ಸಮೀಕ್ಷೆ: ಅಮೆರಿಕಾದಲ್ಲಿರುವ 61% ಭಾರತೀಯ ಇಂಜಿನಿಯರ್‌ಗಳು ಮೋದಿಯನ್ನು ಬೆಂಬಲಿಸುತ್ತಾರೆ!

ಅಮೆರಿಕಾದಲ್ಲಿರುವ ಭಾರತೀಯರಲ್ಲಿ ಒಟ್ಟು ಹಿಂದೂಗಳ ಪೈಕಿ 69% ಹಿಂದೂಗಳು ಮೋದಿಯನ್ನು ಬೆಂಬಲಿಸುತ್ತಾರೆ. ಅಲ್ಲದೆ, ಇತರ ಸಮುದಾಯದವರಲ್ಲಿ 20% ರಿಂದ 33% ಜನರು ಮೋದಿಯನ್ನು ಬೆಂಬಲಿಸುತ್ತಾರೆ. ಅಮೆರಿಕಾದಲ್ಲಿರುವ ಭಾರತೀರಯಲ್ಲಿ ಇಂಜಿನಿಯರಿಂಗ್‌ ಹುದ್ದೆ ಹೊಂದಿರುವ 61% ಜನರು ಹಾಗೂ ಇಂಜಿನಿಯರ್‌ ಅಲ್ಲದ 48% ಜನರಷ್ಟೇ ಮೋದಿಯ ಪರವಾಗಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ.

ಈ ಭಾರತೀಯ ಅಮೆರಿಕನ್ನರು ರಾಜಕೀಯ ವಿಷಯದಲ್ಲಿ ಅಮೆರಿಕದಲ್ಲಿ ರಾಜಕೀಯದಲ್ಲಿ ಉದಾರವಾದಿ ದೃಷ್ಟಿಕೋನವುಳ್ಳವರಾಗಿದ್ದು, ಭಾರತ ರಾಜಕೀಯದ ವಿಚಾರದಲ್ಲಿ ಸಂಪ್ರದಾಯವಾದಿಗಳಾಗಿದ್ದಾರೆ ಎಂದು ಸಮೀಕ್ಷೆ ವಿವರಿಸಿದೆ.

ಅಮೆರಿಕಾದಲ್ಲಿ ಬಿಳಿ ಜನಾಂಗೀಯವಾದವು ಅಪಾಯವನ್ನು ಉಂಟು ಮಾಡುತ್ತದೆ ಎಂದು ಹೇಳುವ ಅಮೆರಿಕಾದಲ್ಲಿರುವ ಹಿಂದೂ ಹಾಗೂ ಹಿಂದೂಯೇತರರು, ಭಾರತದಲ್ಲಿ ಹಿಂದೂ ಬಹುಸಂಖ್ಯಾತವಾದದ ವಿಚಾರದಲ್ಲಿ ಭಿನ್ನವಾದ ದೃಷ್ಟಿಕೋನ ಹೊಂದಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ಕಾರ್ನೆಗೀ ಎಂಡೋಮೆಂಟ್ ಫಾರ್ ಇಂಟರ್ನ್ಯಾಷನಲ್ ಪೀಸ್, ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಮತ್ತು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯವು 2020 ಸೆಪ್ಟೆಂಬರ್‌ನಲ್ಲಿ ಆನ್‌ಲೈನ್ ಮೂಲಕ ಈ ಸಮೀಕ್ಷೆ ನಡೆಸಿದೆ. ಸಮೀಕ್ಷೆಯು 1,200 ಭಾರತೀಯ ಅಮೆರಿಕನ್ ವಯಸ್ಕ ನಿವಾಸಿಗಳನ್ನು ಒಳಗೊಂಡಿದೆ. ಅಮೆರಿಕದಲ್ಲಿ 42 ಲಕ್ಷ ಭಾರತೀಯ ಅಮೆರಿಕನ್ನರಿದ್ದು, ಇದು ಎರಡನೇ ಅತಿದೊಡ್ಡ ವಲಸೆಗಾರ ಸಮುದಾಯವಾಗಿದೆ. ಇದರಲ್ಲಿ 38% ಜನರು ಇನ್ನೂ ಅಮೆರಿಕದ ಪ್ರಜೆಗಳಲ್ಲ.

ಅಮೆರಿಕದಲ್ಲಿ ಬಿಳಿಜನಾಂಗೀಯವಾದವು ಅಲ್ಪಸಂಖ್ಯಾತರಿಗೆ ಅಪಾಯಕಾರಿಯಾಗಿದೆ ಎಂದು ಹೇಳಿರುವ 73% ದಷ್ಟು ಜನರಲ್ಲಿ, ಅರ್ಧಕ್ಕಿಂತ ಕಡಿಮೆ ಜನರು ಹಿಂದೂ ಬಹುಸಂಖ್ಯಾತವಾದವು ಭಾರತದಲ್ಲಿ ಅಲ್ಪಸಂಖ್ಯಾತರಿಗೆ ಅಪಾಯಕಾರಿಯಾಗಿದೆ ಎಂದು ನಂಬಿದ್ದಾರೆ. ಕೇವಲ 40% ಭಾರತೀಯ ಅಮೆರಿಕನ್‌ ಹಿಂದೂಗಳು, ಹಿಂದೂ ಬಹುಸಂಖ್ಯಾವಾದವು ಅಪಾಕಾರಿ ಎಂದು ನಂಬಿದ್ದಾರೆ. ಆದರೆ 67% ಹಿಂದೂಯೇತರ ಭಾರತೀಯ ಅಮೆರಿಕನ್ನರು ಹಿಂದೂ ಬಹುಸಂಖ್ಯಾತವಾದವು ಅಪಾಯ ಎಂದು ಹೇಳಿದ್ದಾರೆ.

ಭಾರತವು “ಸರಿಯಾದ ಹಾದಿಯಲ್ಲಿದೆ” ಎಂದು 36% ಜನರು ಒಪ್ಪಿಕೊಂಡಿದ್ದಾರೆ. ಆದರೆ 39% ಜನರು ಅದನ್ನು ಒಪ್ಪಿಕೊಂಡಿಲ್ಲ. ಅಮೆರಿಕದಲ್ಲಿ ಹುಟ್ಟಿದ ಭಾರತೀಯ ಅಮೆರಿಕನ್ನರಿಗಿಂತ ಹೆಚ್ಚಾಗಿ, ವಿದೇಶದಲ್ಲಿ ಹುಟ್ಟಿದ ಭಾರತೀಯ ಅಮೆರಿಕನ್ನರು ಭಾರತವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ನಂಬುತ್ತಾರೆ.

ಇದನ್ನೂ ಓದಿ: ಸಾಮಾಜಿಕ ಮಾಧ್ಯಮ-ಗಾಸಿಪ್: ಟ್ರಂಪ್-ಮೋದಿಯಂತಹ ಜನರು ಪ್ರಚಾರ ಪಡೆದುಕೊಂಡಿದ್ದು ಹೇಗೆ?

ಜನಸಂಖ್ಯೆಯ ಅತಿದೊಡ್ಡ ಭಾಗವಾದ 35% ಜನರು ತಮ್ಮನ್ನು “ಭಾರತ ಪರ” ಎಂದು ಗುರುತಿಸಿಕೊಂಡಿದ್ದಾರೆ ಆದರೆ ಪ್ರಸ್ತುತ ಸರ್ಕಾರದ ಕೆಲವು ನೀತಿಗಳನ್ನು ಟೀಕಿಸಿದ್ದಾರೆ. ಇನ್ನೂ 23% ಜನರು ಭಾರತದ ಪರವಾಗಿದ್ದರಾದರೂ ಅನೇಕ ರಾಜಕಾರಣವನ್ನು ಟೀಕಿಸಿದ್ದಾರೆ. 17% ಜನರು ಭಾರತ ಮತ್ತು ಪ್ರಸ್ತುತ ಸರ್ಕಾರದ ಬಗ್ಗೆ ಸಕಾರಾತ್ಮಕ ನಿಲುವನ್ನು ಹೊಂದಿದ್ದಾರೆ.

ಓಖಅ-ಅಂಂ ಯನ್ನು ಕ್ರಮವಾಗಿ 55% ಮತ್ತು 51% ರಷ್ಟು ಜನರು ಬೆಂಬಲಿಸಿದ್ದಾರೆ. ಆದರೆ, ಶಾಂತಿಯುತ ಪ್ರತಿಭಟನಾಕಾರರ ಮೇಲೆ ಪೊಲೀಸ್ ಬಲವನ್ನು ಬಳಸುವುದನ್ನು ಅವರು ವಿರೋಧಿಸಿದ್ದಾರೆ ಹಾಗೂ ಪತ್ರಕರ್ತರ ವಿರುದ್ಧ ಮತ್ತು ಮೋದಿ ಸರ್ಕಾರವನ್ನು ಟೀಕಿಸುವವರ ವಿರುದ್ದ ಮಾನಹಾನಿ ಮತ್ತು ದೇಶದ್ರೋಹ ಪ್ರಕರಣ ದಾಖಲಿಸುವುದನ್ನು ವಿರೋಧಿಸಿದ್ದಾರೆ.

ಇದನ್ನೂ ಓದಿ: ಮೋದಿಯ ವಿದೇಶಾಂಗ ನೀತಿಯಲ್ಲಿ ಮೋದಿಗೆ ಮೊದಲ ಆದ್ಯತೆ; ಭಾರತಕ್ಕೆ ನಂತರದ್ದು!

ಅಮರಿಕದಲ್ಲಿ ಭಾರತೀಯ ಅಮೆರಿಕನ್ನರು ಹೆಚ್ಚು ಉದಾರವಾದಿಗಳಾಗಿದ್ದಾರೆ. ಉದಾಹರಣೆಗೆ, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಕೆಲವು ಮುಸ್ಲಿಂ ಬಹುಸಂಖ್ಯಾತ ದೇಶಗಳ ಮೇಲೆ ಹೇರಿದ ನಿಷೇಧವನ್ನು 60% ಜನರು ವಿರೋಧಿಸಿದ್ದಾರೆ.

40% ಜನರು ಭಾರತೀಯ ರಾಜಕೀಯ ಪಕ್ಷದಲ್ಲಿ ಯಾವುದೆ ಪಕ್ಷವನ್ನು ಆಯ್ಕೆ ಮಾಡಲಿಲ್ಲ, ಆದರೆ 33% ಜನರು ಬಿಜೆಪಿಯನ್ನು ಆಯ್ಕೆ ಮಾಡಿದ್ದು, 12% ಜನರು ಕಾಂಗ್ರೆಸ್‌ ಪಕ್ಷವನ್ನು ಮತ್ತು 16% ಇತರ ಪಕ್ಷವನ್ನು ಆಯ್ಕೆ ಮಾಡಿದ್ದಾರೆ.

ಭಾರತ ಎದುರಿಸುತ್ತಿರುವ ದೊಡ್ಡ ಸವಾಲುಗಳ ಬಗ್ಗೆ, ಭ್ರಷ್ಟಾಚಾರವೆ ಅತೀ ದೊಡ್ಡ ಸಮಸ್ಯೆ ಎಂದು 18% ಜನರು ಹೇಳಿದ್ದಾರೆ. ಆರ್ಥಿಕತೆ ಸಮಸ್ಯೆ 15%, ಧಾರ್ಮಿಕ ಬಹುಸಂಖ್ಯಾತವಾದ ಸಮಸ್ಯೆ 10%, ಆರೋಗ್ಯ ರಕ್ಷಣೆಯ ಸಮಸ್ಯೆ 8%, ಚೀನಾ 7%, ಭಯೋತ್ಪಾದನೆ 7%, ಜಾತಿ ತಾರತಮ್ಯ 6%, ಶಿಕ್ಷಣದ ಸಮಸ್ಯೆ 6%, ಆದಾಯ ಅಸಮಾನತೆ ಸಮಸ್ಯೆ 5%, ಹವಾಮಾನ ಬದಲಾವಣೆಯ ಸಮಸ್ಯೆ 4% ಮತ್ತು ಲಿಂಗಭೇದಭಾವದ ಸಮಸ್ಯೆ ಎಂದು 4% ಜನರು ಹೇಳಿದ್ದಾರೆ.

ಟ್ರಂಪ್‌ ಪಕ್ಷದಲ್ಲಿ ಮೋದಿ ಮತ್ತು ಬಿಜೆಪಿಯ ಬೆಂಬಲಿಗರ ನಡುವಿನ ಸಂಬಂಧವನ್ನು ಸಮೀಕ್ಷೆಯು ಕಂಡುಹಿಡಿದಿದೆ.

ಇದನ್ನೂ ಓದಿ: ಮೋದಿಯನ್ನು ತಿರಸ್ಕರಿಸುತ್ತಿದ್ದಾರೆ ಭಾರತೀಯ ಯುವಜನರು: ಕಾರಣವೇನು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights