ಹೊಸ ಮುಖಗಳಿಗೆ ಮಣೆ ಹಾಕಿದ ಬಿಜೆಪಿ : ಆರ್‌ಆರ್ ನಗರ ಮತ್ತು ಸಿರಾ ಕ್ಷೇತ್ರದ ಉಪಚುನಾವಣೆಯಲ್ಲಿ ಜಯ ಯಾರಿಗೆ?

ಆಡಳಿತಾರೂಢ ಭಾರತೀಯ ಜನತಾ ಪಕ್ಷ ಮಂಗಳವಾರ ಕರ್ನಾಟಕ ಉಪಚುನಾವಣೆ ಅಭ್ಯರ್ಥಿಯನ್ನು ಘೋಷಿಸಿದೆ. ಪಕ್ಷದ ಹೊಸ ಮುಖಗಳಾದ ಎನ್ ಮುನಿರತ್ನ ರಾಜರಾಜೇಶ್ವರಿ ನಗರದಿಂದ ಮತ್ತು ಸಿರಾದಿಂದ ಡಾ.ರಾಜೇಶ್ ಗೌಡ ಸ್ಪರ್ಧಿಸಲಿದ್ದಾರೆ. ಎರಡೂ ಅಭ್ಯರ್ಥಿಗಳು ಪಕ್ಷಕ್ಕೆ ಹೊಸ ಮುಖಗಳು. ಮುನಿರತ್ನ ಅವರು ಮಾಜಿ ಕಾಂಗ್ರೆಸ್ ಶಾಸಕರಾಗಿದ್ದು, 2019 ರಲ್ಲಿ ಕಾಂಗ್ರೆಸ್ ನಿಂದ ಬಿಜೆಪಿಗೆ ಜಿಗಿದ 11 ಮಂದಿಯಲ್ಲಿ ಒಬ್ಬರಾಗಿದ್ದಾರೆ. ಇನ್ನೂ ಡಾ.ರಾಜೇಶ್ ಗೌಡ ಅವರು ಚಿತ್ರದುರ್ಗದ ಮಾಜಿ ಕಾಂಗ್ರೆಸ್ ಸಂಸದ ಸಿ ಪಿ ಮುದಲಗಿರಿಯಪ್ಪ ಅವರ ಪುತ್ರ.

ಮುಖ್ಯ ನ್ಯಾಯಮೂರ್ತಿ ಶರದ್ ಬೊಬ್ಡೆ, ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಮತ್ತು ನ್ಯಾಯಮೂರ್ತಿ ವಿ ರಾಮಸುಬ್ರಮಣಿಯನ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠ ಬಿಜೆಪಿ ರಾಜ್ಯ ಘಟಕ ಕಾರ್ಯದರ್ಶಿ ತುಳಸಿ ಮುನಿರಾಜು ಗೌಡ ಅವರು ಸಲ್ಲಿಸಿದ್ದ ವಿಶೇಷ ರಜೆ ಅರ್ಜಿಗಳನ್ನು ವಜಾಗೊಳಿಸಿದೆ. ಇದರ ಬೆನ್ನಲ್ಲೇ ಬಿಜೆಪಿ ಆರ್‌ಆರ್ ನಗರ ಉಪಚುನಾವಣೆಗೆ ಮುನಿರಾಜು ಹೆಸರನ್ನು ಘೋಷಿಸಿತು.

ಆರ್ಆರ್ ನಗರ ಉಪಚುನಾವಣೆಯನ್ನು ಗೆಲ್ಲುವ ಭರವಸೆಯನ್ನು ಬಿಜೆಪಿ ಹೊಂದಿದ್ದು ಅಭ್ಯರ್ಥಿಯ ಪ್ರಭಾವದ ಮೇಲೆ ವಿಶ್ವಾಸ ಇಟ್ಟುಕೊಂಡಿದೆ. ಇನ್ನೂ ಐಎಎಸ್ ದಿವಂಗತ ಡಾ.ರವಿ ಅವರ ಪತ್ನಿ ರಾಜಕೀಯಕ್ಕೆ ಹೊಸಬಳಾದ ಎಚ್.ಕುಸುಮಾ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಜೆಡಿಎಸ್ ಸ್ಥಳೀಯ ಘಟಕದ ಮುಖ್ಯಸ್ಥ ಕೃಷ್ಣಮೂರ್ತಿಯನ್ನು ಇಲ್ಲಿ ಆಯ್ಕೆ ಮಾಡಿದೆ.

ಹೀಗಾಗಿ ಆರ್ಆರ್ ನಗರ ಕ್ಷೇತ್ರದ ಉಪಚುನಾವಣೆ ಕಳೆಗಟ್ಟಿದ್ದು, ಇಂದು ಬಿಜೆಪಿ , ಕಾಂಗ್ರೆಸ್ ಹಾಗೂ ಜೆಡಿಎಸ್ ಮೂರು ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಭಾರೀ ಬಿಗಿ ಭದ್ರತೆಯೊಂದಿಗೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಮತ್ತು ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ವಿ. ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ನಾಮಪತ್ರ ಸಲ್ಲಿಸಲು ರಾಜರಾಜೇಶ್ವರಿನಗರದ ಬಿಬಿಂಪಿ ಕಚೇರಿಗೆ ತಲುಪಿದರು.

ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್ ಗೌಡ, ಕಾಂಗ್ರೆಸ್‌ನಿಂದ ಟಿ. ಬಿ. ಜಯಚಂದ್ರ, ಜೆಡಿಎಸ್‌ನಿಂದ ಅಮ್ಮಾಜಮ್ಮ ಅಭ್ಯರ್ಥಿಗಳಾಗಿದ್ದಾರೆ. ಇವರು ಸಹ ಇಂದು ನಾಮಪತ್ರ ಸಲ್ಲಿಸಿದ್ದಾರೆ.

ಉಪಮುಖ್ಯಮಂತ್ರಿಗಳಾದ ಗೋವಿಂದ್ ಕಾರ್ಜೋಲ್ ಮತ್ತು ಡಾ.ಅಶ್ವತ್ ನಾರಾಯಣ್, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಬಿ.ವೈ.ವಿಜೇಂದ್ರ, ಸಂಸದ ಪಿಸಿ ಮೋಹನ್, ಎ ನಾರಾಯಣಸ್ವಾಮಿ, ಪೂರ್ಣಿಮಾ ಶ್ರೀನಿವಾಸ್ ಮತ್ತು ತಿಪ್ಪೇಶವಾಮಿ ಅವರು ಸಿರಾ ಕ್ಷೇತ್ರಕ್ಕೆ ಎಂಟು ಜನ ಉಸ್ತುವಾರಿ ಹೊಂದಿದ್ದಾರೆ. ಆರ್.ಆರ್ ನಗರ ಉಸ್ತುವಾರಿ ಅರವಿಂದ ಲಿಂಬಾವಳಿ, ಆರ್ ಅಶೋಕ್, ಎಸ್.ಟಿ ಸೋಮಶೇಖರ್, ಬೈರಥಿ ಬಸವರಾಜ್, ಎಸ್.ಆರ್.ವಿಶ್ವನಾಥರೆ ಅವರಿಗೆ ನೀಡಲಾಗಿದೆ.

ಇದರಿಂದ ಪಕ್ಷದಲ್ಲಿ ಪೈಪೋಟಿ ಹೆಚ್ಚಾಗಿದ್ದು ಯಾವ ಪಕ್ಷಕ್ಕೆ ಜಯ ಸಿಗಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights