FACT CHECK | ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೂ ಚಾಲೆಂಜ್‌ ವೋಟ್ ಹಾಕಬಹುದೇ?

ದೇಶವು ಲೋಕಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಹೊತ್ತಲ್ಲಿ, “ಮತದಾರರ ಹಕ್ಕುಗಳು”, “ಸವಾಲು ಮತ” ಅಥವಾ “ಚಾಲೆಂಜ್‌ ವೋಟ್” ಕುರಿತಾದ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಈ ಪೋಸ್ಟ್‌ ಪ್ರಕಾರ ಒಬ್ಬರು ಮತದಾನ ಬೂತಿಗೆ ತೆರಳಿದಾಗ ಹಾಗೂ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲವೆಂದು ತಿಳಿದಾಗ ಆಧಾರ್‌ ಕಾರ್ಡ್‌ ಅಥವಾ ಮತದಾರರ ಗುರುತಿನ ಚೀಟಿ ತೋರಿಸಿ ಸೆಕ್ಷನ್‌ 49ಎ ಅಡಿಯಲ್ಲಿ ʼಚಾಲೆಂಜ್‌ ವೋಟ್‌ʼ ಮೂಲಕ ಮತದಾನಕ್ಕಾಗಿ ಕೇಳಬಹುದು.

ಅಷ್ಟೇ ಅಲ್ಲದೆ ಒಬ್ಬರ ಹೆಸರಿನಲ್ಲಿ ಮತವನ್ನು  ಬೇರೊಬ್ಬರು ಚಲಾಯಿಸಿದ್ದರೆ ಮತ ಚಲಾಯಿಸಲು “ಟೆಂಡರ್‌ ವೋಟ್‌”ಗೆ ಕೇಳಬಹುದು ಎಂದೂ ಈ ವೈರಲ್‌ ಸಂದೇಶದಲ್ಲಿ ಹೇಳಲಾಗಿದೆ. ಯಾವುದೇ ಬೂತಿನಲ್ಲಿ ಶೇ 14ಕ್ಕಿಂತ ಹೆಚ್ಚು ಟೆಂಡರ್‌ ಮತಗಳು ಚಲಾವಣೆಯಾಗಿದ್ದಲ್ಲಿ ಅಂತಹ ಬೂತ್‌ಗಳಲ್ಲಿ ಮರುಮತದಾನ ಮಾಡಬಹುದಾಗಿದೆ ಎಂದೂ ವೈರಲ್‌ ಸಂದೇಶ ಹೇಳಲಾಗಿದೆ.

ಹಾಗಿದ್ದರೆ ವೈರಲ್ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ?  ಚಾಲೆಂಜ್‌ ವೋಟ್ ಪದ್ದತಿಯನ್ನು ಭಾರತೀಯ ಚುನಾವಣಾ ಆಯೋಗ ಜಾರಿಗೆ ತಂದಿರುವುದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಮೊದಲಿಗೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲದಿದ್ದರೆ ‘ಚಾಲೆಂಜ್ ವೋಟ್’ಮಾಡಬಹುದು ಎಂಬುದರ ಕುರಿತಾಗಿ ತಿಳಿದುಕೊಳ್ಳಲು ಗೂಗಲ್ ಸರ್ಚ್ ಮಾಡಿದಾಗ, “ಚಾಲೆಂಜ್‌ ವೋಟ್”‌ಕುರಿತು ಉಲ್ಲಖವಿದ್ದರು ವೈರಲ್ ಪೋಸ್ಟ್‌ನಲ್ಲಿ ತಿಳಿಸಿರುವಂತೆ ಮತದಾರರ ಹೆಸರು ಪಟ್ಟಿಯಲ್ಲಿ ಇಲ್ಲದಿದ್ದರೂ ಮತ ಚಲಾಯಿಸಬಹುದು ಎಂಬುದು ಸುಳ್ಳು.

ಒಬ್ಬರ ಹೆಸರು ಮತದಾರರ ಪಟ್ಟಿಯಲ್ಲಿಲ್ಲ ಎಂದು ತಿಳಿದಾಗ ಚಾಲೆಂಜ್‌ ವೋಟ್‌ಗೆ ಕೇಳಬಹುದೆನ್ನಲಾಗಿದೆ. ಆದರೆ ಇದು ಸುಳ್ಳು. ತಮ್ಮ ಹತ್ತಿರ ಮತದಾರರ ಗುರುತಿನ ಚೀಟಿ ಇದೆ ಎಂದ ಮಾತ್ರಕ್ಕೆ ಅವರಿಗೆ ಮತ ಚಲಾಯಿಸಲು ಆಗದು ಅವರ ಹೆಸರು ಮತದಾರರ ಪಟ್ಟಿಯಲ್ಲಿ ಕಡ್ಡಾಯವಾಗಿ ಇರಬೇಕು. ಸೆಕ್ಷನ್‌ 49ಎ ಅಡಿಯಲ್ಲಿ ಚಾಲೆಂಜ್‌ ವೋಟ್‌ಗೆ ಕೇಳಬಹುದು ಎಂದು ಹೇಳಿರುವುದು ಸಂಪೂರ್ಣ ಸುಳ್ಳು. ಈ ಕುರಿತು ಎಲ್ಲಿಯೂ ಮಾಹಿತಿಯಿಲ್ಲ.

ಆದರೆ ವೈರಲ್‌ ಸಂದೇಶದಲ್ಲಿರುವ ಟೆಂಡರ್‌ ವೋಟ್‌ ಕುರಿತ ಮಾಹಿತಿ ನಿಜವಾಗಿದೆ. ಚುನಾವಣೆ ನಡೆಸುವ ನಿಯಮಗಳು 1961 ಇದರ ನಿಯಮ 42 ಅನ್ವಯ ಒಬ್ಬ ಮತದಾರರ ಮತವನ್ನು ಅದಾಗಲೇ ಇನ್ನೊಬ್ಬರು ಚಲಾಯಿಸಿದ್ದರೆಂದು ತಿಳಿದು ಬಂದರೆ ಪ್ರಿಸೈಡಿಂಗ್‌ ಅಧಿಕಾರಿಗೆ ಮಾಹಿತಿ ನೀಡಬಹುದು.

ಅವರು ಮತದಾರರ ಗುರುತನ್ನು ದೃಢೀಕರಿಸಿದ ನಂತರ ಟೆಂಡರ್ಡ್‌ ಬ್ಯಾಲೆಟ್‌ ಪೇಪರ್‌ ಮೂಲಕ ಮತ ಚಲಾಯಿಸಲು ಅನುಮತಿಸಬಹುದಾಗಿದೆ.ಈ ಟೆಂಡರ್ಡ್‌ ಬ್ಯಾಲೆಟ್‌ ಪೇಪರ್‌, ಇವಿಎಂನ ಬ್ಯಾಲಟಿಂಗ್‌ ಯೂನಿಟ್‌ನಲ್ಲಿರುವ ಬ್ಯಾಲೆಟ್‌ ಪೇಪರ್‌ನಂತೆಯೇ ಇದೆ ಆದರೆ ಅದರ ಹಿಂದೆ ಸ್ಟ್ಯಾಂಪ್‌ ಇರುತ್ತದೆ ಅಥವಾ ಬರವಣಿಗೆ ಇರುತ್ತದೆ.

ಒಂದು ಬೂತಿನಲ್ಲಿ ಶೇ 14ಕ್ಕಿಂತ ಹೆಚ್ಚು ಟೆಂಡರ್‌ ವೋಟ್‌ಗಳು ಚಲಾವಣೆಯಾದರೆ ಮರುಮತದಾನ ಮಾಡಬಹುದು ಎಂದು ವೈರಲ್‌ ಸಂದೇಶದಲ್ಲಿ ಹೇಳಿರುವುದು ತಪ್ಪಾಗಿದೆ. ವಾಸ್ತವವಾಗಿ ಹೈಕೋರ್ಟ್‌ ಸೂಚನೆಯ ಅನ್ವಯ ಮಾತ್ರ ಟೆಂಡರ್ಡ್‌ ಮತಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದು ಎಂದಿದೆ..

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಚಾಲೆಂಜ್‌ ವೋಟ್‌ ಸಂದೇಶದಲ್ಲಿದ್ದ ಮರುಮತದಾನ ಕುರಿತ ಮಾಹಿತಿಗಳು ಸುಳ್ಳು. ವಾಸ್ತವವಾಗಿ ಅಂತಹ ಯಾವುದೇ ಪದ್ದತಿ ಜಾರಿಯಲ್ಲಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ವೋಟ್ ಹಾಕದಿದ್ರೆ ಬ್ಯಾಂಕ್ ಖಾತೆಯಿಂದ ಕಡಿತವಾಗಲಿದಯೇ 350 ರೂಪಾಯಿ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights