FACT CHECK | ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ನಡೆದ ಉತ್ಖನನದಲ್ಲಿ ಮಸೀದಿ ಪತ್ತೆಯಾಗಿದ್ದು ನಿಜವೇ?

ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ನಡೆದ ಉತ್ಖನನದ ಸಮಯದಲ್ಲಿ ಮಸೀದಿ ಪತ್ತೆಯಾಗಿದೆ ಎಂಬ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಉತ್ತರ ಪ್ರದೇಶದ ಸಂಭಾಲ್‌ನಲ್ಲಿ 36 ವರ್ಷಗಳ ನಂತರ ಹನುಮಾನ್ ಜಿ ದೇವಸ್ಥಾನದ ಬೀಗವನ್ನು ತೆರೆದ ನಂತರ, ಸುತ್ತಮುತ್ತಲಿನ ಪ್ರದೇಶದಲ್ಲಿ ಉತ್ಖನನವನ್ನು ಪ್ರಾರಂಭಿಸಲಾಗಿದೆ. ಇದೀಗ ನೆಲದಡಿಯಲ್ಲಿ ಬೃಹತ್ ರಚನೆಯೊಂದು ಪತ್ತೆಯಾಗಿದೆ. ಉತ್ಖನನದ ವೇಳೆ ಪತ್ತೆಯಾದ ರಚನೆಯ ಫೋಟೋ, ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗುತ್ತಿದ್ದು, ಇದು ಮಸೀದಿ ಎಂದು ಅನೇಕರು ಹೇಳುತ್ತಿದ್ದಾರೆ.

 

ಎಕ್ಸ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, ಸಂಭಾಲ್‌ನಲ್ಲಿ ಅಗೆಯುವ ಮೂಲಕ ದೇವಾಲಯವನ್ನು ಹುಡುಕಲಾಗುತ್ತಿದೆ. ಆದರೆ ನೆಲದಡಿಯಲ್ಲಿ ಮಸೀದಿ ಮಾತ್ರ ಕಂಡುಬಂದಿದೆ ಎಂದು ಬರೆದಿದ್ದಾರೆ. ಇದೇ ದೇವಸ್ಥಾನವಾಗಿದ್ದರೆ ಇಷ್ಟೊತ್ತಿಗೆ ಇಲ್ಲಿ ಪೂಜೆ ಶುರುವಾಗುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.

ಇದೇ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿರುವುದನ್ನು ನೀವು ಇಲ್ಲಿ ನೋಡಬಹುದು. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಉತ್ತರ ಪ್ರದೇಶದ ಸಿಂಬಲ್‌ನಲ್ಲಿ  ಉತ್ಕನನ ನಡೆಸುವ ವೇಳೆ ಮಸೀದಿ ಪತ್ತೆಯಾಗಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ಅನ್ನು ಪರಿಶೀಲಿಸಿದಾಗ, ವೈರಲ್ ಹೇಳಿಕೆ ಸುಳ್ಳು ಎಂದು ವಿಶ್ವಾಸ್‌ ನ್ಯೂಸ್ ಫ್ಯಾಕ್ಟ್‌ಚೆಕ್ ವರದಿ ಪ್ರಕಟಿಸಿದೆ.

ಡಿಸೆಂಬರ್ 27 ರಂದು ‘ಸಂಭಾಲ್ ಐತಿಹಾಸಿಕ ಜಿಲ್ಲೆ‘ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ. ಇದರಲ್ಲಿ ವೈರಲ್ ಪೋಸ್ಟ್‌ನಲ್ಲಿ ನೀಡಲಾದ ಎರಡು ಚಿತ್ರಗಳನ್ನು ನೋಡಬಹುದು. ವಿಡಿಯೋದಲ್ಲಿ ಕಂಡುಬರುವ ರಚನೆಯು ಇದನ್ನು ಹೋಲುತ್ತದೆ.  ಈ ರಚನೆಯನ್ನು ಸಂಭಾಲ್‌ನ ಚಂಡೌಸಿಯಲ್ಲಿ ಕಂಡುಬರುವ ಮೆಟ್ಟಿಲುಬಾವಿ ಎಂದು ವಿವರಿಸಲಾಗಿದೆ. ಮೆಟ್ಟಿಲುಬಾವಿಯ ಒಂದು ಮಹಡಿಯನ್ನು ಅಗೆಯಲಾಗಿದ್ದು, ಕೆಳಗೆ ಇನ್ನೂ ಎರಡು ಮಹಡಿಗಳಿವೆ ಎಂದು ವೀಡಿಯೊ ಸುದ್ದಿಯಲ್ಲಿ ಹೇಳಲಾಗಿದೆ. 1857 ರಲ್ಲಿ ಬಿಲಾರಿಯ ರಾಣಿ ಸುರೇಂದ್ರಬಾಲಾ ಅವರು ಮೆಟ್ಟಿಲುಬಾವಿಯನ್ನು ನಿರ್ಮಿಸಿದರು. ಇದರಲ್ಲಿ ಎಲ್ಲಿಯೂ ಈ ರಚನೆಯನ್ನು ಮಸೀದಿ ಎಂದು ವಿವರಿಸಲಾಗಿಲ್ಲ.

ಪೋಸ್ಟ್‌ನಲ್ಲಿ ನೀಡಲಾದ ವಿಡಿಯೋದ ಸ್ಕ್ರೀನ್‌ಶಾಟ್ ಅನ್ನು ತೆಗೆದುಕೊಂಡ ಅದನ್ನು ಗೂಗಲ್ ಲೆನ್ಸ್‌ನಲ್ಲಿ ಸರ್ಚ್ ಮಾಡಿದಾಗ, ವಿಡಿಯೋವನ್ನು ಲಲಿತಭಟ್ಟೋ ಅಫಿಷಿಯಲ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿರುವುದು  ಕಂಡುಬಂದಿದೆ. ಡಿಸೆಂಬರ್ 26 ರಂದು ಅಪ್‌ಲೋಡ್ ಮಾಡಿದ ವಿಡಿಯೋದಲ್ಲಿ, ಈ ರಚನೆಯನ್ನು ಮೆಟ್ಟಿಲುಬಾವಿ ಎಂದು ವಿವರಿಸಲಾಗಿದೆ.

ಸಂಭಾಲ್‌ನಲ್ಲಿ ಉತ್ಖನನ ನಡೆಸಲಾದ ಪ್ರದೇಶದ ಹೆಸರು ಚಂಡೌಸಿ. ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ (ಎಎಸ್‌ಐ) ಚಂಡೌಸಿಯಲ್ಲಿ ಉತ್ಖನನ ಮಾಡುತ್ತಿದೆ ಎಂಬ ಸುದ್ದಿಯನ್ನು ಅನೇಕ ಮಾಧ್ಯಮಗಳು ಪ್ರಕಟಿಸಿವೆ. ಡಿಸೆಂಬರ್ 25 ರಂದು ಆಜ್ ತಕ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಸುದ್ದಿ ಪ್ರಕಾರ, ಸಂಭಾಲ್‌ನ ಚಂದೌಸಿಯಲ್ಲಿ ಉತ್ಖನನದ ಸಮಯದಲ್ಲಿ ಐತಿಹಾಸಿಕ ಮೆಟ್ಟಿಲುಬಾವಿಯ ಮೊದಲ ಮಹಡಿ ಪತ್ತೆಯಾಗಿದೆ. ಅದನ್ನು ಮಣ್ಣು ಮತ್ತು ಕಸದ ರಾಶಿಯ ಅಡಿಯಲ್ಲಿ ಪ್ತ್ಎಯಾಗಿದೆ ಎಂದು ಉಲ್ಲೇಖಿಸಿದೆ.

vishvasnews

ಇದರಲ್ಲಿರುವ ಮಾಹಿತಿಯ ಪ್ರಕಾರ, ಸಂಭಾಲ್‌ನ ಚಂಡೌಸಿಯಲ್ಲಿ ಉತ್ಖನನದ ಸಮಯದಲ್ಲಿ ಪುರಾತನ ಮೆಟ್ಟಿಲುಬಾವಿ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಈ ಮೆಟ್ಟಿಲುಬಾವಿ ಹಲವು ದಶಕಗಳಿಂದ ಮಣ್ಣು ಮತ್ತು ಕಸದಡಿಯಲ್ಲಿ ಹೂತುಹೋಗಿತ್ತು. ಇದು ಚಂಡೌಸಿಯ ರಾಜ ಆತ್ಮಾರಾಮ್ ಅವರ ಮೆಟ್ಟಿಲುಬಾವಿ ಎಂದು ಹೇಳಲಾಗಿದೆ, ಇದನ್ನು ಸ್ಥಳೀಯ ಜನರು ರಾಣಿ ಸುರೇಂದ್ರ ಬಾಲಿಯ ಮೆಟ್ಟಿಲುಬಾವಿ ಎಂದು ಕರೆಯುತ್ತಾರೆ. ಸ್ಥಳೀಯ ಆಡಳಿತದ ಉತ್ಖನನ ಇನ್ನೂ ನಡೆಯುತ್ತಿದೆ ಎಂಬ ಮಾಹಿತಿ ಇದರಲ್ಲಿದೆ.

ಸದ್ಯ ಸಂಭಾಲ್‌ನಲ್ಲಿ ಉತ್ಖನನದ ಕೆಲಸ ಇನ್ನೂ ನಡೆಯುತ್ತಿದೆ. ಅಲ್ಲಿ ದೇವಸ್ಥಾನ ಇರುವ ಸಾಧ್ಯತೆಯಿಂದ ಉತ್ಖನನ ಕಾರ್ಯ ಆರಂಭಿಸಿದ್ದು ನಿಜ, ಆದರೆ ಮಸೀದಿ ಸಿಕ್ಕಿದೆ ಎಂಬುದು ಸಂಪೂರ್ಣ ತಪ್ಪು. ನಮ್ಮ ತನಿಖೆಯಲ್ಲಿ, ಸಂಭಾಲ್‌ನಲ್ಲಿ ನಡೆಯುತ್ತಿರುವ ಉತ್ಖನನದಲ್ಲಿ ಮಸೀದಿ ಕಂಡುಬಂದಿದೆ ಎಂಬ ಹೇಳಿಕೆ ಸುಳ್ಳು ಎಂದು ಕಂಡುಬಂದಿದೆ.

ಉತ್ತರ ಪ್ರದೇಶದ ಸಂಭಾಲ್ ನಲ್ಲಿ ಉತ್ಖನನದ ವೇಳೆ ಎರಡು ದಿನಗಳ ಹಿಂದೆಯಷ್ಟೆ ಪುರಾತನ ಬಾವಿಯೊಂದು ಪತ್ತೆಯಾಗಿದೆ. ಇದನ್ನು ಮೃತ್ಯು ಕೂಪ್ ಅಂದರೆ ‘ಸಾವಿನ ಬಾವಿ’ ಎಂದು ಕರೆಯಲಾಗುತ್ತಿದೆ. ಈ ಪುರಾತನ ಬಾವಿಯು ಸದರ್ ಕೊತ್ವಾಲಿ ಪ್ರದೇಶದ ಸರ್ತಾಲ್ ಹೊರಠಾಣೆ ಬಳಿ ಕಂಡುಬಂದಿದೆ. ಡಿ.ಎಂ.ರಾಜೇಂದ್ರ ಪೇಸಿಯವರ ಸೂಚನೆ ಮೇರೆಗೆ ಬಾವಿಯನ್ನು ಅಗೆಯಲಾಗುತ್ತಿದೆ. 19 ಬಾವಿಗಳಲ್ಲಿ ಈ ಬಾವಿಯನ್ನು ವಿಶೇಷ ಬಾವಿ ಎಂದು ಪರಿಗಣಿಸಲಾಗಿದೆ. ಬಾವಿ ಪತ್ತೆಯಾದ ಸ್ಥಳವು ಕಲ್ಕಿ ವಿಷ್ಣು ದೇವಾಲಯದಿಂದ 200 ಮೀಟರ್ ದೂರದಲ್ಲಿದೆ. ಈ ಬಾವಿಯನ್ನು 30 ವರ್ಷಗಳ ಹಿಂದೆ ಅತಿಕ್ರಮಣ ಮಾಡಲಾಗಿದ್ದು, ಸುತ್ತಮುತ್ತಲಿನ ಜನರು ಕಸ ಸುರಿದು ಮುಚ್ಚಿದ್ದರು.

ಸಂಭಾಲ್ ಶಾಹಿ ಜಾಮಾ ಮಸೀದಿಯಿಂದ ಸುಮಾರು 150 ಮೆಟ್ಟಿಲು ದೂರದಲ್ಲಿ ಸಾವಿನ ಬಾವಿ ಪತ್ತೆಯಾಗಿದೆ. ಈ ಬಾವಿ ಪತ್ತೆಯಾದ ಪ್ರದೇಶವು ಹಿಂದೂ ಪ್ರಾಬಲ್ಯದ ಪ್ರದೇಶವಾಗಿದೆ. 19 ಬಾವಿಗಳಲ್ಲಿ ಈ ಬಾವಿಯೂ ಒಂದು ಎಂದು ಸ್ಥಳೀಯರು ಹೇಳುತ್ತಾರೆ. ಮೊದಮೊದಲು ಇಲ್ಲಿಯ ನೀರು ಕುಡಿದು ಭಕ್ತರು ಪೂಜೆಗೆ ಮುಂದಾಗುತ್ತಿದ್ದರು. ಬಾವಿಯ ಪುರಸಭೆಯ ತಂಡವು ಬಾವಿಯನ್ನು ಸ್ವಚ್ಛಗೊಳಿಸುವಲ್ಲಿ ನಿರತವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಂಭಾಲ್‌ನಲ್ಲಿ ನಡೆದ ಉತ್ಖನನದ ವೇಳೆ ಮಸೀದಿ ಪತ್ತೆಯಾಗಿದೆ ಎಂಬುದು ಸುಳ್ಳು. ಚಂಡೌಸಿಯಲ್ಲಿ ಶೋಧ ನಡೆಸಿದಾಗ ಬಿಲಾರಿ ರಾಣಿಯ ಮೃತ್ಯು ಕೂಪ್ (ಸಾವಿನ ಬಾವಿ) ಪತ್ತೆಯಾಗಿದ್ದು, ಅದರ ಉತ್ಖನನ ಕಾರ್ಯ ನಡೆಯುತ್ತಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಕ್ರಿಸ್ಮಸ್ ಹಬ್ಬಕ್ಕೆ ಪ್ಲೆಕಾರ್ಡ್ ಹಿಡಿದು ಶುಭಾಶಯ ಕೋರಿದ್ರಾ ರಾಹುಲ್ ಮತ್ತು ಪ್ರಿಯಾಂಕ ಗಾಂಧಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights