FACT CHECK | ಕ್ರಿಸ್ಮಸ್ ಹಬ್ಬಕ್ಕೆ ಪ್ಲೆಕಾರ್ಡ್ ಹಿಡಿದು ಶುಭಾಶಯ ಕೋರಿದ್ರಾ ರಾಹುಲ್ ಮತ್ತು ಪ್ರಿಯಾಂಕ ಗಾಂಧಿ
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಮೂವರು ಸೇರಿ “ಮೆರ್ರಿ ಕ್ರಿಸ್ಮಸ್” ಎಂಬ ಫಲಕಗಳನ್ನು ಹಿಡಿದಿರುವ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು, ಹಿಂದೂ ಹಬ್ಬಗಳಿಗೆ ಶುಭಾಶಯಗಳನ್ನು ಕೋರದವರು ಕ್ರಿಸ್ಮಸ್‌ಗೆ ಮಾತ್ರ ಶುಭ ಕೋರಿದ್ದಾರೆ ಎಂದು ಆರೋಪಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಈ ಪೋಟೊವನ್ನು ಹಂಚಿಕೊಳ್ಳುತ್ತಾ “ನೀವು ಎಂದಾದರೂ ಅವರ ಹೋಳಿ, ದೀಪಾವಳಿ ಅಥವಾ ರಕ್ಷಾಬಂಧನಕ್ಕೆ ಶುಭಾಶಯ ಕೋರಿರುವ ಚಿತ್ರವನ್ನು ನೋಡಿದ್ದರೆ , ದಯವಿಟ್ಟು ಹೇಳಿ ಸ್ನೇಹಿತರೇ…” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಮೇಲಿನ ಪೋಸ್ಟ್ ಅನ್ನು ಇಲ್ಲಿ ನೋಡಬಹುದು (ಆರ್ಕೈವ್). ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಫೋಟೊವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಈ ಚಿತ್ರವನ್ನು ಅಧಿಕೃತವಾಗಿ ಹಂಚಿಕೊಂಡಿರುವ ಕುರಿತು ಯಾವುದೇ ವಿಶ್ವಾಸರ್ಹ ಮಾಹಿತಿಗಳು ಲಭ್ಯವಾಗಿಲ್ಲ. ಇದಲ್ಲದೆ, ಸೋನಿಯಾ, ರಾಹುಲ್ ಅಥವಾ ಪ್ರಿಯಾಂಕಾ ಗಾಂಧಿ ಅವರ ಸೋಶಿಯಲ್ ಮೀಡಿಯಾ ಅಕೌಂಟ್‌ಗಳಲ್ಲಿಯೂ ವೈರಲ್ ಚಿತ್ರಕ್ಕೆ ಸಂಬಂಧಿಸಿದಂತೆ ಯಾವುದೇ ಫೋಟೊವನ್ನು ಹಂಚಿಕೊಂಡ ಹಂಚಿಕೊಂಡಿಲ್ಲ.

ಪೋಟೋವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ AI ಸೂಚಿಸುವ, ಮುಖಗಳು ಮತ್ತು ಬಟ್ಟೆಗಳಲ್ಲಿ ಅಸ್ವಾಭಾವಿಕವಾಗಿ ನಯವಾದ ವಿನ್ಯಾಸಗಳು, ಕೈ ಬೆರಳು ಮತ್ತು ಪಠ್ಯದ ವಿನ್ಯಾಸದಲ್ಲಿ ಹಲವು ದೋಷಗಳು ಕಾಣಸಿಗುತ್ತವೆ.

ಎಕ್ಸ್ಎಐ ಅಭಿವೃದ್ಧಿಪಡಿಸಿದ ಜೆನೆರೇಟಿವ್ ಎಐ ಪ್ಲಾಟ್ಫಾರ್ಮ್‌ಗೆ ಲಿಂಕ್ ಮಾಡಲಾದ “ಗೋಕ್” ಎಂಬ ವಾಟರ್ಮಾರ್ಕ್ ಒಂದು ಚಿತ್ರದ ಕೆಳ-ಬಲ ಮೂಲೆಯಲ್ಲಿ ಗೋಚರಿಸುತ್ತದೆ. ಎಐ ಉಪಕರಣಗಳನ್ನು ಬಳಸಿಕೊಂಡು ಚಿತ್ರವನ್ನು ರಚಿಸಲಾಗಿದೆ ಎಂಬುದಕ್ಕೆ ಇದು ಸ್ಪಷ್ಟ ಪುರಾವೆಗಳನ್ನು ಒದಗಿಸುತ್ತದೆ.

ಹೈವ್ ಮೊಡರೇಶನ್ ಮತ್ತು ಟ್ರೂಮೀಡಿಯಾದಂತಹ ಸುಧಾರಿತ ಎಐ ಪತ್ತೆ ಸಾಧನಗಳನ್ನು ಬಳಸಿಕೊಂಡು, ನಾವು ಚಿತ್ರವನ್ನು ಮತ್ತಷ್ಟು ಪರಿಶೀಲಿಸಿದಾಗ, ಎರಡೂ ಉಪಕರಣಗಳು ಚಿತ್ರವನ್ನು ಎಐ-ರಚಿತ ಎಂದು ಗುರುತಿಸಿವೆ ಮತ್ತು ದೃಢಪಡಿಸುತ್ತದೆ. (ವಿವರವಾದ ವಿಶ್ಲೇಷಣೆಯನ್ನು ಇಲ್ಲಿ ನೋಡಬಹುದು)

ಒಟ್ಟಾರೆಯಾಗಿ ಹೇಳುವುದಾದರೆ, ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಮೆರ್ರಿ ಕ್ರಿಸ್ಮಸ್ ಎಂಬ ಫಲಕಗಳನ್ನು ಹಿಡಿದಿರುವ ವೈರಲ್ ಚಿತ್ರವು ಎಐ (ಕೃತಕ ಬುದ್ದಿಮತ್ತೆ) ನಿಂದ ರಚಿತವಾಗಿದ್ದು, ಸುಳ್ಳು ಮತ್ತು ಕೋಮು ನಿರೂಪಣೆಯೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಸೋನಿಯಾ ಗಾಂಧಿ ಕಾಲಿಗೆ ನಮಸ್ಕರಿಸಿದ್ರಾ ಡಾ. ಮನಮೋಹನ್ ಸಿಂಗ್?

