ಬಿಜೆಪಿಗರು ಯಾರಾದರೂ ಸತ್ತರೆ ಕಾಂಗ್ರೆಸ್‌ನಿಂದ 1 ಕೋಟಿ ರೂ ಪರಿಹಾರ: ಶಾಸಕ ಅಮರೇಗೌಡ ಪಾಟೀಲ್

ಲಿಖಿಂಪುರದಲ್ಲಿ ಪ್ರತಿಭಟನಾ ನಿರತ ರೈತರ ಹತ್ಯೆ ಪ್ರಕರಣದಲ್ಲಿ ಬಿಜೆಪಿ ಸರ್ಕಾರ 45 ಲಕ್ಷ ರೂ. ಪರಿಹಾರ ಮಾತ್ರ ನೀಡಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್‌ ಶಾಸಕ ಅಮರೇಗೌಡ ಪಾಟೀಲ್, ಬಿಜೆಪಿ ಮುಖಂಡರಲ್ಲಿ ಯಾರಾದರೂ ಸಾಯಲಿ ಅವರಿಗೆ ಕಾಂಗ್ರೆಸ್ ಪಕ್ಷದಿಂದ 1 ಕೋಟಿ ರೂ. ಪರಿಹಾರ ಕೊಡಿಸುತ್ತೇನೆ ಎಂದು ಹೇಳಿದ್ದಾರೆ.

ಕೊಪ್ಪಳದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಶಾಸಕ ಅಮರೇಗೌಡ ಪಾಟೀಲ್, ರೈತರು ಚಳಿ,‌ ಹಿಮ, ಮಳೆ‌ ಲೆಕ್ಕಿಸದೇ ಪ್ರತಿಭಟನೆ ಮಾಡುತ್ತಿದ್ದಾರೆ. ಈ ರೈತರ ಪ್ರತಿಭಟನೆಯಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವರ ಪುತ್ರನ ಕಾರು ರೈತನ ಮೇಲೆ ಹರಿದು, 8 ಜನ ರೈತರ ಹತ್ಯೆಗೆ ಕಾರಣರಾಗಿದ್ದಾರೆ. ಸದರಿ ಆರೋಪಿ ಬಂಧಿಸದೇ 45 ಲಕ್ಷರೂ ಪರಿಹಾರ ಘೋಷಿಸಿದೆ. ಈ ದೇಶದಲ್ಲಿ ಬಿಜೆಪಿ ತೊಲಗುವರೆಗೂ ಈ ಹೋರಾಟ ನಡೆಯಲಿದೆ ಎಂದಿದ್ದಾರೆ.

ಈ ಪ್ರಕರಣದಲ್ಲಿ ಮಂತ್ರಿ ಮಗನನ್ನು ಬಂಧಿಸಿಲ್ಲ. ಅಲ್ಲದೇ ಪ್ರತಿಭಟನಾ ನಿರತರಾದ ಕಾಂಗ್ರೆಸ್ ಪಕ್ಷದ ಪ್ರಿಯಾಂಕ ಗಾಂಧಿ ಅವರನ್ನು ಕೂಡಿ ಹಾಕಿದ್ದು, ಪೊಲೀಸರು ಅವರ ಕೈ, ಮೈ ಮುಟ್ಟಿದ್ದಾರೆ. ಪೊಲೀಸರು ಬಿಜೆಪಿ ಚೇಲಾಗಳಂತೆ ವರ್ತಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ನಿಮ್ಮ ಜವಾಬ್ದಾರಿಯನ್ನು ನೀವು ಮರೆತು ಕುಳಿತಿದ್ದೀರಿ: ಮಾಧ್ಯಮಗಳ ವಿರುದ್ದ ರಾಹುಲ್‌ ಕಿಡಿ!

Spread the love

Leave a Reply

Your email address will not be published. Required fields are marked *