ಮೋದಿ ಸರ್ಕಾರಕ್ಕೆ ಮುಖಭಂಗ: ಕಾರ್ಮಿಕ ಹಕ್ಕುಗಳನ್ನು ರಕ್ಷಿಸುವಲ್ಲಿ ಭಾರತ 151ನೇ ಸ್ಥಾನಕ್ಕೆ ಕುಸಿತ!

ಕಾರ್ಮಿಕ ಹಕ್ಕುಗಳನ್ನು ರಕ್ಷಿಸುವಲ್ಲಿ ಭಾರತ ಕಳಪೆ ಮಟ್ಟದಲ್ಲಿದ್ದು, 158 ದೇಶಗಳಲ್ಲಿ 151 ನೇ ಸ್ಥಾನಕ್ಕೆ ಕುಸಿದಿದೆ ಎಂದು  ಆಕ್ಸ್‌ಫ್ಯಾಮ್‌ನ Commitment to Reducedung Equality Index  (ಸಿಆರ್‌ಐಐ) ವರದಿಯಲ್ಲಿ ಹೇಳಿದೆ.

ದುರ್ಬಲ ಕಾರ್ಮಿಕ ಹಕ್ಕುಗಳು ಮತ್ತು ಉದ್ಯೋಗ ಸೈಷ್ಟಿಯ ಕುಸಿತದಿಂದಾಗಿ ಭಾರತವು 141ನೇ ಸ್ಥಾನದಿಂದ 151ಕ್ಕೆ ಇಳಿದಿದೆ.

ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು (ಶೇ.86.9) ಪುರುಷ ಕಾರ್ಮಿಕರು ಅಸಂಘಟಿತ ವಲಯದಲ್ಲಿದ್ದಾರೆ. ಈ ವಲಯದಲ್ಲಿ ಆಂಧ್ರ ಪ್ರದೇಶದ ಮಹಿಳೆಯರು( ಶೇಕಡಾ 73.6 ) ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಸಿಆರ್‌ಐಐ ವರದಿ ಹೇಳಿದೆ.

ದೆಹಲಿಯಲ್ಲಿ ಅಸಂಘಟಿತ ವಲಯದ ಉದ್ಯೋಗಸ್ಥ  ಮಹಿಳೆಯರ ಸಂಖ್ಯೆ ಶೇಕಡಾ 31.8 ಮತ್ತು ಪುರುಷರು 64.8 ರಷ್ಟಿದ್ದಾರೆ. ಕೊರೊನಾ ಸೋಂಕಿನ ಕಾರಣ  ಅಸಮಾನತೆಯ ಪ್ರಮಾಣ ಹೆಚ್ಚಾಗಿದ್ದು, ಇದನ್ನು ಕಡಿಮೆ ಮಾಡಲು ಸರ್ಕಾರಗಳು ಕಾರ್ಯಪ್ರೌವೃತ್ತವಾಗುವ ತುರ್ತು ಅವಶ್ಯಕತೆಯಿದೆ ಎಂದು ವರದಿ ಶಿಫಾರಸು ಮಾಡಿದೆ.

ಇದನ್ನೂ ಓದಿ: ಮೋದಿಯವರೇ ಸುರಂಗದಲ್ಲಿ ಕೈ ಬೀಸುವುದನ್ನು ನಿಲ್ಲಿಸಿ; ದೇಶದ ಜನರ ಪ್ರಶ್ನೆಗಳಿಗೆ ಉತ್ತರಿಸಿ: ರಾಹುಲ್‌ಗಾಂಧಿ

ಒಟ್ಟಾರೆಯಾಗಿ, ಭಾರತವು ಸರ್ಕಾರದ ನೀತಿಗಳು ಮತ್ತು ಶಿಕ್ಷಣ, ಆರೋಗ್ಯ, ಸಾಮಾಜಿಕ ರಕ್ಷಣೆ, ತೆರಿಗೆ ಮತ್ತು ಕಾರ್ಮಿಕರ ಹಕ್ಕುಗಳ ಸಾರ್ವಜನಿಕ ಸೇವೆಗಳ ಕ್ಷೇತ್ರಗಳಲ್ಲಿನ ಕ್ರಮಗಳ ಕೋಷ್ಟಕದಲ್ಲಿ 159 ದೇಶಗಳ ಪೈಕಿ ಭಾರತಕ್ಕೆ 129 ಸ್ಥಾನ ಸಿಕ್ಕಿದೆ ಎಂದು ಸಿಆರ್‌ಐಐ ಸೂಚ್ಯಂಕದಲ್ಲಿ ಹೇಳಿದೆ.

ಭಾರತದ ಆರೋಗ್ಯ ಬಜೆಟ್ ದೇಶದ ಜನಸಂಖ್ಯೆಯ ನಾಲ್ಕನೇ ಒಂದರಷ್ಟು ಜನ ಸಂಖ್ಯೆಗೆಷ್ಟೇ ದೊರೆಯಬಹುದಾದ ಗಾತ್ರದ್ದಾಗಿದ್ದು, ದೇಶದ ಶೇ.70 ಕ್ಕಿಂತ ಹೆಚ್ಚು ಜನರು ತಮ್ಮ ಆರೋಗ್ಯ ವೆಚ್ಚಗಳನ್ನು ಸ್ವತಃ ಅವರೇ ಪೂರೈಸಿಕೊಳ್ಳುತ್ತಿದ್ದಾರೆ.


ಇದನ್ನೂ ಓದಿ: ಬಿಎಸ್‌ವೈ ಪುತ್ರ ವಿಜಯೇಂದ್ರ ವಿರುದ್ಧ FIR ಇಲ್ಲ, ತನಿಖೆ ಇಲ್ಲ: ಪೊಲೀಸರ ವಿರುದ್ಧ ಕೋರ್ಟ್‌ಗೆ ಜಸಂಪ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights