ಎಟಿಎಂನಲ್ಲಿ ಹಾವು : ಹಣ ತೆಗೆದುಕೊಳ್ಳಲು ಹೋದ ಮಂದಿ ಶಾಕ್…!
ಗಾಜಿಯಾಬಾದ್‌ನ ಎಟಿಎಂನಲ್ಲಿ ಹಣ ತೆಗೆಯಲು ಹೋದ ಜನ ಭಯಭೀತರಾಗಿ ಎದ್ನೋ ಬಿದ್ನೋ ಅಂತ ಆಚೆಗೆ ಓಡಿ ಬಂದಿದ್ದಾರೆ. ಎಟಿಎಂನಲ್ಲಿ ಹಣ ಪಡೆಯಲು ಹೋದವರಿಗೆ ಹಾವು ಕಾಣಿಸಿಕೊಂಡಿದ್ದು ಒಳಗಡೆ ಹೋದ ಜನ ಹಾವನ್ನು ಕಂಡು ಶಾಕ್ ಆಗಿದ್ದಾರೆ. ಹಾವು ಎಟಿಎಂನೊಳಗೆ ನುಸುಳುವ ವೀಡಿಯೋವನ್ನು ಜನ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಮಾತ್ರವಲ್ಲ ಈ ವೀಡಿಯೋ ಹಂಚಿಕೊಳ್ಳುತ್ತಿದ್ದಂತೆ ಪ್ರತಿಕ್ರಿಯೆಯಾಗಿ ನೂರಾರು ಜನ ತಮ್ಮ ಅನುಭವಕ್ಕೆ ಬಂದ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಪ್ರಪಂಚದಾದ್ಯಂತ ಹಲವಾರು ಜನರು ಈ ಭಯಾನಕ ಸನ್ನಿವೇಶವನ್ನು ಅನುಭವಿಸಿದ್ದಾರೆ. ವಿಲಕ್ಷಣವಾದ ಸ್ಥಳಗಳಲ್ಲಿ ಹಾವುಗಳನ್ನು ಕಂಡಿದ್ದಾರೆ. ಸಿಂಕ್, ಬೂಟು, ವಿಮಾನ ಹೀಗೆ ಹೆಚ್ಚಾಗಿ ಆಶ್ಚರ್ಯಕರ ಸ್ಥಳಗಳಲ್ಲಿ ಹಾವುಗಳನ್ನು ಕಂಡಿದ್ದು ಆಘಾತಕ್ಕೊಳಗಾಗಿದ್ದಾರೆ.
ಜನರು ಕಂಡ ಕೆಲವು ವಿಚಿತ್ರವಾದ, ಭಯಾನಕ ಸ್ಥಳಗಳು ಇಲ್ಲಿವೆ:
ಶೂನಲ್ಲಿ ಹಾವು :-
ಕಳೆದ ವರ್ಷ ಫೆಬ್ರವರಿಯಲ್ಲಿ, ಸ್ಕಾಟಿಷ್ ಮಹಿಳೆಯೊಬ್ಬಳು ರಜೆಯ ನಂತರ ತನ್ನ ಸಾಮಾನುಗಳಲ್ಲಿ ಹೆಬ್ಬಾವನ್ನು ಕಂಡಾಗ ಆಘಾತಗೊಳಗಾಗಿದ್ದಳು. ತನ್ನ ಸೂಟ್‌ಕೇಸ್‌ನೊಳಗಿನ ಶೂನಲ್ಲಿ ವಿಷಕಾರಿಯಲ್ಲದ ಹಾವು ಆಸ್ಟ್ರೇಲಿಯಾದಿಂದ ಅವಳೊಂದಿಗೆ ಹಿಂದಿರುಗಿತ್ತು.
ಹಾಸಿಗೆ ಮೇಲೆ :-
ಹಾವನ್ನು ಕಂಡುಕೊಳ್ಳುವ ಕೆಟ್ಟ ಸ್ಥಳಗಳಲ್ಲಿ ಇದು ಒಂದಾಗಿರಬಹುದು. 2017 ರಲ್ಲಿ, ಬ್ರಿಸ್ಬೇನ್‌ನ ದಂಪತಿಗಳು ವಿಶ್ವದ ಎರಡನೇ ಅತ್ಯಂತ ವಿಷಪೂರಿತ ಹಾವನ್ನು ತಮ್ಮ ಹಾಸಿಗೆಯಲ್ಲಿ ಅಡಗಿಕೊಂಡಿರುವುದನ್ನು ಕಂಡರು. ಅದೃಷ್ಟವಶಾತ್, ಹಾವನ್ನು ಸುರಕ್ಷಿತವಾಗಿ ತೆಗೆದುಹಾಕಲಾಯಿತು.
ವಾಷಿಂಗ್ ಮಷೀನ್ :-
ಫ್ಲೋರಿಡಾ ಮಹಿಳೆಯೊಬ್ಬಳು ವಾಷಿಂಗ್ ಮಷೀನ್ ನಲ್ಲಿ ಒಂದು ದೊಡ್ಡ ಹೆಬ್ಬಾವು ಜಾರುತ್ತಿರುವುದನ್ನು ಕಂಡು ದಿನಗಳವರೆಗೆ ಗಲಾಟೆ ಮಾಡಿದ್ದಾಳೆ. “ನಾನು ಕೆಳಗೆ ನೋಡಿದಾಗ ಅಲ್ಲಿ ಹಾವಿನ ಚರ್ಮ ಕಂಡಿತು. ಅದು ಜಾರಿಕೊಳ್ಳಲು ಪ್ರಾರಂಭಿಸಿತು. ನಾನು ತುಂಬಾ ಜೋರಾಗಿ ಕಿರುಚಿದೆ. ಇದು ಒಂದು ದೊಡ್ಡ ಹೆಬ್ಬಾವು “ಎಂದು ಎಮಿಲಿ ವಿಸ್ನಿಕ್ ಹೇಳಿದರು.
ಎಟಿಎಂನಲ್ಲಿ :-
ಮತ್ತೊಂದು ಈ ವರ್ಷದ ಆರಂಭದಲ್ಲಿ ಬೈ ಜುಂ ಎನ್ನುವ ಘಟನೆ ನಡೆದಿದೆ. ದೊಡ್ಡ ಹಾವು ಘಜಿಯಾಬಾದ್ನ ಎಟಿಎಂ ಮಷೀನ್ ಒಳಗೆ ಪ್ರವೇಶಿಸುವುದನ್ನು ಚಿತ್ರಿಕರಿಸಲಾಗಿದೆ. ಮೇ ತಿಂಗಳಲ್ಲಿ ಸರ್ಪದ ದೃಶ್ಯಗಳು ಭಾರಿ ವೈರಲ್ ಆಗಿದ್ದವು.
Banks are known to have snakes in their boardrooms. Never seen one that enters an ATM.
I guess after the clean up of NPA and stoppage of loan disbursal services through phone banking the snakes in our system had to find a way to get the money out .
Reminds me of Nagin the movie pic.twitter.com/sInAqxfj6Q— Col DPK Pillay,Shaurya Chakra,PhD (Retd) (@dpkpillay12) May 8, 2020
ಸಿಂಕ್ ನಲ್ಲಿ: –
ಪಾತ್ರಗಳನ್ನು ತೊಳೆಯುವ ಸಿಂಕ್ ನಲ್ಲಿ ಹಾವು ಕಾಣಿಸಿಕೊಂಡಿದೆ.