ಮಗುವಿಗೆ ಜನ್ಮ ನೀಡಿದ ಬಾಲ್ಯ ವಿವಾಹಕ್ಕೆ ಗುರಿಯಾದ ಅಪ್ರಾಪ್ತೆ

ಬಾಲ್ಯ ವಿವಾಹಕ್ಕೆ ಗುರಿಯಾಗಿ 14 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲದಲ್ಲಿ ನಡೆದಿದೆ.

ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದ 14 ವರ್ಷದ ಬಾಲಕಿಯೊಬ್ಬಳು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗಿದ್ದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಸಂಬಂಧ ಆಸ್ಪತ್ರೆ ವೈದ್ಯಾಧಿಕಾರಿಗಳು ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ ಪೊಲೀಸ್ ಅಧಿಕಾರಿಗಳು ಬಾಲಕಿಯಿಂದ ಹೇಳಿಕೆ ಪಡೆದಿದ್ದಾರೆ. ಈ ವೇಳೆ ಹೇಳಿಕೆ ನೀಡಿರುವ ಬಾಲಕಿ, ” ನಾನು ಅಪ್ರಾಪ್ತಳಾಗಿದ್ದು, ಈ ವಯಸ್ಸಿನಲ್ಲಿ ವಿವಾಹವಾಗುವುದು ಅಪರಾಧ ಎಂಬುದು ಆಸ್ಪತ್ರೆಗೆ ಬಂದಾಗ ಗೊತ್ತಾಯ್ತು. ನಾನು ವಿದ್ಯಾವಂತಳಲ್ಲ ಹಾಗಾಗಿ ನನಗೆ 18 ವರ್ಷ ತುಂಬುವ ಮುನ್ನ ಮದುವೆಯಾಗಬಾರದು, ತಾಯಿಯಾಗಬಾರದು ಎಂಬುದು ಗೊತ್ತಿರಲಿಲ್ಲ” ಎಂದು ಆಕೆ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾಳೆ.

ಸದ್ಯ ತಾಯಿ,ಮಗುವಿಗೆ ಕೊಳ್ಳೇಗಾಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೈಕೆ ಮಾಡಲಾಗುತ್ತಿದೆ. ಈ ಬಾಲಕಿಯನ್ನು ವಿವಾಹವಾಗಿರುವ ರಮೇಶ್ ಎಂಬಾತನ ಮೇಲೆ ಬಾಲಕಿಯ ಹೇಳಿಕೆ ಆಧರಿಸಿ ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ಪೋಸ್ಕೋ ಕಾಯ್ದೆಯಡಿ ಮೊಕದ್ದಮೆ ದಾಖಲು ಮಾಡಿಕೊಳ್ಳಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights