FACT CHECK | ವೋಟ್ ಹಾಕದಿದ್ರೆ ಬ್ಯಾಂಕ್ ಖಾತೆಯಿಂದ ಕಡಿತವಾಗಲಿದಯೇ 350 ರೂಪಾಯಿ?
ಚುನಾವಣೆ ಬಂತೆಂದರೆ ಮತದಾರರ ಮನ ಗೆಲ್ಲಲು ಅಭ್ಯರ್ಥಿಗಳು ರಾಜಕೀಯ ಪಕ್ಷಗಳು ನಾನಾ ಕಸರತ್ತುಗಳನ್ನು ನಡೆಸುತ್ತಾರೆ. ಪ್ರತಿ ಚುನಾವಣೆಯಲ್ಲಿ ಮದ್ಯದ ಹೊಳೆಯನ್ನು ಹರಿಸಲಾಗುತ್ತದೆ, ಓಟ್‌ಗಾಗಿ ನೋಟು ನೀಡುವುದು ಇನ್ನೂ ಸಾಮಾನ್ಯ. ಚುನಾವಣಾ ಆಯೋಗ ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಎಂದರೂ ಇದನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಆದರೆ ಈಗ ಹೇಳಲು ಹೊರಟಿರು ವಿಷಯ ಬೇರೆಯೇ ಇದೆ ಅದೇನೆಂದರೆ ಈ ಚುನಾವಣೆಯಲ್ಲಿ ಮತದಾನ ಮಾಡದಿದ್ದರೆ ಮತದಾರನ ಬ್ಯಾಂಕ್ ಖಾತೆಯಿಂದ ರೂ 350 ಕಡಿತ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.
2024ರ ಲೋಕಸಭಾ ಚುನಾವಣೆಯ ಮತದಾನ ಪ್ರಾರಂಭವಾಗಲು ಒಂದೇ ವಾರ ಬಾಕಿ ಇದೆ. ಎಪ್ರಿಲ್ 19 ರಿಂದ ಚುನಾವಣೆ ಆರಂಭವಾಗಲಿದ್ದು ಮತದಾನ ಮಾಡದ ಜನರ ಬ್ಯಾಂಕ್ ಖಾತೆಯಿಂದ 350 ರೂಪಾಯಿಗಳನ್ನು ಕಡಿತಗೊಳಿಸಲಾಗುವುದು ಎಂದು ಹೇಳುವ ಪತ್ರಿಕೆಯ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ನಿಜವಾಗಿಯೂ ಮತ ಚಲಾವಣೆ ಮಾಡದೆ ಇರುವ ಮತದಾರನ ಖಾತೆಯಿಂದ 350 ರೂ ಕಡಿತಗೊಳ್ಳುತ್ತದೆ ಎಂಬ ಸುದ್ದಿ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪತ್ರಿಕೆಯ ಕಟಿಂಗ್‌ನಲ್ಲಿ ಮುಂಬರುವ ಚುನಾವಣೆಯಲ್ಲಿ ಮತದಾನ ಮಾಡದಿದ್ದರೆ ಜನರ ಖಾತೆಯಿಂದ 350 ರೂಪಾಯಿಗಳನ್ನು ಕಡಿತಗೊಳಿಸಲಾಗುವುದು, ಒಂದು ವೇಳೆ ಬ್ಯಾಂಕ್ ಖಾತೆ ಇಲ್ಲದಿದ್ದರೆ ಮೊಬೈಲ್ ರೀಚಾರ್ಜ್‌ನಿಂದ ಹಣವನ್ನು ಕಡಿತಗೊಳಿಸಲಾಗುವುದು ಎಂದು ಹೇಳಲಾಗಿದೆ.
ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸದಿದ್ದರೆ ಜನರ ಬ್ಯಾಂಕ್ ಖಾತೆಯಿಂದ 350 ರೂಪಾಯಿಗಳನ್ನು ಕಡಿತಗೊಳಿಸಲಾಗುವುದು ಎಂದು ಹೇಳಿರುವ ಪತ್ರಿಕೆಯ ಕ್ಲಿಪ್‌ನ ಸತ್ಯಾಸತ್ಯತೆಗಳನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಮತದಾನ ಮಾಡದ ಮತದಾರರ ಬ್ಯಾಂಕ್ ಖಾತೆಯಿಂದ 350 ರೂ.ಗಳನ್ನು ಕಡಿತಗೊಳಿಸುವುದಾಗಿ ಹೇಳಿರುವ ಯಾವುದೇ ಸುದ್ದಿ ಲಭ್ಯವಾಗಿಲ್ಲ.
ನಂತರ ಕೀವರ್ಡ್ಗಳ ಸಹಾಯದಿಂದ ಸರ್ಚ್ ಮಾಡಿದಾಗ, 2 ಏಪ್ರಿಲ್ 2024 ರಂದು ಚುನಾವಣಾ ಆಯೋಗ ಮಾಡಿದ ಟ್ವೀಟ್ ಲಭ್ಯವಾಗಿದೆ. ಭಾರತೀಯ ಚುನಾವಣಾ ಆಯೋಗ ಮಾಡಿರುವ ಟ್ವೀಟ್‌ನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿ ನಕಲಿ ಅಂತಹ ಯಾವುದೇ ಹಣ ಕಡಿತವನ್ನು ಮಾಡುವ ಪ್ರಸ್ತಾಪವನ್ನು ಚುನಾವಣಾ ಆಯೋಗ ಪ್ರಕಟಿಸಿಲ್ಲ ಎಂದು ತಿಳಿಸಿದೆ. ಎಂದು ಇಂಡಿಯಾ ಟಿವಿ ಸುದ್ದಿ ತಾಣ ವರದಿ ಮಾಡಿದೆ.
ಹಾಗಾಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಪತ್ರಿಕೆಯ ಕಟಿಂಗ್ ಸಂಪೂರ್ಣವಾಗಿ ನಕಲಿ ಎಂದು ತಿಳಿದುಬಂದಿದೆ. ಮತದಾನ ಮಾಡದ ವ್ಯಕ್ತಿಗಳ ಖಾತೆಯಿಂದ 350 ರೂ.ಗಳನ್ನು ಕಡಿತಗೊಳಿಸುವುದಿಲ್ಲ. ಸಾರ್ವಜನಿಕರು ಇಂತಹ ನಕಲಿ ಪೋಸ್ಟ್‌ಗಳ ಬಗ್ಗೆ ಎಚ್ಚರದಿಂದ ಇರಲು ತಿಳಿಸಲಾಗಿದೆ.
ಮತದಾನ ಎಷ್ಟು ಮುಖ್ಯ ಎಂಬುದನ್ನು ಎಲ್ಲರು ಅರ್ಥ ಮಾಡಿಕೊಳ್ಳಬೇಕಿದೆ. ಪ್ರಜಾಪ್ರಭುತ್ವದಲ್ಲಿ ಒಂದೊಂದು ಮತಕ್ಕೂ ಮೌಲ್ಯವಿದೆ. ಇದರ ಹಿಂದೆ ದೊಡ್ಡ ಅರ್ಥವಿದೆ. ಕೇವಲ ಒಂದೇ ಒಂದು ಮತದ ಅಂತರದಿಂದ ಅಭ್ಯರ್ಥಿಯೊಬ್ಬ ಸೋತ ಅಥವಾ ಗೆದ್ದ ನಿದರ್ಶನಗಳಿವೆ. ಹಾಗಾಗಿ ಮತದಾನ ಮಾಡದಿದ್ದರೆ ರೂ 350 ಬ್ಯಾಂಕ್ ಖಾತೆಯಿಂದ ಕಡಿತವಾಗುತ್ತದೆ ಎಂಬ ಸುದ್ದಿ ಸುಳ್ಳೇ ಇರಬಹುದು. ಆದರೆ ಮತದಾನ ಮಾಡುವುದು ನಮ್ಮೆಲ್ಲರ ಜವಬ್ದಾರಿಯೂ ಹೌದು. ಮರೆಯದೇ ಮತದಾನ ಮಾಡಿ.
ಲೋಕಸಭಾ ಚುನಾವಣೆಯ ವೇಳಾಪಟ್ಟಿ ಪ್ರಕಟ: ಏಳು ಹಂತಗಳಲ್ಲಿ ಮತದಾನ; ಜೂ. 4ರಂದು ಮತ ಎಣಿಕೆ
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಕೇರಳ ಸರ್ಕಾರ ಶಾಲಾ ಪಠ್ಯದಲ್ಲಿ ಹಿಂದೂಗಳನ್ನು ಕೀಳಾಗಿ ಚಿತ್ರಿಸಲಾಗಿದೆಯೇ?