ಟೋಕಿಯೋ ಒಲಿಂಪಿಕ್ಸ್: ಭಾರತಕ್ಕೆ ಮೊದಲ ಚಿನ್ನ ಗೆಲ್ಲುವ ಭರವಸೆ ಹುಟ್ಟಿಸಿದ ಕರ್ನಾಟಕ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್!
ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಸಂದಿಸಲಿದೆ. ಕರ್ನಾಟಕ ಮೂಲದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಅವರು ಒಲಿಂಪಿಕ್ಸ್ನ ಫೈನಲ್ನಲ್ಲಿ ಗಾಲ್ಫ್ ಸ್ಪರ್ಧೆಯ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸುವ ನಿರೀಕ್ಷೆ ಇದ್ದು, ಚಿನ್ನದ ಪದಕ ಗೆಲ್ಲುವ ಸಾಧ್ಯತೆ ಇದೆ. ಈ ಮೂಲಕ ಒಲಿಂಪಿಕ್ಸ್ನಲ್ಲಿ ಮೊದಲ ಚಿನ್ನ ಗೆದ್ದ ಭಾರತೀಯ ಎಂಬ ಖ್ಯಾತಿಯನ್ನು ಅದಿತಿ ಪಡೆದುಕೊಳ್ಳಲಿದ್ದಾರೆ.
ಫೈನಲ್ನಲ್ಲಿ ಅಮೆರಿಕಾದ ನೆಲ್ಲಿ ಕೊರ್ಡಾ ಅವರ ವಿರುದ್ದ ಅದಿತಿ ಮುಖಾಮುಖಿಯಾಗಿದ್ದರು. ಮೂರು ಸುತ್ತಿನಲ್ಲಿ ಎರಡು ಸುತ್ತುಗಳು ಟೈ ಆಗಿದ್ದವು. ಕೊನೆಯ ಸುತ್ತಿನಲ್ಲಿ ಅದಿತಿ ಗೆಲುವು ಸಾಧಿಸಿದ್ದಾರೆ. ನಾಲ್ಕನೇ ಸುತ್ತು ನಾಳೆ ಬೆಳಗ್ಗೆ ಆರಂಭವಾಲಿದ್ದು, ಫೈನಲ್ ಮ್ಯಾಚ್ನಲ್ಲಿ ಗೆಲ್ಲುವ ಸಾಧ್ಯತೆ ಇದೆ.
2016ರ ರಿಯೋ ಒಲಿಂಪಿಕ್ಸ್ನಲ್ಲಿ ಅರ್ಹತೆ ಪಡೆದುಕೊಂಡಿದ್ದ ಅದಿತಿ, ಪದಕ ಗೆಲ್ಲುವಲ್ಲಿ ವಿಫಲವಾಗಿದ್ದರು. ಇದೀಗ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಅವರು ಚಿನ್ನದ ಪದಕದತ್ತ ಚಿತ್ತ ಹರಿಸಿದ್ದಾರೆ.
ಇದೂವರೆಗೆ ಅದಿತಿ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು, 17 ಪದಕಗಳನ್ನು ಗೆದ್ದಿದ್ದಾರೆ.
ಇದನ್ನೂ ಓದಿ: 11 ಜನರ ಭಾರತ ಮಹಿಳಾ ಫುಟ್ಬಾಲ್ ತಂಡದಲ್ಲಿ ಐವರು ಕನ್ನಡತಿಯರಿಗೆ ಸ್ಥಾನ!

