11 ಜನರ ಭಾರತ ಮಹಿಳಾ ಫುಟ್‌ಬಾಲ್‌ ತಂಡದಲ್ಲಿ ಐವರು ಕನ್ನಡತಿಯರಿಗೆ ಸ್ಥಾನ!

ಬೆಳಗಾವಿಗೆ ಇಂದು ಹೆಮ್ಮೆ ಪಡುವ ಕ್ಷಣವಾಗಿದೆ. ಈ ತಿಂಗಳು ಉಕ್ರೇನ್‌ನಲ್ಲಿ ನಡೆಯುತ್ತಿರುವ ಮಿನಿ ಫುಟ್‌ಬಾಲ್ ಮಹಿಳಾ ವಿಶ್ವಕಪ್ -2021ರಲ್ಲಿ ಭಾರತೀಯ ಫುಟ್‌ಬಾಲ್‌ ತಂಡ ತೆರಳುತ್ತಿದ್ದು, ಈ ತಂಡದಲ್ಲಿ ಬೆಳಗಾವಿಯ ಮೂವರು ಯುವತಿಯು ಸ್ಥಾನ ಪಡೆದುಕೊಂಡಿದ್ದಾರೆ.

ಅಂಜಲಿ, ಅದಿತಿ ಮತ್ತು ಪ್ರಿಯಾಂಕಾ ಎಂಬ ಮೂವರು ವಿದ್ಯಾರ್ಥಿನಿಯರು ಬೆಳಗಾವಿಯ ಬೇರೆ ಬೇರೆ ಪದವಿ ಕಾಲೇಜುಗಳಲ್ಲಿ ಓದುತ್ತಿದ್ದಾರೆ. ಇವರಲ್ಲದೆ, ಬೆಂಗಳೂರಿನ ಸಂಜನಾ ಮತ್ತು ವಿಭಾ ಕೂಡ ಸ್ಥಾನ ಪಡೆದಿದ್ದಾರೆ. ಇದರೊಂದಿಗೆ 11 ಕ್ರೀಡಾಪಟುಗಳಿರುವ ಭಾರತೀಯ ತಂಡದಲ್ಲಿ ಐವರು ಕನ್ನಡಿಗರು ಸ್ಥಾನ ಪಡೆದುಕೊಂಡಿದ್ದಾರೆ.

ಇವರೆಲ್ಲರೂ ಜುಲೈ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ಎಂಟು ದಿನಗಳ ಕಾಲ ವಿಶೇಷ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು.
ಅಂಜಲಿ, ಅದಿತಿ ಮತ್ತು ಪ್ರಿಯಾಂಕಾ ಬೆಳಗಾವಿ ಯುನೈಟೆಡ್ ಫುಟ್ಬಾಲ್ ಅಕಾಡೆಮಿಯಲ್ಲಿ ಅಭ್ಯಾಸ ಮಾಡುತ್ತಾರೆ ಮತ್ತು ಮತಿನ್ ಇನಾಮದಾರ್ ಇವರ ಕೋಚ್‌ ಆಗಿದ್ದಾರೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸೂಪರ್ ಡಿವಿಷನ್ ಲೀಗ್ ಪಂದ್ಯಗಳಲ್ಲಿ ಇವರೆಲ್ಲರೂ ಭಾಗವಹಿಸಿದ್ದರು. ನಂತರ ಅವರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲಾಯಿತು. ಅವರು ಆಗಸ್ಟ್ 6 ರಂದು ದೆಹಲಿಗೆ ತೆರಳಲಿದ್ದು, ಅಲ್ಲಿಂದ ಉಕ್ರೇನ್‌ಗೆ ಪ್ರಯಾಣಿಸಲಿದ್ದಾರೆ.

“ನಾನು ಭಾರತೀಯ ತಂಡದಲ್ಲಿ ಆಡಲು ಉತ್ಸುಕಳಾಗಿದ್ದೇನೆ. ನಾನು ಆಯ್ಕೆಯಾದ ನಂತರ ಅಭಿನಂದನಾ ಸಂದೇಶಗಳು ಹರಿದು ಬರುತ್ತಿವೆ. ನನ್ನ ಚೊಚ್ಚಲ ಅಂತರಾಷ್ಟ್ರೀಯ ಸ್ಪರ್ಧೆ ಇದಾಗಿದ್ದು, ಉತ್ತಮ ಪ್ರದರ್ಶನ ನೀಡುತ್ತೇನೆ ಎಂದು ಆಶಿಸುತ್ತೇನೆ” ಎಂದು ಬೆಳಗಾವಿಯ ಕೆಎಲ್‌ಇ ಲಿಂಗರಾಜ್ ಕಾಲೇಜಿನ ಬಿಕಾಂ ವಿದ್ಯಾರ್ಥಿನಿ ಅಂಜಲಿ ಹಿಂಡಲಗೇಕರ್ ಹೇಳಿದ್ದಾರೆ.

ಅದಿತಿ ಜಾಧವ್ ಅದೇ ಕಾಲೇಜಿನಲ್ಲಿ ಬಿಎ ವಿದ್ಯಾರ್ಥಿಯಾಗಿದ್ದಾರೆ. ಪ್ರಿಯಾಂಕ ಕಾಂಗ್ರಾಲ್ಕರ್ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬಿಕಾಂ ಓದುತ್ತಿದ್ದಾರೆ. 23 ವರ್ಷದೊಳಗಿನ ಮಿನಿ ಫುಟ್ಬಾಲ್ ಮಹಿಳಾ ವಿಶ್ವಕಪ್ -2021 ಏಳು-ಬದಿಯ ಪಂದ್ಯಾವಳಿಯಾಗಿದ್ದು, ಇದು ಉಕ್ರೇನ್‌ನ ಕೀವ್‌ನಲ್ಲಿ ಆಗಸ್ಟ್ 11 ರಿಂದ 16 ರವರೆಗೆ ನಡೆಯಲಿದೆ.

ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್‌: 41 ವರ್ಷಗಳ ನಂತರ ಫಲ; ಭಾರತೀಯ ಪುರುಷರ ಹಾಕಿ ತಂಡಕ್ಕೆ ಕಂಚಿನ ಪದಕ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights