ಟೋಕಿಯೋ ಒಲಿಂಪಿಕ್ಸ್‌: 41 ವರ್ಷಗಳ ನಂತರ ಫಲ; ಭಾರತೀಯ ಪುರುಷರ ಹಾಕಿ ತಂಡಕ್ಕೆ ಕಂಚಿನ ಪದಕ!

ಭಾರತೀಯ ಪುರುಷರ ಹಾಕಿ ತಂಡವು ಬರೋಬ್ಬರಿ 41 ವರ್ಷಗಳ ನಂತರ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದು ಹರ್ಷ ವ್ಯಕ್ತಪಡಿಸಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕಕ್ಕಾಗಿ ಜರ್ಮನಿ ವಿರುದ್ಧ 5-4 ಅಂತರದಲ್ಲಿ ಗೆಲುವು ಸಾಧಿಸಿದೆ.

ಮಂಗಳವಾರ ನಡೆದ ಸೆಮಿಫೈನಲ್‌ನಲ್ಲಿ ಭಾರತ ತಂಡವು ಬೆಲ್ಜಿಯಂ ವಿರುದ್ದ 2-5 ಅಂತರದಲ್ಲಿ ಸೋಲುಂಡು ಚಿನ್ನದ ಕನಸನ್ನು ಕೈಬಿಟ್ಟಿತ್ತು. 1980 ರಲ್ಲಿ ಮಾಸ್ಕೋ ಕ್ರೀಡಾಕೂಟದಲ್ಲಿ ಭಾರತವು ಕೊನೆಯ ಬಾರಿಗೆ ಹಾಕಿಯಲ್ಲಿ ಪದಕ ಗೆದ್ದಿತ್ತು.

ಸಿಮ್ರಂಜಿತ್ ಸಿಂಗ್ ಎರಡು ಗೋಲ್‌ ಮತ್ತು ಹಾರ್ದಿಕ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್ ಮತ್ತು ರೂಪಿಂದರ್ ಪಾಲ್ ಸಿಂಗ್ ತಲಾ ಒಂದೊಂದು ಗೋಲ್‌ ದಾಖಲಿಸಿದರು. ಮೊದಲ ಕ್ವಾರ್ಟರ್‌ನ ಎರಡನೇ ನಿಮಿಷದಲ್ಲಿ ಜರ್ಮನಿಯ ತೈಮೂರ್ ಒರುಜ್ ಗೋಲು ಗಳಿಸುವುದರೊಂದಿಗೆ ಜರ್ಮನಿ ತಂಡವು ಆರಂಭಿಕ ಮುನ್ನಡೆ ಸಾಧಿಸಿತ್ತು.

ಸಿಮ್ರಂಜಿತ್ ಸಿಂಗ್ ಆಟದ 17 ನೇ ನಿಮಿಷದಲ್ಲಿ ಗೋಲು ಗಳಿಸುವುದರೊಂದಿಗೆ ಭಾರತದ ಅಂಕವನ್ನು 1-1 ಕ್ಕೆ ಏರಿಸಿದರು. ಆದಾಗ್ಯೂ ಎರಡನೆ ಕ್ವಾರ್ಟರ್‌ನಲ್ಲಿ ಜರ್ಮನಿ ಮತ್ತೆ ಎರಡು ಗೋಲುಗಳನ್ನು ಗಳಿಸಿ 3-1 ಮುನ್ನಡೆ ಸಾಧಿಸಿತು.

ಇದನ್ನೂ ಓದಿ: ಒಲಿಂಪಿಕ್ಸ್‌ನಲ್ಲಿ ಅಬ್ಬರಿಸುತ್ತಿರುವ ಭಾರತೀಯ ವನಿತೆಯರು; ಮತ್ತೊಂದು ಪದಕ ತಂದ ಲವ್ಲಿನಾ!

ಎರಡನೇ ಕ್ವಾರ್ಟರ್‌‌ನಲ್ಲಿ ಹಾರ್ದಿಕ್ ಸಿಂಗ್‌ ಮತ್ತು ಹರ್ಮನ್‌ಪ್ರೀತ್ ಸಿಂಗ್ ಮತ್ತೊಮ್ಮೆ ಭಾರತಕ್ಕೆ ತಲಾ ಒಂದೊಂದು ಗೋಲ್‌ ನೀಡುವುದರೊಂದಿಗೆ ತಂಡವನ್ನು 3-3 ಕ್ಕೆ ತಂದು ಸಮಬಲ ಗೊಳಿಸಿದರು.

ಮೂರನೆಯ ಕ್ವಾರ್ಟರ್‌‌ನಲ್ಲಿ ರುಪಿಂದರ್ ಪಾಲ್ ಸಿಂಗ್ ತನ್ನ ಪೆನಾಲ್ಟಿ ಸ್ಟ್ರೋಕ್ ನಲ್ಲಿ ಭಾರತಕ್ಕೆ 4-3 ಮುನ್ನಡೆಯ ಗೋಲ್ ದಾಖಲಿಸಿದರು ನೀಡಿದರು. ನಂತರ ಸಿಮ್ರಂಜಿತ್ ಸಿಂಗ್ ಪಂದ್ಯದ ಎರಡನೇ ಗೋಲು ಗಳಿಸಿ ಭಾರತಕ್ಕೆ 5-3 ಮುನ್ನಡೆ ತಂದುಕೊಟ್ಟರು.

ಜರ್ಮನಿ ಅಂತಿಮ ಕ್ವಾರ್ಟರ್‌ನಲ್ಲಿ ಪೆನಾಲ್ಟಿ ಕಾರ್ನರ್‌ ಮೂಲಕ ಒಂದು ಗೋಲ್ ಪಡೆಯಲು ಯಶಸ್ವಿಯಾಯಿತು. ಆದಾಗ್ಯೂ, ಭಾರತೀಯ ಆಟಗಾರರು ಸಮರ್ಥವಾಗಿ ಜರ್ಮನಿಯನ್ನು ಎದುರಿಸಿ ಒಂದು ಅಂಕಗಳ ಮುನ್ನಡೆಯನ್ನು ಕಾಯ್ದು ಕೊಳ್ಳುವಲ್ಲಿ ಯಶಸ್ವಿಯಾದರು.

ಆಟ ಮುಗಿಯಲು ಕೆಲವೇ ಸೆಕೆಂಡುಗಳು ಬಾಕಿ ಇರುವಾಗ, ಜರ್ಮನಿಗೆ ಪೆನಾಲ್ಟಿ ಕಾರ್ನರ್‌ ಪಡೆಯುವಲ್ಲಿ ಯಶಸ್ವಿಯಾದರೂ, ಗೋಲಿ ಪಿಆರ್ ಶ್ರೀಜೇಶ್ ಅದನ್ನು ತಡೆದು ಭಾರತವನ್ನು ಗೆಲುವಿನ ದಡಕ್ಕೆ ತಲುಪಿಸಿದರು. ಶ್ರೀಜೇಶ್‌‌ ಪಂದ್ಯದಲ್ಲಿ ಒಟ್ಟು ಒಂಬತ್ತು ಗೋಲ್‌ಗಳನ್ನು ತಡೆದು ಭಾರತದ ಗೆಲುವಿಗೆ ನೆರವಾದ್ದಾರೆ.

ಇದನ್ನೂ ಓದಿ: ಮುರಿದ ಹಾಕಿ ಸ್ಟಿಕ್‌ನಿಂದ ಒಲಿಂಪಿಕ್ಸ್‌ವರೆಗೆ; ಹಸಿವಿನಲ್ಲೂ ಕನಸು ಕಂಡ ಹಾಕಿ ತಂಡದ ನಾಯಕಿ ರಾಣಿ ರಂಪಾಲ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights