ಬಿಹಾರ ಚುನಾವಣೆ: ಫಲಕೊಡುತ್ತಾ ಮೋದಿ ಇಮೇಜ್? ಬಿಜೆಪಿ ರೂಪಿಸಿದೆ ಮಾಸ್ಟರ್‌ಪ್ಲಾನ್‌!

ಕೊರೊನಾ ಸಂಕಷ್ಟದಲ್ಲಿ ಬದುಕನ್ನು ಕಟ್ಟಿಕೊಳ್ಳಲು ಸಾಮಾನ್ಯ ನಾಗರಿಕ ಹರಸಾಹಸ ಪಡುತ್ತಿದ್ದರೆ, ರಾಜಕೀಯ ನಾಯಕರು ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಂಡು ಚುನಾವಣೆಗೆ ಸಜ್ಜಾಗುತ್ತಿದ್ದಾರೆ.. ಅತಿ ಹತ್ತಿರದಲ್ಲಿರುವ ಚುಣಾವಣೆ ಅಂದ್ರೆ ಅದು  ಬಿಹಾರ ಚುನಾವಣೆ ..  ಅದಕ್ಕಾಗಿ ಸಿದ್ಧತೆಗಳು ಸಹ ಜೋರು ಪಡೆಯುತ್ತಿವೆ. ಶತಾಯಗತಾಯ ಗೆಲ್ಲಲೇಬೇಕೆಂಬ ಪಣ ತೊಟ್ಟಿರುವ ಬಿಜೆಪಿ ಅದಕ್ಕಾಗಿ ಪ್ರಧಾನಿ ಮೋದಿ ಇಮೇಜಿನ ಗರಿಷ್ಠ ಬಳಕೆಗೆ ಸರ್ವ ಸಿದ್ಧತೆ ನಡೆಸಿದೆ. ಇನ್ನೊಂದಡೆ ಸತತ ಅಧಿಕಾರದಲ್ಲಿರುವ NDA ಯನ್ನು ಮಣಿಸಿ ಅಧಿಕಾರ ಪಡೆಯಲು ಹೊರಟಿರುವ ಮಹಾಘಟಬಂಧನ ತನ್ನದೆ ಆದ ಪ್ರತಿತಂತ್ರಗಳನ್ನು ಸಿದ್ದಮಾಡಿಕೊಂಡಿದೆ..

ಬಿಹಾರ ಚುನಾವಣೆಯ ಕೋವಿಡ್ ಸಂದರ್ಭದಲ್ಲಿ ನಡೆಯುತ್ತಿರುವ ಕಾರಣ ಪ್ರತ್ಯಕ್ಷ ಪ್ರಚಾರಕ್ಕಿಂತ ಪರದೆ ಮೇಲೆ ಪರೋಕ್ಷ ಪ್ರಚಾರಕ್ಕೇ ಅದು ಸೀಮಿತವಾಗಿರಲಿದೆ. ಈ ವಿಚಾರದಲ್ಲಿ ಪ್ರಧಾನಿ ಮೋದಿ ಇತರರಿಗಿಂತ ಮುಂದಿದ್ದಾರೆ. ಆದರೆ ಡೆಂಟ್ ಆಗಿರುವ ಅವರ ಇಮೇಜ್ ಅನ್ನು ಸುಧಾರಿಸಿಕೊಳ್ಳುವತ್ತ ಅವರ ಚಿತ್ತ ನೆಟ್ಟಿದೆ..

ಇದನ್ನೂ ಓದಿ: ಬಿಹಾರ ಚುನಾವಣೆ: ಎಲ್‌ಜೆಡಿ ಮುಖ್ಯಸ್ಥ ಶರದ್ ಯಾದವ್ ಪುತ್ರಿ ಕಾಂಗ್ರೆಸ್‌ಗೆ‌ ಸೇರ್ಪಡೆ!

ಇದೇ ಅಂಶವನ್ನು ಬಳಸಿಕೊಂಡು ಆದಷ್ಟೂ ಹೆಚ್ಚು ಜನರನ್ನು ಮುಟ್ಟಲು ಪಕ್ಷಗಳು ಮಾಸ್ಟರ್ ಪ್ಲಾನ್ ಹಾಕಿಕೊಂಡಿವೆ. ಮೂರು ಹಂತಗಳ ಚುನಾವಣೆಯಲ್ಲಿ ಪ್ರಧಾನಿಯಿಂದ ಕನಿಷ್ಟ 12 ಪರೋಕ್ಷ ರ್‍ಯಾಲಿಗಳನ್ನು ಆಯೋಜಿಸುವ ಸಾಧ್ಯತೆ ಇದೆ. ಈ ರ್‍ಯಾಲಿಗಳು ಮತ್ತು ಅದರಲ್ಲಿ ಮೋದಿ ಮಾತುಗಳನ್ನು ಜನರಿಗೆ ತಲುಪಿಸಲು ಬಿಜೆಪಿ ಭಾರಿ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಮೋದಿ ಮಾತನ್ನು ಬಿಹಾರದ ಮೂಲೆಮೂಲೆಗೆ ತಲುಪಿಸುವ ಕೆಲಸಕ್ಕಾಗಿ ಮೊಬೈಲ್ ಫೂನು ಇರುವ 4 ಲಕ್ಷ ಕಾರ್‍ಯಕರ್ತರ ಪಡೆ ಸಜ್ಜಾಗಿದೆ. ಇದೇ ರೀತಿ ಈ ರ್‍ಯಾಲಿಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಚುರ ಪಡಿಸಲು 10 ಸಾವಿರ ಸೋಶಲ್ ಕಮಾಂಡೋಗಳ ಸೇವೆಯನ್ನು ಪಡೆಯಲು ನಿರ್ಧರಿಸಲಾಗಿದೆ.

ಬಿಹಾರದಲ್ಲಿ ಅಕ್ಟೋಬರ್ 28 ಮತ್ತು ನವೆಂಬರ್ 3 ಹಾಗೂ 7 ರಂದು ಮೂರು ಹಂತದ ಮತದಾನ ನಡೆಯಲಿದೆ. ಫಲಿತಾಂಶ ನವೆಂಬರ್ 10ರಂದು ಹೊರಬೀಳಲಿದೆ. ಮೊದಲ ಹಂತದಲ್ಲಿ 71, ಎರಡನೇ ಹಂತದಲ್ಲಿ 94 ಹಾಗೂ ಮುರನೇ ಹಂತದಲ್ಲಿ 78 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಚುನಾವಣೆಗಾಗಿ 7 ಲಕ್ಷಕ್ಕೂ ಹೆಚ್ಚು ಹ್ಯಾಂಡ್ ಸ್ಯಾನಿಟೈಸರ್, 46 ಲಕ್ಷ ಮಾಸ್ಕ್, 6 ಲಕ್ಷ ಪಿಪಿಇ ಕಿಟ್​, 6.7 ಲಕ್ಷ ಫೇಸ್​ ಶೀಲ್ಡ್​, 23 ಲಕ್ಷ ಜೋಡಿ ಕೈಗವಸುಗಳನ್ನು ವ್ಯವಸ್ಥೆ ಮಾಡಲಾಗಿದೆ.


ಇದನ್ನೂ ಓದಿ: ಬಿಹಾರ ಚುನಾವಣೆ: ಆರ್‌ಜೆಡಿ-ಕಾಂಗ್ರೆಸ್‌ ನಡುವೆ ಸ್ಥಾನ ಹಂಚಿಕೆ ಬಿಕ್ಕಟ್ಟು: ಕಾಂಗ್ರೆಸ್‌ಗೆ ಸಿಕ್ಕ ಸೀಟುಗಳೆಷ್ಟು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights