ದೇವೇಗೌಡರನ್ನು ಮಣಿಸಿದಂತೆಯೇ ಮುನಿರತ್ನರನ್ನು ಸೋಲಿಸಲು ಡಿಕೆಶಿ ತಂತ್ರ: ಏನುದು ಪ್ಲಾನ್?
ಮಾಜಿ ಪ್ರಧಾನಿ HD ದೇವೇಗೌಡರನ್ನು ಲೋಕಸಭೆ ಚುನಾವಣೆಯಲ್ಲಿ ಮಣಿಸಿದ ಹಾಗೆ ಪ್ರತಿಷ್ಠಿತ ಆರ್‌ಆರ್ ನಗರ ಉಪಚುನಾವಣೆಯಲ್ಲಿ ಮುನಿರತ್ನ ರನ್ನು ಮಣಿಸಲು KPCC ಅಧ್ಯಕ್ಷ KD ಶಿವಕುಮಾರ ತಂತ್ರ ಹೆಣದಿದ್ದಾರೆ.. SM ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಕನಕಪುರ ಕ್ಷೇತ್ರದಿಂದ ದೇವೇಗೌಡರ ವಿರುದ್ಧ ಬೀಸಿದ ಬಲೆಯನ್ನೆ ಮತ್ತೆ ಬಿಸಲು ಡಿಕೆಶಿ ಸಿದ್ದರಾಗಿದ್ದಾರೆ.
ರಾಜಕೀಯದಲ್ಲಿ ತೀರಾ ಅನನುಭವಿಯಾಗಿರುವ ಕುಸುಮಾ ಅವರನ್ನು ಪ್ರತಿಷ್ಠಿತ ಆರ್‌ಆರ್ ನಗರ ಕ್ಷೇತ್ರದಿಂದ ಕಣಕ್ಕಿಳಿಸಿರುವುದ ಹಿಂದೆ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಅವರ ಲೆಕ್ಕಾಚಾರ ಏನು ಎಂಬುದು ಈಗ ಚರ್ಚಿತ ವಿಷಯವಾಗಿದೆ.
ಪ್ರಬಲ ಎದುರಾಳಿ ಮುನಿರತ್ನ ಅವರ ವಿರುದ್ಧ ಸ್ಫರ್ಧಿಸಲು ದಿವಂಗತ ಐಎಎಸ್ ಅಧಿಕಾರಿ ಡಿಕೆ ರವಿ ಅವರ ಪತ್ನಿ ಕುಸುಮಾ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಚುನಾವಣೆ ಘೊಷಣೆಯಾದ ಬೆನ್ನಲ್ಲಿಯೇ ಅಚ್ಚರಿಯ ಅಭ್ಯರ್ಥಿ ಎಂದು ಶಿವಕುಮಾರ್ ಸಾರಿದ್ದರು. ಆದರೆ ಈ ಅಚ್ಚರಿ ಕುಸುಮಾ ಎಂಬ ಎಣಿಕೆ ಸಾಮಾನ್ಯ ಕಾರ್‍ಯಕರ್ತರಿಗಿರಲಿಲ್ಲ.
ಕುಸುಮಾ ಅವರಿಗೆ ಟಿಕೆಟ್ ನೀಡಿರುವುದರ ಹಿಂದಿನ ಕಾರ್‍ಯತಂತ್ರದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಜ್ಯೋತಿಷಿಯೊಬ್ಬರ ಸಲಹೆ ಮೇರೆಗೆ ಶಿವಕುಮಾರ್ ಈ ನಿರ್ಧಾರ ಕೈಗೊಂಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಮುನಿರತ್ನ ಅವರನ್ನು ಕಟ್ಟಿಹಾಕಲು ನಾರಿಶಕ್ತಿ ಅಸ್ತ್ರ ಬಳಸುವಂತೆ ಈ ಜ್ಯೋತಿಷಿಯು ಡಿಕೆಶಿಗೆ ಸಲಹೆ ನೀಡಿದರು.
Read Also: ತಲಾ ಆದಾಯದಲ್ಲಿ ಭಾರತವನ್ನು ಹಿಂದಿಕ್ಕಿದ ಬಾಂಗ್ಲಾದೇಶ: ದಕ್ಷಿಣ ಏಷ್ಯಾದಲ್ಲಿ ಭಾರತವೇ ಮೂರನೇ ಬಡರಾಷ್ಟ್ರ!
ಆ ಸಲಹೆಯ ಹಿನ್ನೆಲೆಯಲ್ಲಿ ಕುಸುಮಾ ಅವರನ್ನು ಪಕ್ಷಕ್ಕೆ ಕರೆತಂದು ಅವರಿಗೇ ಟಿಕೆಟ್ ನೀಡಲಾಗಿದೆ ಎಂಬ ಮಾತು ಚಾಲ್ತಿಯಲ್ಲಿದೆ. ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದ ನಂತರ ನಡೆಯುತ್ತಿರುವ ಉಪ ಚುನಾವಣೆ ಇದಾಗಿದೆ.
ಈ ಕ್ಷೇತ್ರ ಅವರ ಸೋದರ ಸುರೇಶ್ ಪ್ರತಿನಿಧಿಸುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವುದರಿಂದ ಮಹತ್ವ ಪಡೆದಿದೆ. ಆ ಕಾರಣಕ್ಕಾಗೇ ಅವರು ಇದನ್ನು ಪ್ರತಿಷ್ಠೆಯ ಪ್ರಶ್ನೆಯಾಗಿ ತೆಗೆದುಕೊಂಡಿದ್ದಾರೆ.
ಇಷ್ಟಕ್ಕೂ ಡಿಕೆಶಿಯೇ ಖುದ್ದು ಆಸ್ಥೆ ವಹಿಸಿ ಕುಸುಮಾ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ಆಗಿಸಿರುವುದರ ಹಿಂದೆ ರಾಜಕೀಯ ಕಾರ್ಯತಂತ್ರವೂ ಅಡಗಿದೆ.
ಹಾಗೆ ನೋಡಿದರೇ 16 ವರ್ಷಗಳ ಹಿಂದೆಯೇ ಶಿವಕುಮಾರ್ ಇಂತಹದ್ದೊಂದು ಪ್ರಯೋಗಕ್ಕೆ ಕೈಹಾಕಿ ಯಶಸ್ವಿಯೂ ಆಗಿದ್ದರು. 2004ರಲ್ಲಿ ನಡೆದ ಕನಕಪುರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಜೆಡಿಎಸ್ ನಾಯಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ವಿರುದ್ಧ ತೇಜಸ್ವಿನಿ ಯವರನ್ನು ಕಣಕ್ಕಿಳಿಸಿದ್ದಲ್ಲದೇ ಗೌಡರನ್ನು ಸೋಲಿಸುವಲ್ಲಿ ಶಿವಕುಮಾರ್ ಯಶಸ್ವಿಯಾಗಿದ್ದರು.
ಈಗ ಮತ್ತೆ ಅದೇ ಕಾರ್ಯ ತಂತ್ರಕ್ಕೆ ಮುಂದಾಗಿದ್ದಾರೆ. ಈ ಬಾರಿ ಅವರ ಗುರಿ ಹಿಂದುಳಿದ ವರ್ಗಕ್ಕೆ ಸೇರಿದ ಬಿಜೆಪಿ ಅಭ್ಯರ್ಥಿ ಮುನಿರತ್ನ ಆಗಿದ್ದಾರೆ. ಒಟ್ಟಿನಲ್ಲಿ ಈ ರಾಜಕೀಯ ಒಳ ಲೆಕ್ಕಾಚಾರ ಯಾವ ಫಲಿತಾಂಶವನ್ನು ಹೊರಹಾಕುತ್ತದೆ ಎಂಬುದನ್ನು ತಿಳಿಯಲು ನವೆಂಬರ್ 10ರ ತನಕ ಕಾಯಬೇಕಿದೆ.
Read Also: ಕಾಂಗ್ರೆಸ್‌ಗೆ ಕೈಕೊಟ್ಟು ಬಿಜೆಪಿ ಸೇರಿರುವ RRನಗರ ಅಭ್ಯರ್ಥಿ ಮುನಿರತ್ನ ಆಸ್ತಿ ಎಷ್ಟಿದೆ ಗೊತ್ತಾ?
ಎನ್ ಸುದ್ದಿ ಸಂಪಾದಕರೆ ನಿಮಗೆ ನಾಚಿಕೆ ಇಲ್ವ. ಚುನಾವಣಾ ಅರ್ಜಿಯಲ್ಲಿ ಕುಸುಮನೇ ತನ್ನ ಗಂಡನ ಹೆಸರನೆ ತೋರಿಸಿಲ್ಲ ವೆಂದು ಇದೆ ತರಹದ ಪತ್ರಿಕೆ ವರದಿ ಮಾಡಿದ್ದು ನೀವು ಯಾಕೆ ಡಿ ಕೆ ರವಿ ಪತ್ನಿಯೆಂದು ಬರೆಯುತ್ತಿರುವಿರಿ.ಇದು ಯಾವ ನಿಮ್ಮ ರಾಜಕೀಯ ಬೆಳವಣಿಗೆ.ಅವಳಿಗೆ ಇಲ್ಲದ್ದು ನಿಮಗೆ ಯಾಕೆ.ಡಿ ಕೆ ಶಿ ಈ ರೀತಿ ಬರೆಯುವುದಕ್ಕೆ ಸಗಣಿ ಕೊಟ್ಟಿದ್ದರಾ.