ರಾಜ್ಯಸಭಾ ಚುನಾವಣೆ: ಬಿಜೆಪಿ-ಕಾಂಗ್ರೆಸ್‌ ರಾಜಸ್ಥಾನದಲ್ಲಿ 1-2, ಮಧ್ಯಪ್ರದೇಶದಲ್ಲಿ 2-1

ರಾಜ್ಯಸಭಾ ಚುನಾವಣೆಯಲ್ಲಿ ರಾಜಸ್ಥಾನದಲ್ಲಿ ಆಡಳಿತಾರೂಢ ಕಾಂಗ್ರೆಸ್ ಮೂರು ಸ್ಥಾನಗಳಲ್ಲಿ ಎರಡು ಸ್ಥಾನಗಳನ್ನು ಗೆದ್ದಿದ್ದು, ಬಿಜೆಪಿ ಒಂದು ಸ್ಥಾನವನ್ನು ಗೆದ್ದುಕೊಂಡಿದೆ.  ಕಾಂಗ್ರೆಸ್ ನ ಕೆ.ಸಿ.ವೇಣುಗೋಪಾಲ್ ಮತ್ತು ನೀರಜ್ ದಂಗಿ ಹಾಗೂ ಬಿಜೆಪಿಯ ರಾಜೇಂದ್ರ ಗೆಹ್ಲೋಟ್ ಅವರು ರಾಜಸ್ಥಾನದಿಂದ ಮೇಲ್ಮನೆಗೆ ಆಯ್ಕೆಯಾಗಿದ್ದಾರೆ.

ಮಧ್ಯಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ ಎರಡು ಮತ್ತು ಕಾಂಗ್ರೆಸ್ ಒಂದು ಸ್ಥಾನವನ್ನು ಗೆದ್ದಿದೆ. ಮಧ್ಯಪ್ರದೇಶದಲ್ಲಿ ಬಿಜೆಪಿಯಿಂದ  ಜ್ಯೋತಿರಾಡಿತ್ಯ ಸಿಂಧಿಯಾ ಮತ್ತು ಸುಮೇರ್ ಸಿಂಗ್ ಸೋಲಂಕಿ ಆಯ್ಕೆಯಾಗಿದ್ದು, ಕಾಂಗ್ರೆಸ್‌ನಿಂದ ದಿಗ್ವಿಜಯ ಸಿಂಗ್ ಗೆಲುವು ಸಾಧಿಸಿದ್ದಾರೆ.

ಗುಜರಾತ್‌ನ ಫಲಿತಾಂಶ ಇನ್ನೂ ಹೊರ ಬಿದ್ದಿಲ್ಲ.

ರಾಜ್ಯಸಭೆಯಲ್ಲಿ 10 ರಾಜ್ಯಗಳ 24 ಸ್ಥಾನಗಳು ಖಾಲಿಯಾಗಿದ್ದವು. ಗುಜರಾತ್, ಆಂಧ್ರಪ್ರದೇಶ ಮತ್ತು ಕರ್ನಾಟಕದಿಂದ ತಲಾ ನಾಲ್ಕು ಸ್ಥಾನಗಳು, ಮಧ್ಯಪ್ರದೇಶ ಮತ್ತು ರಾಜಸ್ಥಾನದಿಂದ ತಲಾ ಮೂರು, ಜಾರ್ಖಂಡ್‌ನಿಂದ ಎರಡು ಮತ್ತು ಈಶಾನ್ಯ ರಾಜ್ಯಗಳಾದ ಮೇಘಾಲಯ ಮತ್ತು ಮಣಿಪುರ, ಅರುಣಾಚಲ ಪ್ರದೇಶ ಮತ್ತು ಮಿಜೋರಾಂನಿಂದ ತಲಾ ಒಂದು ಸ್ಥಾನಗಳಲ್ಲಿ ಚುನಾವಣೆ ನಡೆಯಿತು.

ಕರ್ನಾಟಕ, ಅರುಣಾಚಲ ಪ್ರದೇಶದಲ್ಲಿ ಚುಣಾವಣೆ ನಡೆಯದೆ ಅವಿರೋಧ ಆಯ್ಕೆಯಾಗಿದೆ.

ಶುಕ್ರವಾರದ ಮತದಾನದ ಮೊದಲು, ರಾಜ್ಯಸಭಾ 245 ಸ್ಥಾನಗಳಲ್ಲಿ ಎನ್‌ಡಿಎ 91, ಕಾಂಗ್ರೆಸ್ ನೇತೃತ್ವದ ಯುಪಿಎ 61 ಸ್ಥಾನಗಳನ್ನು ಹೊಂದಿತ್ತು. ಇತರ ಪ್ರತಿಪಕ್ಷಗಳು ಮತ್ತು ಒಕ್ಕೂಟ ಪಕ್ಷಗಳು ಒಟ್ಟಾಗಿ 68 ಸ್ಥಾನಗಳನ್ನು ಹೊಂದಿದ್ದವು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights