವರ್ನರ್…The great governor of Karnataka

Posted by Somashekar Chalya on Sunday, March 22, 2020

ಈ ನಡುವೆ ಜನರು ನಿರ್ದೇಶನಗಳನ್ನು ಪಾಲಿಸುವಂತೆ ನೋಡಿಕೊಳ್ಳಬೇಕು ಎಂದು ಪ್ರಧಾನಿ ಮೋದಿಯವರು ರಾಜ್ಯಗಳಿಗೆ ಆಗ್ರಹಿಸಿದ್ದಾರೆ. “ಅನೇಕ ಜನರು ಇನ್ನೂ ಲಾಕ್‌ಡೌನ್ ಅನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ದಯವಿಟ್ಟು ನಿಮ್ಮನ್ನು ಉಳಿಸಿ, ನಿಮ್ಮ ಕುಟುಂಬವನ್ನು ಉಳಿಸಿ, ನಿರ್ದೇಶನಗಳನ್ನು ಗಂಭೀರವಾಗಿ ಅನುಸರಿಸಿ. ನಿಯಮಗಳು ಮತ್ತು ಕಾನೂನುಗಳನ್ನು ಪಾಲಿಸುವಂತೆ ನೋಡಿಕೊಳ್ಳಬೇಕೆಂದು ನಾನು ರಾಜ್ಯ ಸರ್ಕಾರಗಳಿಗೆ ವಿನಂತಿಸುತ್ತೇನೆ” ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಸದ್ಯಕ್ಕೆ ಭಾರತದಲ್ಲಿ 82 ಜಿಲ್ಲೆಗಳನ್ನು ಸಂಪೂರ್ಣವಾಗಿ ಲ್ಯಾಕ್‌ಡೌನ್‌ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಇದರ ಸಂಖ್ಯೆ ಹೆಚ್ಚುವ ಸೂಚನೆಯಿದೆ.

Donate

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights