ಮೋದಿಯ ವಿದೇಶಾಂಗ ನೀತಿಯಲ್ಲಿ ಮೋದಿಗೆ ಮೊದಲ ಆದ್ಯತೆ; ಭಾರತಕ್ಕೆ ನಂತರದ್ದು!

ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಅವರು ಇನ್ನೂ ಬಿಡುಗಡೆಯಾಗದ ತಮ್ಮ ಪುಸ್ತಕದಲ್ಲಿ, ಅಮೆರಿಕಾ ಅಧ್ಯಕ್ಷ ಟ್ರಂಪ್‌ ಅವರು ತಮ್ಮ ಮರು-ಚುನಾವಣೆಗೆ ಸಹಾಯ ಮಾಡಲು ಚೀನಾವನ್ನು ಯಾವ ರೀತಿಯಲ್ಲಿ ಕೇಳಿಕೊಂಡಿದ್ದಾರೆ ಎಂಬುದನ್ನು ಬರೆದಿದ್ದಾರೆ. ಇದು, ಟ್ರಂಪ್ ತಮ್ಮ ವೈಯಕ್ತಿಕ ರಾಜಕೀಯ ಹಿತಾಸಕ್ತಿಗಾಗಿ ಯುನೈಟೆಡ್ ಸ್ಟೇಟ್ಸ್‌ (ಅಮೆರಿಕಾ ಸಂಯುಕ್ತ ಸಂಸ್ತಾನ)ದ ವಿದೇಶಾಂಗ ನೀತಿಯನ್ನು ಬಳಸಿಕೊಳ್ಳಲು ಸಿದ್ಧರಿದ್ದರು ಎಂಬುದನ್ನು ತೋರಿಸುತ್ತದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಟ್ರಂಪ್‌ಗಿಂತ ತೀರಾ ಸೂಕ್ಷ್ಮವಾಗಿದ್ದರೂ, ಮೂಲಭೂತವಾಗಿ ಅವರೂ ಕೂಡ ಅದೇ ರೀತಿ ಮಾಡುತ್ತಿದ್ದಾರೆ. ಅಂದರೆ, ವಿದೇಶಾಂಗ ನೀತಿಯನ್ನು ವೈಯಕ್ತಿಕ ರಾಜಕೀಯ ಲಾಭಕ್ಕಾಗಿ ಬಳಸುತ್ತಿದ್ದಾರೆ. ಸರಳವಾಗಿ ಹೇಳುವುದಾದರೆ, ಮೋದಿಯವರ ವಿದೇಶಾಂಗ ನೀತಿಯಲ್ಲಿ ಮೋದಿ ಮೊದಲು, ಭಾರತ ಎರಡನೆಯದು.

ಮೋದಿ ಪ್ರವಾಸಗಳ ಮೇಲೆ ಪ್ರವಾಸದಲ್ಲಿದ್ದಾರೆ:

2014 ರಲ್ಲಿ ಮೋದಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ, ಅವರು ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ತೀವ್ರ ಆಸಕ್ತಿ ತೋರಿಸುವ ಮೂಲಕ ಅನೇಕರನ್ನು ಅಚ್ಚರಿಗೊಳಿಸಿದರು. ಅವರ ಆಗಾಗ್ಗೆ ವಿದೇಶ ಪ್ರವಾಸಗಳು ರಾಜಕೀಯ ಅಪಾಯದ ಮೂಲವಾಗಿತ್ತು. ಆದರೆ ಮೋದಿಯ ಬಳಿ ಸಮರ್ಥನಾತ್ಮಕ ಉತ್ತರವಿತ್ತು. ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ಸಂಘಿಗಳು ವಾಟ್ಸಾಪ್‌ ಯೂನಿವರ್ಸಿಟಿಗಳಲ್ಲಿ ಮೋದಿಯವರು ‘ವಿಶ್ವ ಮಟ್ಟದಲ್ಲಿ ಭಾರತದ ಸ್ಥಾನಮಾನವನ್ನು ಹೆಚ್ಚಿಸುತ್ತಿದ್ದಾರೆ’ ಎಂದು ಸುಳ್ಳು-ಪೊಳ್ಳು ಪೋಸ್ಟ್‌ಗಳ ಮೂಲಕ ಎಲ್ಲರನ್ನೂ ಯಾಮಾರಿಸುತ್ತಿದ್ದವು.

ಮೋದಿಯವರು ಅಧಿಕಾರಕ್ಕೆ ಬರುವ ಮೊದಲು ಜಗತ್ತಿಗೆ ಭಾರತದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟಲ್ಲಿ ಗೌರವ ಸಿಗುತ್ತಿರಲಿಲ್ಲ ಎಂದು ನಮ್ಮನ್ನು ನಂಬಿಸಲಾಗುತ್ತಿತ್ತು. ಸತ್‌ಪ್ರಜೆಗಳಾದ ನಾವು ಅವರು ಹೇಳಿದ್ದೆಲ್ಲವನ್ನೂ ನಂಬುತ್ತಿದ್ದೆವು. ಈ ನಿರೂಪಣೆ ಸಾಕಷ್ಟು ಯಶಸ್ವಿಯನ್ನು ಪಡೆದಿದೆ. ಚುನಾವಣೆಯನ್ನು ಗೆಲ್ಲುವಲ್ಲಿ ಮೋದಿಯೆಂಬ ಬ್ರಾಂಡ್‌ ಪ್ರಮುಖ ಆಧಾರಸ್ತಂಭವಾಗಿದೆ. ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿನ ಇತ್ತೀಚಿನ ಘಟನೆಗಳು, ಮೋದಿಯವರ ವೈಯಕ್ತಿಕ ಬ್ರಾಂಡ್ ನಿರ್ಮಾಣಕ್ಕಾಗಿ ವಿದೇಶಾಂಗ ನೀತಿಯನ್ನು ಬಳಸಿಕೊಳ್ಳಲಾಗುತ್ತಿದೆ ಎಂಬುದು ಅರ್ಥವಾಗುತ್ತದೆ.

2014 ರಲ್ಲಿ ಮೋದಿ ಪ್ರಧಾನಿಯಾದ ತಕ್ಷಣ, ನಾವು ನಮ್ಮ ಪ್ರಧಾನ ಮಂತ್ರಿಯಾಗಿ ಮಾರ್ಕೆಟಿಂಗ್ ಮ್ಯಾನೇಜರ್ ಅನ್ನು ಆಯ್ಕೆ ಮಾಡಿದ್ದೇವೆ ಎಂದು ನಮಗೆ ಅರಿವಾಯಿತು. ಅವರು ಸಾರ್ವಕಾಲಿಕ ಘೋಷಣೆಗಳು, ಸಂಕ್ಷಿಪ್ತ ರೂಪಗಳೊಂದಿಗೆ ಬಂದರು. ಮೇಕ್ ಇನ್ ಇಂಡಿಯಾ, ಸ್ವಚ್ಛ ಭಾರತ್, ಯೋಗ ದಿನ, ಡಿಜಿಟಲ್ ಇಂಡಿಯಾ, ಸ್ಟಾರ್ಟ್ಅಪ್ ಇಂಡಿಯಾ, ಸ್ಟ್ಯಾಂಡಪ್ ಇಂಡಿಯಾ, ಸ್ಕಿಲ್ ಇಂಡಿಯಾ ಮತ್ತು ವಾಟ್‌ನಾಟ್, ಎಲ್ಲವೂ ಅಭಿಯಾನವಾಗಿತ್ತು.

ವಿದೇಶಿ ಬಂಡವಾಳಿ ಶಕ್ತಿಗಳಿಗೆ ಮೋದಿ ಮಧ್ಯವರ್ತಿ: 

ಮೋದಿಯ ಅಗತ್ಯತೆ ಬಗ್ಗೆ ವಿದೇಶಿ ಬಂಡವಾಳಿಗ ಶಕ್ತಿಗಳಿಗೆ ತಿಳಿದಿದೆ: ಅವರು ಮೋದಿಯ ವ್ಯಕ್ತಿತ್ವ ಆರಾಧನೆಯನ್ನು ಪೋಷಿಸುತ್ತಿದ್ದಾರೆ. ಮೋದಿ ಇದನ್ನು ತಮ್ಮ ಮತದಾರರಿಗೆ ಒಂದು ಶಕ್ತಿ ಎಂದು ಪ್ರಸ್ತುತಪಡಿಸಿದ್ದಾರೆ. ಆದರೆ ಇದು ನಿಜಕ್ಕೂ ಒಂದು ದೌರ್ಬಲ್ಯ. ಒಬ್ಬ ವ್ಯರ್ಥ ವ್ಯಕ್ತಿಯಂತೆ ಜನರು ಮೋದಿಯನ್ನು ಅಭಿನಂದನೆಗಳೊಂದಿಗೆ ಮೆಚ್ಚಬಹುದು. ಆದರೆ, ಮೋದಿಯವರು ವಿದೇಶಿ ಶಕ್ತಿಗಳಿಗೆ ಸುಲಭವಾಗಿದ್ದಾರೆ. ಈಗ ಚೀನಾ ಅದನ್ನು ತೋರಿಸುತ್ತಿದೆ.

ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು 2014 ರಿಂದ ಇಲ್ಲಿಯವರೆಗೆ 18 ಬಾರಿ ಭೇಟಿಯಾಗಿದ್ದಾರೆ. ಪ್ರಧಾನಿ ಮೋದಿ ಐದು ಬಾರಿ ಚೀನಾಕ್ಕೆ ಭೇಟಿ ನೀಡಿದ್ದಾರೆ. ಚೀನಾವು ಮೋದಿಯವರ ನಾರ್ಸಿಸಿಸಮ್ ಅನ್ನು ತನ್ನ ಅಗತ್ಯಗಳಿಗಾಗಿ ಬಳಸಿಕೊಂಡಿತು. ನಾವು ಕೊರೊನಾ ಮತ್ತು ಆರ್ಥಿಕ ಸಂಕಷ್ಟದಲ್ಲಿರುವಾಗ ಹಿಂಭಾಗದಿಂದ ತಿವಿಯುತ್ತಿದೆ.  ನಾವು ನಮ್ಮ ದುರ್ಬಲ ಸ್ಥಿತಿಯಲ್ಲಿದ್ದಾಗ ನಮ್ಮನ್ನು ಹಿಂಭಾಗದಲ್ಲಿ ಇರಿದಿದ್ದೇವೆ – ಸಾಂಕ್ರಾಮಿಕ ಮತ್ತು ಆರ್ಥಿಕ ಕುಸಿತದ ಮಧ್ಯದಲ್ಲಿ. ಮೋದಿಯವರು ಚೀನಾಕ್ಕೆ ಹೆಚ್ಚಿನ ಅವಕಾಶಗಳನ್ನು ಬಿಟ್ಟುಕೊಡುವಂತೆ ಚೀನಾ ಮಾಡಿಕೊಂಡಿತು. ‘ನಂಬಿರಿ, ಆದರೆ ಪರಿಶೀಲಿಸಿ’.

ವಿದೇಶಿ ನಾಯಕರೊಂದಿಗಿನ ಅವರ ‘ವೈಯಕ್ತಿಕ ಸ್ನೇಹ’ದ ಬಗ್ಗೆ ಹೆಮ್ಮೆ ಪಡುವುದನ್ನು ಮೋದಿ ಇಷ್ಟಪಡುತ್ತಾರೆ. ಚೀನಾದ ಪ್ರವಾಸಿ ಹ್ಯುಯೆನ್ ತ್ಸಾಂಗ್ ಅವರು ಮೋದಿಯವರ  ಹಳ್ಳಿಯಲ್ಲಿ ಮತ್ತು ಚೀನಾದ ಕ್ಸಿ ಜಿನ್‌ಪಿಂಗ್ ಅವರ ಹಳ್ಳಿಯಲ್ಲಿ ಉಳಿದಿದ್ದರು ಎಂದು ಮೋದಿ ಹೇಳುತ್ತಾರೆ. ಈ ಬಗ್ಗೆ  ಕ್ಸಿ ಜಿನ್‌ಪಿಂಗ್ ಅವರಿಗೆ ತಿಳಿಸಿದರು ಮತ್ತು ಚೀನಾದ ತಮ್ಮ ಹಳ್ಳಿಗೆ ಕರೆದೊಯ್ದಾಗ ಮೋದಿಯ ಹಳ್ಳಿಯ ಹೆಸರಿನ ಶಾಸನವನ್ನು ತೋರಿಸಿದರು ಎಂದು ಮೋದಿ ಹೇಳುತ್ತಾರೆ.

ರಾಜತಾಂತ್ರಿಕತೆಯು ಕೊಡುವ ಮತ್ತು ತೆಗೆದುಕೊಳ್ಳುವ ಆಟವಾಗಿದೆ. ಮೋದಿಯವರ ವೈಯಕ್ತಿಕ ಬ್ರ್ಯಾಂಡ್ ನಿರ್ಮಾಣವು ಭಾರತದ ಕಡೆಯಿಂದ ಕೇಳಿದರೆ, ಭಾರತದ ರಾಷ್ಟ್ರೀಯ ಹಿತಾಸಕ್ತಿಗಳು ಆದ್ಯತೆಗಳ ಪಟ್ಟಿಯಲ್ಲಿ ಕೆಳಗಿನ ಸ್ಥಾನದಲ್ಲಿವೆ.

ಸ್ನೇಹ, ಭ್ರಾತೃತ್ವ ಮತ್ತು ಸಹೋದರತ್ವದ ವೈಯಕ್ತಿಕ ಬಂಧ (ಅವರು ಮೂರು ಹಿಂದಿ ಸಮಾನಾರ್ಥಕಗಳನ್ನು ಬಳಸಿದ್ದಾರೆ) ವಿದೇಶಿ ಸಂಬಂಧಗಳ ‘ಸಾಂಪ್ರದಾಯಿಕ’ ಕಲ್ಪನೆಗಳನ್ನು ಮೀರಿದೆ ಎಂದು ಮೋದಿ ಈ ಹಿಂದೆ ಹೇಳಿದ್ದಾರೆ. ಈ ವೈಯಕ್ತಿಕ ಸಂಬಂಧವು ‘ಸಾಂಪ್ರದಾಯಿಕ’ ವಿದೇಶಾಂಗ ನೀತಿಯ ಮೇಲೆ “ಪ್ಲಸ್ ಒನ್” ಆಗಿತ್ತು. ಆದರೆ, ಮೋದಿಯವರು ಯೋಚಿಸಿದ್ದ ‘ಪ್ಲಸ್ ಒನ್’ ಈಗ ‘ಮೈನಸ್ ಒನ್’ ಆಗಿ ಬದಲಾಗಿದೆ.

ಗೃಹ ಸಚಿವ ಅಮಿತ್ ಶಾ ಅವರು ಚೀನಾವು ‘ಅಕ್ಸಾಯ್ ಚಿನ್’ಅನ್ನು ಹಿಂದಿರುಗಿಸಬೇಕು ಎಂದು ಸಂಸತ್ತಿನಲ್ಲಿ ಘೋಷಿಸಲು ನಿಂತಿದ್ದಾರೆ. ಆದರೆ, ಇದಕ್ಕೆ ತದ್ವಿರುದ್ಧವಾಗಿ, ಕ್ಸಿ ಜಿನ್‌ಪಿಂಗ್ ಅವರು ಗಾಲ್ವಾನ್ ಕಣಿವೆಯನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದು, ಗಡಿ ಭಾಗದಲ್ಲಿ ಸಂಘರ್ಷಕ್ಕಿಳಿದಿದ್ದಾರೆ.

ಮೋದಿ ಸರ್ಕಾರದ ವಿದೇಶಾಂಗ ನೀತಿ ಮತ್ತು ದೇಶೀಯ ರಾಜಕಾರಣದ ಸಿನಿಕತನದ ಬಳಕೆಯಿಂದಾಗಿ ಭಾರತವು ಚೀನಾದ ವಿಸ್ತರಣಾವಾದಕ್ಕೆ ತಿರುಗೇಟು ನೀಡಬಲ್ಲ ದಕ್ಷಿಣ ಏಷ್ಯಾದ ಪ್ರಭಾವವನ್ನು ಕಳೆದುಕೊಂಡಿದೆ. ಪಾಕಿಸ್ತಾನವನ್ನು ಮಿತ್ರರಾಷ್ಟ್ರಗಳಿಂದ ವಿಭಜಿಸುವ ಬಿಜೆಪಿಯ ‘ಪ್ರತ್ಯೇಕತಾವಾದವು’, ಈಗ ಭಾರತದ ಮಿತ್ರರಾಷ್ಟ್ರಗಳಿಂದ ಭಾರತವನ್ನು ಚೀನಾ ಪ್ರತ್ಯೇಕಿಸಲು ಕಾರಣವಾಗಿದೆ. ನೇಪಾಳ ಕುಸಿದಿದೆ, ಭೂತಾನ್ ಎಷ್ಟು ಕಾಲ ಉಳಿಯುತ್ತದೆ? ಮತ್ತು ನಾವು (ಕೇಂದ್ರ ಸರ್ಕಾರ) ಹೇಗಾದರೂ ಢಾಕಾವನ್ನು ಬೀಜಿಂಗ್ ಕಡೆಗೆ ತಳ್ಳುತ್ತಿದ್ದೇವೆ. ಅಮಿತ್ ಷಾ ಅವರು ‘ಅಕ್ರಮ ಬಾಂಗ್ಲಾದೇಶಿ ವಲಸಿಗರ’ ಸುಳ್ಳು ನಿರೂಪಣೆಯನ್ನು ಹುಟ್ಟುಹಾಕುವ ಮೂಲಕ ಪಶ್ಚಿಮ ಬಂಗಾಳವನ್ನು ಗೆಲ್ಲಲು ತವಕಿಸುತ್ತಿದ್ದಾರೆ. ವಿದೇಶಿ ಪ್ರಭುತ್ವ ಮತ್ತು ಬಂಡವಾಳ ಶಕ್ತಿಗಳು ಭಾರತವನ್ನು ಆಕ್ರಮಿಸಿಕೊಳ್ಳುತ್ತಿವೆ. ಇದಕ್ಕೆ ಮೋದಿ ಮಧ್ಯವರ್ತಿಯಾಗಿ ದುಡಿಯುತ್ತಿದ್ದಾರೆ.

ಮೂಲ: ದಿ ಪ್ರಿಂಟ್

ಕನ್ನಡಕ್ಕೆ: ಸೋಮಶೇಖರ್ ಚಲ್ಯ


ಇದನ್ನೂ ಓದಿ: ಮೋದಿಯನ್ನು ತಿರಸ್ಕರಿಸುತ್ತಿದ್ದಾರೆ ಭಾರತೀಯ ಯುವಜನರು: ಕಾರಣ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights