ಸಾಮಾಜಿಕ ಜಾಲತಾಣಿಗರ ಪ್ರಶಂಸೆ ಪಡೆದ ಬುಲೆರೋ ಲೈಬ್ರರಿ

ಲುಧಿಯಾನದಲ್ಲಿ ಚಕ್ರಗಳ ಮೇಲೆ (ಜೀಪ್‌ನಲ್ಲಿ) ಗ್ರಂಥಾಲಯವನ್ನು ನಡೆಸುತ್ತಿರುವ ವ್ಯಕ್ತಿಯ ಫೋಟೋಗಳನ್ನು ಉದ್ಯಮಿ ಆನಂದ್ ಮಹಿಂದ್ರಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಸಾಮಾಜಿಕ-ಧಾರ್ಮಿಕ ಸಂಘಟನೆಯಾದ ಗುರು ಗೋವಿಂದ್‌ ಸಿಂಗ್‌ ಸ್ಟಡಿ ಸರ್ಕಲ್‌ ಸಂಸ್ಥೆಗೆ ಸೇರಿದ ಬುಲೆರೋ ಕಾರಿನ್ನು ಗಾಜಿನ ಪುಸ್ತಕದ ಗ್ರಂಥಾಲಯವನ್ನಾಗಿ ಮಾರ್ಪಡಿಸಲಾಗಿರುವ ಫೋಟೋವನ್ನು ಮಹೀಂದ್ರಾ ಹಂಚಿಕೊಂಡಿದ್ದಾರೆ.

Image

“ಬೊಲೆರೊದಿಂದ ಪುಸ್ತಕಗಳು. ರಸ್ತೆಯ ಮೇಲೆ ಇದು ನಿಜಕ್ಕೂ ಉತ್ತಮವಾದ ಕಾರ್ಯವಾಗಿದೆ. ಈ ಚಿತ್ರಗಳನ್ನು ಲುಧಿಯಾನಾದ ನನ್ನ ಸ್ನೇಹಿತ ಮಿನ್ನೀ ಹಂಚಿಕೊಂಡಿದ್ದಾರೆ” ಎಂದು ಮಹೀಂದ್ರಾ ಪೋಸ್ಟ್ ಮಾಡಿದ್ದಾರೆ.

“ಹರ್ಜಿಂದರ್ ಸಿಂಗ್ ಅವರು ಈ ರೋಡ್‌ ಲೈಬ್ರರಿಯನ್ನು ನಡೆಸುತ್ತಿದ್ದಾರೆ. ಜನರು ಡಿಜಿಟಲ್ ಪ್ರಪಂಚದ ಹೊರತಾಗಿಯೂ ಪುಸ್ತಕಗಳನ್ನು ಹಿಡಿದಿಟ್ಟುಕೊಳ್ಳಬೇಕು ಮತ್ತು ಓದಬೇಕು ಎಂದು ಅವರು ಭಾವಿಸುತ್ತಾರೆ” ಎಂದು ಅವರು ಹೇಳಿದ್ದಾರೆ.

ಮೊಬೈಲ್ ಗ್ರಂಥಾಲಯವಾಗಿ ವಾಹನವನ್ನು ಬಳಸುವ ವಿಧಾನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಒರಟಾದ ನೋಟಕ್ಕೆ ಹೆಸರುವಾಸಿಯಾದ ಬೊಲೆರೊವನ್ನು ಉತ್ತಮ ಕೆಲಸಕ್ಕಾಘಿ ಬಳಸುತ್ತಿರುವುದಕ್ಕೆ ಹಾಗೂ ಬೊಲೆರೊವನ್ನು ಮಾರ್ಪಡಿಸಿದ ವಿಧಾನ ಮತ್ತು ಯೋಜನೆಯನ್ನು ರೂಪಿಸಿದವರ ಮೇಲೆ ಶ್ಲಾಘನೆ ವ್ಯಕ್ತವಾಗಿದೆ.


ಇದನ್ನೂ ಓದಿ: ತಲಾ ಆದಾಯದಲ್ಲಿ ಭಾರತವನ್ನು ಹಿಂದಿಕ್ಕಿದ ಬಾಂಗ್ಲಾದೇಶ: ದಕ್ಷಿಣ ಏಷ್ಯಾದಲ್ಲಿ ಭಾರತವೇ ಮೂರನೇ ಬಡರಾಷ್ಟ್ರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights