ಶಾಸಕ ಜಮೀರ್ ಅಹಮ್ಮದ್ ಮನೆ ಮೇಲೆ ಇಡಿ ದಾಳಿ : ಕೆರಳಿದ ಬೆಂಬಲಿಗರು..!

ಐಎಂಎ ವಂಚನೆ ಪ್ರಕರಣ ಸಂಬಂಧ ಬೆಂಗಳೂರಿನ ಶಾಸಕ ಜಮೀರ್ ಅಹಮ್ಮದ್ ಮನೆ ಮೇಲೆ ಇಡಿ ದಾಳಿ ಮಾಡಿದೆ. ಇಂದು ಬೆಳ್ಳಂಬೆಳಿಗ್ಗೆ ಜಮೀರ್ ಅಹಮ್ಮದ್ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದು ಜಮೀರ್ ಬೆಂಬಲಿಗರು ಪ್ರತಿಭಟನೆಗೆ ಮುಂದಾಗಿದ್ದಾರೆ.

ಜಮೀರ್ ನಿವಾಸದಲ್ಲಿ ಬೆಳಿಗ್ಗೆ 7 ಗಂಟೆಯಿಂದ 45 ಇಡಿ ಅಧಿಕಾರಿಗಳ ತಂಡ ಶೋಧ ನಡೆಸಿದೆ. ಮನೆ, ಪ್ಲ್ಯಾಟ್, ಹಳೆ ಮನೆ, ಕಚೇರಿ, ಆಪ್ತರ ಮನೆ ಒಟ್ಟು 6 ಕಡೆ ಶೋಧ ಕಾರ್ಯ ನಡೆಯುತ್ತಿದೆ. ರೋಷನ್ ಬೇಗ್ ಐಎಂಎ ಕಂಪನಿಯಿಂದ ಸುಮಾರು 400 ಕೋಟಿ ಪಡೆದಿದ್ದ ಆರೋಪ ಕೇಳಿ ಬಂದಿತ್ತು.  ಈ ಬಗ್ಗೆ ಸಿಬಿಐ ಅಧಿಕಾರಿಗಳೂ ಸಹ ತನಿಖೆ ನಡೆಸಿದ್ದರು. ಸದ್ಯ ಇದೇ ವಿಚಾರವಾಗಿ ಇಡಿ ದಾಳಿ ನಡೆದಿದ್ದು, ಕಂಟೋನ್ಮಂಟ್ ಬಳಿಯ ಜಮೀರ್ ನಿವಾಸಕ್ಕೆ ಬೆಂಬಲಿಗರ ದೊಡ್ಡ ದಂಡೆ ಆಗಮಿಸುತ್ತಿದೆ. ‘ವಿನಾಕಾರಣ ಬಿಜೆಪಿ ಜಮೀರ್ ಅವರನ್ನು ಟಾರ್ಗೇಟ್ ಮಾಡುತ್ತಿದ್ದಾರೆ. ಇದು ರಾಜಕೀಯ ಪ್ರೇರೇಪಿತವಾದಂತಹ ದಾಳಿ’ ಎಂದು ಆರೋಪಿಸುತ್ತಿದ್ದಾರೆ.

‘ಶಶಿಕಲಾ ಜೊಲ್ಲೆ ಅಕ್ರಮವೆಸಗಿದ್ದಾರೆಂದು ಗೊತ್ತಿದ್ದರು ತಿಳಿದು ಬಿಜೆಪಿ ಅವರಿಗೆ ಸಚಿವ ಸ್ಥಾನ ಕೊಟ್ಟಿದೆ. ಒಂದೇ ಒಂದು ಕೇಸ್ ದಾಖಲಾಗಿಲ್ಲ. ವಿಚಾರಣೆ ಕೂಡ ಆಗಿಲ್ಲ. ಯಡಿಯೂರಪ್ಪ ಮಗನ ಮೇಲೆ ಭ್ರಷ್ಟಚಾರದ ಆರೋಪ ಇಲ್ವಾ? ಶ್ರೀರಾಮುಲು ಅವರ ಮಗಳ ಅದ್ದೂರಿ ಮದುವೆ ಮಾಡಿದ್ದಾರೆ. ಅವರಿಗೆ ಅಷ್ಟೊಂದು ಹಣ ಎಲ್ಲಿಂದ ಬಂತು ಅವರ ಮನೆ ಮೇಲೆ ಯಾಕೆ ಐಟಿ, ಇಡಿ ದಾಳಿ ಮಾಡಿಲ್ಲ’ ಎಂದು ಜಮೀರ್ ಬೆಂಬಲಿಗರು ಆಕ್ರೊಶಗೊಂಡಿದ್ದಾರೆ. ಜಮೀರ್ ಬೆಂಬಲಿಗರ ಜಮಾಣವಣೆಯಿಂದ ಕಂಟೋನ್ಮಂಟ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿದೆ.

ಐಎಂಎ ಸಂಸ್ಥಾಪಕ ಮನ್ಸೂರ್ ಖಾನ್ ನಿಂದ 400 ಕೋಟಿ ಪಡೆದ ಆರೋಪ ಇದೆ. ಜೊತೆಗೆ ವಿದೇಶಗಳಲ್ಲಿ ಕೋಟ್ಯಾಂತರ ರೂಪಾಯಿ  ಹೂಡಿಕೆ ಮಾಡಿರುವ ಬಗ್ಗೆ ಇಡಿ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ ಎನ್ನಲಾಗುತ್ತಿದೆ. ಮನ್ಸೂರ್ ಅವರೊಂದಿಗಿನ ನಂಟೆ ಜಮೀರ್ ಗೆ ಕಂಟಕವಾಗಿದೆ. ಕೋಟಿ ಕೋಟಿ ಒಡೆಯನಿಗೆ ಸಂಕಷ್ಟ ಎದುರಾಗಿದೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights