ಕಾಂಗ್ರೆಸ್ ತನ್ನ ಒಂದು ಸಿಂಹವನ್ನು ಕಳೆದುಕೊಂಡಿದೆ: ರಾಹುಲ್ಗಾಂಧಿ
ಕಾಂಗ್ರೆಸ್ನ ಹಿರಿಯ ನಾಯಕ ರಾಜೀವ್ ತ್ಯಾಗಿಯವರು ಬುಧವಾರ ರಾತ್ರಿ ನಿಧನ ಹೊಂದಿದ್ದಾರೆ. ಅವರ ನಿಧನಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂತಾಪ ವ್ಯಕ್ತಪಡಿಸಿದ್ದು, ಅವರ ಸಾವು ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರ ನಷ್ಟವನ್ನು ತಂದೊಡ್ಡಿದೆ. ಇದರಿಂದಾಗಿ ಕಾಂಗ್ರೆಸ್ ಒಂದು ಸಿಂಹವನ್ನು ಕಳೆದುಕೊಂಡಿದೆ ಎಂದು ಹೇಳಿದ್ದಾರೆ.
ರಾಜೀವ್ ತ್ಯಾಗಿ ಅವರು ಉತ್ತರಪ್ರದೇಶ ಕಾಂಗ್ರಸ್ ಘಟಕದ ಕಾರ್ಯದರ್ಶಿ ಹುದ್ದೆಯಲ್ಲಿದ್ದರು ಹಾಗೂ ವಕ್ತಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.

ತ್ಯಾಗಿ ಅವರು ನಿಧನರಾಗುವುದಕ್ಕೆ ಕೆಲವೇ ತಾಸುಗಳ ಮೊದಲು ಟಿವಿ ಚರ್ಚೆಯೊಂದರಲ್ಲಿ ಭಾಗವಹಿಸಿದ್ದರು. ಅದೇ ಚರ್ಚೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಪಕ್ಷದ ವಕ್ತಾರ ಸಂಬಿತ್ ಪಾತ್ರ ಅವರು ರಾಜಿವ್ ತ್ಯಾಗಿ ಅವರ ಅಚಾನಕ್ ಅಗಲುವಿಕೆಗೆ ಸಂತಾಪ ವ್ಯಕ್ತಪಡಿಸಿದ್ದು, ‘ನನ್ನ ಗೆಳೆಯರಾಗಿದ್ದ ಕಾಂಗ್ರೆಸ್ ವಕ್ತಾರ ರಾಜೀವ್ ತ್ಯಾಗಿ ಅವರು ಇದೀಗ ನಮ್ಮೊಂದಿಗಿಲ್ಲ ಎಂಬುದನ್ನು ನನ್ನಿಂದ ನಂಬಲಾಗುತ್ತಿಲ್ಲ.
ಆಜ್ ತಕ್ ಚಾನೆಲ್ ನಲ್ಲಿ ಬುಧವಾರ ಸಾಯಂಕಾಲ 5 ಗಂಟೆಗೆ ನಾವು ಚರ್ಚೆಯಲ್ಲಿ ಭಾಗವಹಿಸಿದ್ದೆವು. ಜೀವನ ನಿಜವಾಗಿಯೂ ಕ್ಷಣಿಕವಾದದ್ದು’ ಎಂದು ಸಂಬಿತ್ ಪಾತ್ರ ಅವರು ತಮ್ಮ ಟ್ವೀಟ್ ಮಾಡಿದ್ದಾರೆ.
ರಾಜೀವ್ ತ್ಯಾಗಿ ಅವರ ನಿಧನಕ್ಕೆ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ, ಎನ್.ಸಿ.ಪಿ. ನಾಯಕ ನವಾಬ್ ಮಲಿಕ್ ಸೇರಿದಂತೆ ಹಲವರು ಆಘಾತ ವ್ಯಕ್ತಪಡಿಸಿದ್ದಾರೆ. ಪಕ್ಷಕ್ಕೋಸ್ಕರ ಅವರು ಮಾಡಿರುವ ತ್ಯಾಗ, ಕಷ್ಟವನ್ನು ನಾವೆಂದಿಗೂ ಮರೆಯುವುದಿಲ್ಲ ಎಂದು ಅವರು ಹೇಳಿದ್ದಾರೆ.
ರಾಜಿವ್ ತ್ಯಾಗಿ ಅವರ ಸಾವು ನನಗೆ ವೈಯುಕ್ತಿಕವಾಗಿ ದುಃಖವನ್ನುಂಟು ಮಾಡಿದೆ. ಆ ನಷ್ಟವನ್ನು ಎಂದಿಗೂ ಭರ್ತಿಮಾಡಲಾಗದು. ಇಡೀ ಉತ್ತರ ಪ್ರದೇಶ ಕಾಂಗ್ರೆಸ್ ಪರವಾಗಿ ಅವರಿಗೆ ಸಂತಾಪ ಸೂಚಿಸುತ್ತೇನೆ ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ.
Read Also: ದಿಶಾ ಕಾಯ್ದೆ ಕೇಂದ್ರದ ಅನುಮೋದನೆ ಪಡೆಯುವ ಪ್ರಯತ್ನಗಳನ್ನು ವೇಗಗೊಳಿಸಿ: ಜಗನ್

