ಮಹಿಳೆ ಮೇಲೆ ಸಬ್‌ ಇನ್ಸ್‌ಪೆಕ್ಟರ್‌ನಿಂದ ಅತ್ಯಾಚಾರಕ್ಕೆ ಯತ್ನ: ಆರೋಪಿ ಎಸ್‌ಐ ಅಮಾನತು!

ಅತ್ಯಾಚಾರಗಳ ರಾಜಧಾನಿ ಎಂಬ ಕುಖ್ಯಾತಿಗೆ ಉತ್ತರ ಪ್ರದೇಶ ರಾಜ್ಯವು ಹೆಸರಾಗಿದೆ. ರಾಜ್ಯದಲ್ಲಿ ಅತ್ಯಾಚಾರಗಳು ಹೆಚ್ಚುತ್ತಲೇ ಇದ್ದು, ಇದೀಗ ರಕ್ಷಕರಾಗಬೇಕಿದ್ದ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್ (ಎಸ್‌ಐ)‌ ಒಬ್ಬರು ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಬಿರ್ಖೇರಾ ಪೊಲೀಸ್‌ ಠಾಣೆಯಲ್ಲಿ ನಡೆದಿದ್ದು, ಆರೋಪದ ಮೇಲೆ ಸಬ್‌ ಇನ್ಸ್‌ಪೆಕ್ಟರ್‌ಅನ್ನು ಅಮಾನತು ಮಾಡಲಾಗಿದೆ.

ಫೆಬ್ರವರಿ 03 ರಂದು 29 ವರ್ಷದ ಮಹಿಳೆ ದೂರು ನೀಡಿದ್ದು, ತನಗೆ ಮೊಬೈಲ್‌ನಲ್ಲಿ ಎಸ್‌ಐ ರಾಮ್ ಗೋಪಾಲ್ ಅಶ್ಲೀಲ ಕಮೆಂಟ್‌ಗಳನ್ನು ಕಳಿಸುತ್ತಿದ್ದರು. ಕಾಣೆಯಾಗಿದ್ದ ಆಕೆಯ ತಮ್ಮನನ್ನು ಹುಡುಕಿಕೊಡುದಾಗಿ ಹೇಳಿ ಫ್ಲಾಟ್‌ ಒಂದಕ್ಕೆ ತನ್ನನ್ನು ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದರು. ತಾವು ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾಗಿ ವಿವರಿಸಿದ್ದಾರೆ. ದೂರಿನ ಆಧಾರದ ಮೇಲೆ ಎಸ್‌ಐ ವಿರುದ್ಧ ಫೆಬ್ರವರಿ 05 ರಂದು ಎಫ್‌ಐಆರ್‌ ದಾಖಲಿಸಿರುವುದಾಗಿ ಎಸ್‌ಪಿ ಜೈ ಪ್ರಕಾಶ್‌ ಯಾದವ್‌ ತಿಳಿಸಿದ್ದಾರೆ ಎಂದು ಐಎಎನ್ಎಸ್ ವರದಿ ಮಾಡಿದೆ.

15 ವರ್ಷಗಳ ಹಿಂದೆ ಆಕೆಯ ಪೋಷಕರು ತೀರಿಕೊಂಡಿದ್ದರು. ಅವರ ಸಾವಿಗೂ ಮುನ್ನ ಆಕೆಯ ಮಾನಸಿಕ ಅಸ್ವಸ್ಥ ಸಹೋದರನ ಹೆಸರಿನಲ್ಲಿ ತಮ್ಮ ಜಮೀನನ್ನು ವಿಲ್ ಬರೆದುಕೊಟ್ಟಿದ್ದರು. ಈ ಹಿನ್ನೆಲೆ ಸಹೋದರನ ಹಿರಿಯ ಅಕ್ಕ ಜಮೀನು ಕಬಳಿಸುವ ಆಸೆಯಿಂದ ಆತನನ್ನು ತಮ್ಮ ಮನೆಯಲ್ಲೇ ಇಟ್ಟುಕೊಂಡಿದ್ದರು ಎಂದು ಆರೋಪಿಸಿ ಸಂತ್ರಸ್ತ ಮಹಿಳೆ ತಮ್ಮ ಸಹೋದರಿಯ ವಿರುದ್ಧ ಬರ್ಖೇರಾ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದರು.

ಈ ವೇಳೆ ಆಕೆ ಫೋನ್‌ ನಂಬರ್‌ ಪಡೆದುಕೊಂಡಿದ್ದ ಆರೋಪಿ ಎಸ್‌ಐ, ಆಕೆಗೆ ರಾತ್ರಿ ವೇಳೆ ಅಶ್ಲೀಲ ಮೆಸೇಜ್‌ ಕಳಿಸುತ್ತಿದ್ದ. ಫೆಬ್ರವರಿ 02ರಂದು ಆಕೆಯ ಅಕ್ಕನ ಮನೆಯಿಂದ ಸಹೋದರನನ್ನು ಕರೆತರಲು ತಮ್ಮ ಜೊತೆ ಬರಬೇಕು ಎಂದು ಹೇಳಿದ್ದ ಎಸ್‌ಐ, ಲಿಖಿತ ದೂರು ನೀಡಲು ತನ್ನೊಂದಿಗೆ ಪಟೇಲ್ ನಗರದ ಫ್ಲ್ಯಾಟ್​ಗೆ ಹೋಗಬೇಕೆಂದು ಕರೆದೊಯ್ದಿದ್ದರು. ಫ್ಲಾಟ್‌ನಲ್ಲಿ ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸದರು ಎಂದು ಮಹಿಳೆ ದೂರಿನಲ್ಲಿ ವಿವರಿಸಿರುವುದಾಗಿ ಬಾರ್ಖೇರಾ ಎಸ್ಎಚ್ಒ ವೀರೇಶ್ ಕುಮಾರ್ ಹೇಳಿದ್ದಾರೆ.

ಎಸ್‌ಐ ರಾಮ್ ಗೋಪಾಲ್ ವಿರುದ್ಧ ತನಿಖೆ ಅಂತ್ಯವಾಗುವವರೆಗೂ ಅವರನ್ನು ಅಮಾನತುಗೊಳಿಸಿರುವುದಾಗಿ ಎಂದು ಎಸ್‌ಪಿ ಜೈ ಪ್ರಕಾಶ್ ಯಾದವ್ ತಿಳಿಸಿದ್ದಾರೆ.

ಇದನ್ನೂ ಓದಿ: ಸಮೀಕ್ಷೆ: ಅಮೆರಿಕಾದಲ್ಲಿರುವ 61% ಭಾರತೀಯ ಇಂಜಿನಿಯರ್‌ಗಳು ಮೋದಿಯನ್ನು ಬೆಂಬಲಿಸುತ್ತಾರೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights