ಚಿಕ್ಕಮಗಳೂರಿನಲ್ಲಿ ಭಾರಿ ಮಳೆ : ಬೃಹತ್ ಮರ ಬಿದ್ದು ಕಾರ್ ಜಖಂ!

ನಿನ್ನೆಯಷ್ಟೇ ರಾಜ್ಯದಲ್ಲಿ ಲಾಕ್ ಡೌನ್ ಸಡಿಲಿಕೆಗೊಂಡಿದ್ದು, ಸಂಜೆ ವೇಳೆ ಕೆಲವೆಡೆ ವರುಣ ತಂಪೆರೆದಿದ್ದು, ಇಂದು ಮೋಡ ಮುಸುಕಿದ ವಾತಾವರಣವಿದೆ.

ಹೌಧು… ಸೋಮವಾರ ಸಂಜೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಬಿರುಗಾಳಿ, ಗುಡುಗು, ಮಿಂಚು ಸಮೇತ ಭಾರಿ ಮಳೆಯಾಗಿದೆ. ಈ ವೇಳೆ ಮಳೆಗೆ ಬೃಹತ್ ಮರ ಬಿದ್ದು ಪರಿಣಾಮ ಕಾರ್ ಜಖಂ ಆಗಿದೆ.

ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗಿದ್ದು, ತರೀಕೆರೆಯಲ್ಲಿ ಕಾರಿನ ಮೇಲೆ ಬೃಹತ್ ಮರ ಬಿದ್ದು ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ನಿರಂತರ ಮಳೆಯಿಂದಾಗಿ ಹೆಚ್ಚಿದ ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿದ್ದು, ಕೊರೊನಾ, ಲಾಕ್‍ಡೌನ್ ಮಧ್ಯೆ ಮಳೆಯೂ ಸುರಿಯುತ್ತಿದೆ ಎಂದು ಭಯಭೀತರಾಗಿದ್ದಾರೆ.

ರಾಯಚೂರು, ಚಿತ್ರದುರ್ಗದ, ದಾವಣಗೆರೆಯ ಕೆಲವೆಡೆ ಮೋಡ ಮುಸುಗಿದ ವಾತಾವರಣವಿದೆ. ಮಳೆ ನೀರು ರಸ್ತೆ ಮೇಲೆ ತುಂಬಿ ಹರಿದಿದ್ದು, ವಾಹನ ಸವಾರರ ಪರದಾಡುವಂತಾಯಿತು.  ತರೀಕೆರೆ, ಮೂಡಿಗೆರೆ, ಕಡೂರು ತಾಲೂಕಿನ ಹಲವೆಡೆ ಮಳೆಯಾಗಿದೆ. ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆಯ ಎಫೆಕ್ಟ್ ಕುಡುಕರಿಗೂ ತಟ್ಟಿದ್ದು, ಎಷ್ಟೇ ಮಳೆ ಸುರಿದರೂ ಕ್ಯೂನಿಂದ ಮಾತ್ರ ಕದಲಿಲ್ಲ. ಎಣ್ಣೆಯನ್ನು ಪಡೆಯುವ ವರೆಗೂ ಮಳೆಯಲ್ಲೇ ನನೆದು ತಮ್ಮ ಸರತಿ ಬಂದ ನಂತರ ಎಣ್ಣೆ ಖರಿದಿಸಿ ಮರಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights