ತಲಾ ಆದಾಯದಲ್ಲಿ ಭಾರತವನ್ನು ಹಿಂದಿಕ್ಕಿದ ಬಾಂಗ್ಲಾದೇಶ: ದಕ್ಷಿಣ ಏಷ್ಯಾದಲ್ಲಿ ಭಾರತವೇ ಮೂರನೇ ಬಡರಾಷ್ಟ್ರ!

ದೇಶದ ಆರ್ಥಿಕತೆಯು ತಲಾ ಆದಾಯ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಯು ಬಾಂಗ್ಲಾದೇಶಕ್ಕಿಂತ ಕೆಳಗಿಳಿಯಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್‌) ಹೇಳಿದೆ. ಈ ವರ್ಷ ಶೇಕಡಾ 10.3 ರಷ್ಟು ಭಾರಿ ಪ್ರಮಾಣದಲ್ಲಿ ತಲಾ ಜಿಡಿಪಿ ಕುಸಿಯುವ ನಿರೀಕ್ಷೆಯಿದೆ ಇದೆ. ಹೀಗಾಗಿ ತಲಾ ಆದಾಯ ಜಿಡಿಪಿಯಲ್ಲಿ ಬಾಂಗ್ಲಾದೇಶವು ಭಾರತವನ್ನು ಹಿಂದಿಕ್ಕಲಿದೆ ಎಂದು ಹೇಳಿದೆ.

ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಪ್ರಕಾರ, 2020 ರಲ್ಲಿ ಡಾಲರ್ ಪರಿಭಾಷೆಯಲ್ಲಿ ಬಾಂಗ್ಲಾದೇಶದ ತಲಾ ಜಿಡಿಪಿಯು ಶೇ.4 ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈ ಮೂಲಕ ಭಾರತವನ್ನು ಹಿಂದಿಕ್ಕಲಿದೆ.

ಭಾರತದ ತಲಾ ಜಿಡಿಪಿ ಶೇಕಡಾ 10.5 ರಷ್ಟು ಕುಸಿತ ಕಂಡಿದ್ದು, 1,877 ಡಾಲರ್ಸ್‌ಗೆ ಇಳಿದಿದೆ.  ಈ ಮೂಲಕ ಕಳೆದ ನಾಲ್ಕು ವರ್ಷಗಳಲ್ಲಿ ಅತ್ಯಂತ ಕಡಿಮೆ ಮಟ್ಟಕ್ಕೆ ಕುಸಿತ ಕಂಡಿದೆ. ಎರಡೂ ದೇಶಗಳ ಜಿಡಿಪಿ ಸಂಖ್ಯೆ ಪ್ರಸ್ತುತ ಬೆಲೆಗಳಲ್ಲಿದೆ.

ಈ ಅಂದಾಜಿನ ಪ್ರಕಾರ, ಭಾರತವು ದಕ್ಷಿಣ ಏಷ್ಯಾದ ಮೂರನೇ ಬಡ ರಾಷ್ಟ್ರವಾಗಲಿದೆ. ಪಾಕಿಸ್ತಾನ ಮತ್ತು ನೇಪಾಳ ರಾಷ್ಟ್ರಗಳಲ್ಲಿ ಮಾತ್ರ ತಲಾ ಜಿಡಿಪಿ ಕುಸಿತ ಕಂಡಿದೆ. ಭೂತಾನ್, ಬಾಂಗ್ಲಾದೇಶ, ಮಾಲ್ಡೀವ್ಸ್ ಮತ್ತು ಶ್ರೀಲಂಕಾ ದೇಶಗಳು ಭಾರತವನ್ನು ಹಿಂದಿಕ್ಕಲಿವೆ.

ಡಬ್ಲ್ಯುಇಒ ದತ್ತಾಂಶದ ಪ್ರಕಾರ, ಕೊರೊನಾ ವೈರಸ್‌ನಿಂದಾಗಿ ಶ್ರೀಲಂಕಾದ ತಲಾ ಆದಾಯ ಶೇ.4ರಷ್ಟು ಕುಸಿದಿದ್ದು, ಭಾರತವು ಅತಿ ಹೆಚ್ಚು ಪೆಟ್ಟು ತಿಂದಿದೆ. ಶ್ರೀಲಂಕಾ ತಲಾ ಆದಾಯ ಜಿಡಿಪಿ ಕುಸಿದಿದ್ದರೂ ಭಾರತವನ್ನು ಹಿಂದಿಕ್ಕಲಿದೆ.

ನೇಪಾಳ ಮತ್ತು ಭೂತಾನ್ ಈ ವರ್ಷ ತಮ್ಮ ಆರ್ಥಿಕತೆಯನ್ನು ಬೆಳೆಸಲು ತುಲನಾತ್ಮಕವಾಗಿ ಹೆಜ್ಜೆ ಇಡಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿವೆ.

ಇದನ್ನೂ ಓದಿ: ಮೋದಿ ಸರ್ಕಾರಕ್ಕೆ ಮುಖಭಂಗ: ಕಾರ್ಮಿಕ ಹಕ್ಕುಗಳನ್ನು ರಕ್ಷಿಸುವಲ್ಲಿ ಭಾರತ 151ನೇ ಸ್ಥಾನಕ್ಕೆ ಕುಸಿತ!

ಮುಂದಿನ ವರ್ಷ ಭಾರತದಲ್ಲಿ ತೀಕ್ಷ್ಣವಾದ ಆರ್ಥಿಕ ಚೇತರಿಕೆ ಕಾಣುವ ಸಾಧ್ಯತೆಯಿದೆ ಎಂದು ಐಎಂಎಫ್‌ ಹೇಳಿದೆ. ಒಂದು ವೇಳೆ 2021ರಲ್ಲಿ ಆರ್ಥಿಕ ಚೇತರಿಕೆ ಕಂಡಲ್ಲಿ ಬಾಂಗ್ಲಾದೇಶಕ್ಕಿಂತ ಕೊಂಚನೇ ಮುಂದಕ್ಕೆ ಹೋಗುವ ಸಾಧ್ಯತೆಯಿದೆ. ಆದರೆ, ಬಾಂಗ್ಲಾದೇಶವೂ ಮತ್ತಷ್ಟು ಚೇತರಿಕೆ ಕಂಡಲ್ಲಿ ಅದೂ ಕೂಡ ಅಸಾಧ್ಯವೇ ಆಗಿದೆ.

ಡಾಲರ್ ಪರಿಭಾಷೆಯಲ್ಲಿ ಭಾರತದ ತಲಾ ಜಿಡಿಪಿ 2021 ರಲ್ಲಿ ಶೇಕಡಾ 8.2 ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಬಾಂಗ್ಲಾದೇಶದ ಶೇಕಡಾ 5.4 ರಷ್ಟು ಬೆಳವಣಿಗೆ ನಿರೀಕ್ಷಿಸಲಾಗಿದೆ. ಮುಂದಿನ ವರ್ಷ (2021)ಕ್ಕೆ ಭಾರತದ ತಲಾ ಜಿಡಿಪಿಯು $2,030ಕ್ಕೆ ಏರಿಕೆಯಾಗುತ್ತದೆ. ಬಾಂಗ್ಲಾದೇಶದಲ್ಲಿ $1,990ಕ್ಕೆ ಏರಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ಐದು ತಿಂಗಳಲ್ಲಿ ತೆರಿಗೆ ಸಂಗ್ರಹ ಶೇ.31 ರಷ್ಟು ಕುಸಿತ: ಕೇಂದ್ರ ಸಚಿವ

ಕಳೆದ ಐದು ವರ್ಷಗಳಲ್ಲಿ, ಸಂಯುಕ್ತ ವಾರ್ಷಿಕ ಬೆಳವಣಿಗೆಯ ದರದಲ್ಲಿ (ಸಿಎಜಿಆರ್) ಬಾಂಗ್ಲಾದೇಶದ ತಲಾ ಜಿಡಿಪಿ 9.1% ರಷ್ಟು ಹೆಚ್ಚಾಗಿದೆ. ಈ ಅವಧಿಯಲ್ಲಿ ಭಾರತವಯ 3.2% ರಷ್ಟು ಬೆಳವಣಿಗೆ ಸಾಧಿಸಿದ್ದು, ಈ ವರ್ಷ 10.5% ಕುಸಿತ ಕಂಡಿದೆ.

ವೇಗವಾಗಿ ಬೆಳೆಯುತ್ತಿರುವ ರಫ್ತು ವಲಯ, ದೇಶದ ಉಳಿತಾಯ ಮತ್ತು ಹೂಡಿಕೆ ದರದಲ್ಲಿನ ಬೆಳವಣಿಗೆಯಿಂದ ಬಾಂಗ್ಲಾದೇಶದ ಆರ್ಥಿಕ ಬೆಳವಣಿಗೆ ಪ್ರಗತಿಯಲ್ಲಿದೆ.

ಇದಕ್ಕೆ ತದ್ವಿರುದ್ಧವಾಗಿ, ಇತ್ತೀಚಿನ ವರ್ಷಗಳಲ್ಲಿ ಭಾರತದ ರಫ್ತು ಕುಂಠಿತಗೊಂಡಿದ್ದು, ಉಳಿತಾಯ ಮತ್ತು ಹೂಡಿಕೆಗಳು ಇಳಿಮುಖವಾಗಿವೆ.


ಇದನ್ನೂ ಓದಿ: ಆರ್ಥಿಕ ಕುಸಿತದ ನಡುವೆಯೂ ಶ್ರೀಮಂತನಾದ ಅಂಬಾನಿ! ಗಂಟೆ ಲೆಕ್ಕದ ಆದಾಯ ಎಷ್ಟು ಗೊತ್ತೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights