Boycott china : ದೇಶದ ಮೊಬೈಲು ಮಾರುಕಟ್ಟೆಯ ಮುಕ್ಕಾಲು ಪಾಲು ಚೀನಿ ಪಾರುಪತ್ಯ…..

Boycott china ಸಾಧ್ಯನಾ ಅಂದರೆ, ಸಾಧ್ಯವೇ ಇಲ್ಲ, ಕಾರಣ ಭಾರತದಲ್ಲಿ ಚೀನಾ 56 ಸಾವಿರ ಕೋಟಿ ರೂ ಬಂಡವಾಳ ಹೂಡಿದೆ… ಇದು ಕಟು ಸತ್ಯ.. ದೇಶದ ಮೊಬೈಲು ಮಾರುಕಟ್ಟೆಯ ಮುಕ್ಕಾಲು ಪಾಲು ಚೀನಾದ ಪಾರುಪತ್ಯದಲ್ಲಿದೆ…

ಗಡಿಯಲ್ಲಿ ನಮ್ಮ ಯೋಧರ ಹತ್ಯೆಯ ಬೆನ್ನಲ್ಲಿಯೇ ಚೀನಾದ ವಿರುದ್ಧ ಸ್ವಯಂ ಆರ್ಥಿಕ ದಿಗ್ಬಂಧನದ ಕೂಗು ದೇಶಾದ್ಯಂತ ವ್ಯಾಪಸಿದೆ. ಅನೇಖ ಕಡೆ ಪ್ರತಿಭಟನೆಗಳೂ ನಡೆಯುತ್ತಿವೆ. ಆದರೆ ವಿಪರ್‍ಯಾಸವೆಂದರೇ ಭಾರತೀಯ ಮಾರುಕಟ್ಟೆಯಲ್ಲಿ ಚೀನೀ ಬಂಡವಾಳ ಹೇರಳವಾಗಿದೆ.

ಒಂದು ಅಂದಾಜಿನ ಪ್ರಕಾರ ಭಾರತೀಯ ಮಾರುಕಟ್ಟೆಯಲ್ಲಿ ಚೀನಾದ ಸುಮಾರು 6 ಸಾವಿರ ಕೋಟಿ ರೂ ಬಂಡವಾಳ ಹರಿದಾಡುತ್ತಿದೆ. ಇದು ಸಾಮಾನ್ಯ ಸಂಗತಿಯಲ್ಲ. ಇದರ ಜೊತೆಗೇ ಇಂದು ದೇಶದ ಮೊಬೈಲು ಮಾರಕಟ್ಟೆಯಲ್ಲಿ ಚೀನಾ ಮುಕ್ಕಾಲು ಪಾಲು ಪಾರುಪತ್ಯ ಸ್ಥಾಪಿಸಿದೆ ಎನ್ನುವುದೂ ಅಷ್ಟೇ ಸತ್ಯ..

Top 5 Chinese Phones dominating Indian market | SAGMart

ಈ ವಾಣಿಜ್ಯ ಅವಲಂಬನೆಯನ್ನು ಭಾರತ ಏಕಾಏಕಿ ಕಳಚಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾರೆ ಅನೇಕ ವಾಣಿಜ್ಯ ತಜ್ಞರು. ಕಳೆದ 20 ವರ್ಷಗಳಲ್ಲಿ ಭಾರತಕ್ಕೆ ಚೀನಾದ ರಫ್ತು ಅಧಿಕಗೊಂಡಿದ್ದು, ಹೂಡಿಕೆಯ ಮಹಾಪೂರವೇ ಹರಿದುಬಂದಿದೆ ಎಂದು ಇಂಡಿಯಾ ಟುಡೆ ವರದಿ ತಿಳಿಸಿದೆ.

ಈ ಮಧ್ಯೆ ಚೀನಾ ವಸ್ತುಗಳನ್ನು ನಿಷೇಧದ ಕೂಗು ಏಳುತ್ತಿರುವಾಗಲೇ, ರೈಲ್ವೆ ಇಲಾಖೆ ಚೀನಾದೊಂದಿಗಿನ 470 ಕೋಟಿ ರೂಪಾಯಿ ಒಪ್ಪಂದವನ್ನು ರದ್ದು ಮಾಡಿದೆ. ದೆಹಲಿ – ಮೀರತ್ ಸೆಮಿ ಸ್ಪೀಡ್ ರೈಲ್ವೇ ಕಾರಿಡಾರ್ ನಿರ್ಮಾಣಕ್ಕೆ ಚೀನಾ ಕಂಪನಿಯೊಂದಿಗೆ ಭಾರತೀಯ ರೈಲ್ವೆಯು ಒಪ್ಪಂದ ಮಾಡಿಕೊಂಡಿತ್ತು.

ಒಪ್ಪಂದದ ಪ್ರಕಾರ ಈ ಯೋಜನೆ ಕಳೆದ ವರ್ಷ ಮುಕ್ತಾಯವಾಗಬೇಕಿತ್ತು. ಆದರೆ ಇನ್ನೂ ಕೇವಲ ಶೇ. 20 ಭಾಗದಷ್ಟು ಮಾತ್ರ ಕಾಮಗಾರಿ ಪೂರ್ಣಗೊಂಡಿತ್ತು. ಈ ಹಿನ್ನೆಲೆಯಲ್ಲಿ ವಿಳಂಬ ಗತಿ ಕಾಮಗಾರಿಯ ನೆಪ ನೀಡಿ ರೈಲ್ವೆ ಇಲಾಖೆಯು ಒಪ್ಪಂದವನ್ನು ರದ್ದುಗೊಳಿಸಿರುವುದಾಗಿ ವರದಿಯಾಗಿದೆ. ಇನ್ನು ಬಿಎಸ್‌ಎನ್‌ಎಲ್ 4ಜಿ ನೆಟ್ವರ್ಕ್ ನಿರ್ಮಾಣಕ್ಕಾಗಿ ಚೀನಾ ಉಪಕರಣ ಬಳಕೆ ಮಾಡದಿರಲು ಸಹಾ ತೀರ್ಮಾನಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights