Cricket : Lock down ನಂತರ ಆಗಸ್ಟ್‌ನಲ್ಲಿ ದಕ್ಷಿಣ ಆಪ್ರಿಕಾ ವಿರದ್ಧ ಸರಣಿಗೆ BCCI ಚಿಂತನೆ..

ಆಗಸ್ಟಿನಲ್ಲಿ ಕಣಕ್ಕಿಳಿಯುತ್ತಾ ಭಾರತ ಕ್ರಿಕೆಟ್ ತಂಡ, ಕರೋನಾ ಸಂಕಟದ ನಂತರ ಮತ್ತೆ ಕ್ರಿಕೆಟ್ ಮೈದಾನದಲ್ಲಿ ಕೆಳಲಿದಿಯಾ ಕಲರವ, ಈ ಎಲ್ಲ ಪ್ರಸ್ನೆಗಳಿಗೆ ಉತ್ತರವನ್ನು ಸಿದ್ದಮಾಡಿಕೊಳ್ಳುತ್ತಿದೆ BCCI.. ದಕ್ಷಿಣ ಆಪ್ರಿಕಾ ವಿರದ್ಧ ಹರಿಣಗಳ ನಾಡಿನಲ್ಲಿ 3 ಪಂದ್ಯಗಳ ಟಿ-20 ಸರಣಿಗೆ ಬಿಸಿಸಿಐ ಚಿಂತನೆ ನಡೆಸಿದೆ..

ಕೊರೋನಾ ಕಾರಣ ಸ್ಥಗಿತಗೊಂಡಿರುವ ಭಾರತದ ಕ್ರಿಕೆಟ್ ಚಟುವಟಿಕೆ ಆಗಸ್ಟ್ ಅಂತ್ಯಕ್ಕೆ ಪುನಾರಾರಂಭಗೊಳ್ಳುವ ಬಗ್ಗೆ ಗುಸುಗುಸು ಕೇಳಿಬರುತ್ತಿದೆ. ಎಲ್ಲ ಅಂದುಕೊಂಡಂತೆ ನಡೆದರೇ ಭಾರತ ಕ್ರಿಕೆಟ್ ತಂಡ ಆಗಸ್ಟ್ ಮಾಸಾಂತ್ಯಕ್ಕೆ ಮೂರು ಪಂದ್ಯಗಳ ಟಿ-20 ಸರಣಿ ಆಡಲು ದಕ್ಷಿಣ ಆಫ್ರಿಕೆಗೆ ತೆರಳಲಿದೆ.

ಬಿಸಿಸಿಐ ಮತ್ತು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಅಧಿಕಾರಿಗಳ ಮಟ್ಟದಲ್ಲಿ ಈ ಕುರಿತು ಮಾತುಕತೆ ನಡೆದಿದ್ದು ಪರಸ್ಪರ ಸಹಮತವೂ ಮೂಡಿದೆ. ಆದರೆ ಎರಡೂ ದೇಶಗಳ ಸರಕಾರಗಳು ತೆಗೆದುಕೊಳ್ಳುವ ನಿಲುವಿನ ಮೇಲೆ ಈ ಸರಣಿಯ ಭವಿಷ್ಯ ಅವಲಂಬಿತವಾಗಿದೆ ಎಂದು ಮೂಲಗಳು ತಿಳಿಸಿವೆ.

ಕೊರೋನಾ ಭೀತಿ ಭಾರತವನ್ನು ಆವರಿಸಿಕೊಳ್ಳುವ ಮುನ್ನ ಟಿ-20 ಸರಣಿ ಆಡಲು ದಕ್ಷಿಣ ಆಫ್ರಿಕಾ ತಂಡ ಭಾರತಕ್ಕೆ ಆಗಮಿಸಿತ್ತು. ಮೊದಲ ಪಂದ್ಯ ಧರ್ಮಶಾಲೆಯಲ್ಲಿ ನಡೆಯಬೇಕಿತ್ತು. ಆದರೆ ಮಳೆಯ ಕಾರಣ ರದ್ದಾಗಿತ್ತು, ಬಳಿಕ ಲಾಕ್‌ಡೌನ್ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ತಂಡ ಕೋಲ್ಕೊತಾ ಮಾರ್ಗವಾಗಿ ತವರಿಗೆ ಮರಳಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಕೊರೋನಾ ಕಾರಣ ಐಪಿಎಲ್ ಸಹ ರದ್ದಾಗಿದೆ. ಎಲ್ಲ ಸರಿ ಹೋಗಿ ವಿಶ್ವಕಪ್ ಟಿ-20 ರದ್ದಾದರೇ ಸೆಪ್ಟೆಂಬರ್‍ ಕೊನೆ ಮತ್ತು ನವೆಂಬರ್‍ ಮೊದಲ ವಾರದಲ್ಲಿ ಐಪಿಎಲ್‌ ನಡೆಸುವ ಬಗ್ಗೆ ಮಾತುಕತೆ ನಡೆದಿದೆ. ಈ ಮಧ್ಯೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ತನ್ನ ನಷ್ಟ ಸರಿದೂಗಿಸಿಕೊಳ್ಳಲು ಭಾರತಕ್ಕೆ ಆಥಿತ್ಯ ವಹಿಸಲು ತುದಿಗಾಲ ಮೇಲೆ ನಿಂತಿದೆ.

ಆದರೆ ಯಾವುದೇ ಕಾರಣಕ್ಕೂ ತನ್ನ ಆಟಗಾರರನ್ನು ಕ್ವಾರಂಟಿನ್ಗೆ ಒಳಪಡಿಸಲಾಗದು ಎಂದು ಭಾರತ ಷರತ್ತು ವಿಧಿಸಿದೆ. ಇದಕ್ಕೆ ಪೂರಕ ವಾತಾವರಣ ಉಂಟಾದಲ್ಲಿ ಮಾತ್ರ ಕೊಹ್ಲಿ ಬಳಗ ಹರಿಣಗಳ ನಾಡಲ್ಲಿ ಸೆಣಸಲಿದೆ. ಭಾರತದಲ್ಲಿ ಇನ್ನೂ ಲಾಕ್‌ಡೌನ್ ಮುಂದುವರಿದಿದ್ದು ವಿದೇಶಿ ವಿಮಾನ ಯಾನ ಸ್ಥಗಿತಗೊಂಡಿದೆ. ಅತ್ತ ದಕ್ಷಿಣ ಆಫ್ರಿಕಾದಲ್ಲಿ ಸಹ ಮೂರನೇ ಸ್ತರದ ಲಾಕ್‌ಡೌನ್ ಚಾಲ್ತಿಯಲ್ಲಿದೆ. ಈ ನಿರ್ಬಂಧಗಳು ಸಡಿಲಗೊಂಡರೆ ಮಾತ್ರ ಎರಡೂ ದೇಶಗಳ ಕ್ರಿಕೆಟ್ ಅಭಿಮಾನಿಗಳು ರೋಚಕ ಸರಣಿಯನ್ನು ಎದಿರು ನೋಡಬಹುದಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights