ಗಂಡನ ಮೇಲೆ ಕೋಪ: ಕುದಿಯುವ ನೀರಿನಲ್ಲಿ ಮುಳುಗಿಸಿ ಮಗುವನ್ನು ಕೊಂದ ಮಲತಾಯಿ!

ಗಂಡನ ಮೇಲಿನ ಕೋಪದಿಂದ ಮತಲಾಯಿಯೊಬ್ಬಳು 2 ವರ್ಷದ ಮಗುವನ್ನು ಬಿಸಿ ನೀರು ತುಂಬಿದ ಬಾತ್‌ಟನ್‌ನಲ್ಲಿ ಹಾಕಿ ಕೊಂದಿರುವ ಘಟನೆ ಜೋರ್ಡಾನ್‌ನಲ್ಲಿ ನಡೆದಿದ್ದು, ಆಕೆಗೆ ಅಲ್ಲಿನ ಸುಪ್ರೀಂ ಕೋರ್ಟ್‌ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಮೊದಲ ಪತ್ನಿಗೆ 4 ವರ್ಷದ ಹಾಗೂ 2 ವರ್ಷದ ಇಬ್ಬರು ಮಕ್ಕಳಿದ್ದರು. ಆಕೆ ಸಾವನ್ನಪ್ಪಿದ ನಂತರ  ಮಕ್ಕಳನ್ನು ಸಾಕುವ ವಿಚಾರವಾಗಿ 2ನೇ ಹೆಂಡತಿ ಗಂಡನ ಜೊತೆ ಜಗಳವಾಡಿದ್ದಾಳೆ. ತನ್ನೊಂದಿಗೆ ಜಗಳವಾಡಿದ ಪತಿಯ ಮೇಲೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ 2 ವರ್ಷದ ಪುಟ್ಟ ಮಗುವನ್ನು ಕೊಂದಿದ್ದಾಳೆ. ಆಕೆಯ ಹೆಸರನ್ನು ಬಹಿರಂಗ ಪಡಿಸಲಾಗಿಲ್ಲ.

ಕುದಿಯುವ ನೀರನ್ನು ಬಾತ್‌ಟಬ್‌ನಲ್ಲಿ ಸುರಿದು 2 ವರ್ಷದ ಬಾಲಕನನ್ನು ಅದರೊಳಗೆ ಹಾಕಿ ಕೊಂದಿರುವುದನ್ನುಆಕೆ ಒಪ್ಪಿಕೊಂಡಿದ್ದಾಳೆ. ಪುಟ್ಟ ಮಗು ಕಿರುಚಲು ಪ್ರಾರಂಭಿಸಿದಾಗ ಆಕೆ ಹೊರತೆಗೆದಿದ್ದಾಳೆ. ಸುಟ್ಟಗಾಯಗಳಿಂದ ಬಳಲುತ್ತಿದ್ದ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ದರೂ, 15 ದಿನಗಳ ನಂತರ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ

2019ರಲ್ಲಿ ಆಕೆಗೆ ಕೆಳ ಹಂತದ ನ್ಯಾಯಾಲಯ 20 ವರ್ಷಗಳ ಕಾಲ ಜೈಲು ಶಿಕ್ಷೆ ನೀಡಿತ್ತು. ಆಕೆಯ ಪರ ವಕೀಲರು ಸುಪ್ರೀಂಕೋರ್ಟ್‌ನಲ್ಲಿ ಶಿಕ್ಷೆಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಜೋರ್ಡಾನ್‌ ಸುಪ್ರೀಂಕೋರ್ಟ್‌ ಕೂಡ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದು, 20 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಇದನ್ನೂ ಓದಿ: ಮಹಿಳೆ ಮೇಲೆ ಸಬ್‌ ಇನ್ಸ್‌ಪೆಕ್ಟರ್‌ನಿಂದ ಅತ್ಯಾಚಾರಕ್ಕೆ ಯತ್ನ: ಆರೋಪಿ ಎಸ್‌ಐ ಅಮಾನತು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights