IAS ಆಕಾಂಕ್ಷಿಗಳಿಗೆ ಸೋನು ಸೂದ್‌ ಸಹಾಯಾಸ್ತ: ಸ್ಕಾಲರ್ಶಿಪ್‌ ಆರಂಭಸಿದ ನಟ!

ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ಕೊರೊನಾ ವಾರಿಯರ್ಸ್‌ ನಂತರದಲ್ಲಿ ಸುದ್ದಿಯಾಗಿದ್ದು ನಟ ಸೋನು ಸೂದ್‌. ಸರ್ಕಾರದ ಬೇಜವಾರಿ ಮತ್ತು ನಿರ್ಲಕ್ಷ್ಯತನದಿಂದ ವರ್ತಿಸುತ್ತಿದ್ದ ಹಾಗೂ ಕಾರ್ಮಿಕರನ್ನು ಬೀದಿ ಪಾಲು ಮಾಡಿದ್ದ ಸಂದರ್ಭದಲ್ಲಿ ವಲಸೆ ಕಾರ್ಮಿಕರ ನೆರವಿಗೆ ಧಾವಿಸಿ ಜನಮನ್ನಣೆಗೆ ಪಾತ್ರರಾದವರು ನಟ ಸೋನು ಸೂದ್‌.. ಅವರು ಈಗ ಮತ್ತೊಂದು ಮಹತ್ ಕಾರ್ಯಕ್ಕೆ ಮುಂದಾಗಿದ್ದಾರೆ. ಅದೂ ಐಎಎಸ್‌ ಮಾಡಬೇಕು ಎಂದು ಕನಸು ಕಂಡಿರುವವರಿಗಾಗಿ.

ಸ್ಕಾಲರ್ಶಿಪ್‌ ರೂಪದಲ್ಲಿ ಐಎಎಸ್‌ ಆಕಾಂಕ್ಷಿಗಳಿಗೆ ಪ್ರೋತ್ಸಾಹ ನೀಡಲು ಸೋನು ಸೂದ್‌ ಮುಂದಾಗಿದ್ದಾರೆ. ಅಕ್ಟೋಬರ್‌ 13 ರಂದು ಅವರ ತಾಯಿ ಇಹಲೋಕ ತ್ಯಜಿಸಿದ್ದು, ಅವರ ಸ್ಮರಣಾರ್ಥವಾಗಿ ಐಎಎಸ್‌ ಆಕಾಂಕ್ಷಿಗಳಿಗೆ ನೆರವಾಗುವ ನಿರ್ಧಾರ ಮಾಡಿದ್ದಾರೆ.

ಪ್ರೊ.ಸರೋಜ್ ಸೂದ್ ಸ್ಕಾಲರ್‌ಶಿಪ್ ಎಂಬ ಹೆಸರಿನ ಮೂಲಕ ಐಎಎಸ್ ಆಕಾಂಕ್ಷಿಗಳು ಅವರ ಗುರಿ ತಲುಪಲು ನೆರವಾಗಲಿದ್ದೇನೆ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

https://twitter.com/SonuSood/status/1315915235417440256?s=20

ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ಕೊರೊನಾ ವಾರಿಯರ್‌ನಂತೆ ಕೆಲಸ ಮಾಡಿದ್ದ ಸೋನು ಸೂದ್, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ವಿವಿಧ ಭಾಗಗಳಲ್ಲಿ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರು ತಮ್ಮ ಊರುಗಳನ್ನು ತಲುಪಲು ನೆರವಾಗಿದ್ದರು. ಅಲ್ಲದೆ, ಬಡ ರೈತರೊಬ್ಬರಿಗೆ ಟ್ರ್ಯಾಕ್ಟರ್‌ ಕೊಡಿಸುವ ಮೂಲಕ ಸುದ್ದಿಯಾಗಿದ್ದು, ರಿಯಲ್‌ ಹೀರೋ ಎಸಿಕೊಂಡಿದ್ದರು.


ಇದನ್ನೂ ಓದಿ: ಮಹಾರಾಷ್ಟ್ರ ಪೊಲೀಸರಿಗೆ 25 ಸಾವಿರ ಫೇಸ್ ಶೀಲ್ಡ್ ನೀಡಿದ ನಟ ಸೋನು ಸೂದ್..!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights