ಇಂದಿನಿಂದ ಐಪಿಎಲ್‌ ಆರಂಭ; ಮೊದಲ ಪಂದ್ಯದಲ್ಲಿ ಸೆಣೆಸಾಡುವ ತಂಡಗಳ ಬಲ ಹೇಗಿದೆ ಗೊತ್ತೇ?

ವಿಶ್ವದ ಅತೀ ಶ್ರೀಮಂತ ಕ್ರಿಕೆಟ್‌ ಆಟವೆಂದೇ ಖ್ಯಾತಿ ಪಡೆದುಕೊಂಡಿರುವ IPL ನ 13ನೇ ಸರಣಿ ಇಂದಿನಿಂದ ಆರಂಭವಾಗಲಿದೆ. ಮಾರ್ಚ್ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಟೂರ್ನಿ ಕೊರೊನಾ ಕಾರಣದಿಂದಾಗಿ ರದ್ದಾಗುವ ಸೂಚನೆಯಿತ್ತಾದರೂ, ಏಷ್ಯನ್‌ ಕಪ್‌ ರದ್ದಾಗಿದ್ದರಿಂದಾಗಿ ಐಪಿಎಲ್‌ ನಡೆಸಲು ಅವಕಾಶ ದೊರೆತಿದ್ದು, ಯುಎಇಯಲ್ಲಿ ಇಂದು ಸಂಜೆಯಿಂದ ಪ್ರೇಕ್ಷರಿಲ್ಲದ ಟೂರ್ನಿ ಆರಂಭವಾಗಲಿದೆ. ಆದರೆ, ಈ ಬಾರಿ ಕಪ್‌ ನಮ್ದೇ ಎನ್ನುವ ಕನ್ನಡಿಗರ ಘೋಷಣೆ ಮೌನತಾಳಿದೆ.

ಅಬುಧಾಬಿಯ ಶೇಖ್ ಝಾಯದ್ ಸ್ಟೇಡಿಯಂ ನಲ್ಲಿ ಟೂರ್ನಿಯ ಮೊಲದ ಆಟದಲ್ಲಿ ಕಳೆದ ಬಾರಿ ಕಪ್‌ಗೆದ್ದಿದ್ದ ಚೆನೈ ಸೂಪರ್ ಕಿಂಗ್‌ ಮತ್ತು ಮುಂಬೈ ಇಂಡಿಯನ್ಸ್‌ ತಂಡಗಳು ಎದುರಾಗಲಿವೆ.

ಯುಎಇ ರಾಷ್ಟ್ರಗಳಲ್ಲಿರುವ ಕ್ರಿಕೆಟ್‌ ಪಿಚ್​ಗಳು ಸ್ಪಿನ್​ ಬೌಲರುಗಳಿಗೆ ಹೆಚ್ಚು ಸಹಕಾರಿ ಎಂದು ಹೇಳಲಾಗುತ್ತಿದ್ದು, ಇಂದಿನ ಪಂದ್ಯ ರೋಚಕ ಆಟದೊಂದಿಗೆ ಆರಂಭವಾಗುವ ನಿರೀಕ್ಷೆಯಲ್ಲಿ ಕ್ರಿಕೆಟ್‌ ಅಭಿಮಾನಿಗಳು ಹೊಂದಿದ್ದಾರೆ.

ಸಿಎಸ್‌ಕೆ ತಂಡದಲ್ಲಿ ಕೂಲ್‌ ಕ್ಯಾಪ್ಟನ್‌ ಧೋನಿ, ಶೇನ್ ವಾಟ್ಸನ್, ಡುಪ್ಲೆಸಿಸ್​ರಿಂದಾಗಿ ಬಲ ಹೆಚ್ಚಾಗಿದೆ. ಅಲ್ಲದೆ, ಅಲ್‌ರೌಂಡರ್‌ಗಳಾದ ಡ್ವೇನ್ ಬ್ರಾವ್ರೊ, ರವೀಂದ್ರ ಜಡೇಜಾ ಇದ್ದಾರೆ.  ಸ್ಪಿನ್ ಜೋಡಿಯಾಗಿ ಇಮ್ರಾನ್ ತಾಹಿರ್, ಸ್ಯಾಂಟ್ನರ್ ಕೂಡ ಸೂಪರ್​ ಕಿಂಗ್ಸ್​ ತಂಡದಲ್ಲಿರುವುದು ಸಿಎಸ್‌ಕೆ ತಂಡದ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ. ಆದರೂ, ಸುರೇಶ್ ರೈನಾ ತಂಡದಲ್ಲಿಲ್ಲದೇ ಇರುವುದು ಖಾಲಿ ಛಾಚೆಯನ್ನು ತೋರಿಸುತ್ತಿದೆ.

ಇದನ್ನೂ ಓದಿ: IPL 2020: ಖಾಲಿ ಸ್ಟೇಡಿಯಂನಲ್ಲಿ ಐಪಿಎಲ್ ಆಟ- ರೈನಾ, ಭಜ್ಜಿ ಬಚ್ಚಿಟ್ಟಿದ್ದಾರಾ ಭಯಾನಕ ಸೀಕ್ರೆಟ್..?

ಈಗಾಗಲೇ ನಾಲ್ಕು ಬಾರಿ ಐಪಿಎಲ್‌ ಕಿರೀಟ ಹೊತ್ತುಕೊಂಡಿರುವ ಮುಂಬೈ ಇಂಡಿಯನ್ಸ್‌ ತಂಡವನ್ನು ಹಗುವಾಗಿ ಕಾಣಲು ಸಾಧ್ಯವಿಲ್ಲ. ತಂಡದ ಓಪನಿಂಗ್ ಬ್ಯಾಟ್ಸ್‌ಮನ್‌ಗಳಾದ ರೋಹಿತ್‌ ಶರ್ಮಾ ಮತ್ತು ಕ್ವಿಂಟನ್‌ ಡಿ ಕಾಕ್‌ ಜೋಡಿ ಎಲ್ಲಾ ಆಟಗಳಲ್ಲಿಯೂ ಭರ್ಜರಿ ಆರಂಬ ಪ್ರದರ್ಶಿಸಿದ್ದಾರೆ. ಅಲ್ಲದೆ, ಪೊಲಾರ್ಡ್, ಪಾಂಡ್ಯ, ಕ್ರಿಸ್‌ಗೇಲ್‌ ರಂತಹ ಘಾಟಾನುಘಟಿಗಳೂ ತಂಡದಲ್ಲಿದ್ದಾರೆ. ವಿಶ್ವದ ನಂಬರ್ 1 ಏಕದಿನ ಬೌಲರ್ ಟ್ರೆಂಟ್ ಬೌಲ್ಟ್ ಹಾಗೂ ನಂಬರ್ 2 ವೇಗಿ ಜಸ್​ಪ್ರೀತ್ ಬುಮ್ರಾ ಮುನ್ನಡೆಸುತ್ತಿದ್ದಾರೆ.

ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಈ ಬಾರಿ ಪ್ರಶಸ್ತಿಯನ್ನು ಮುಡಿಗೇರಿಸಿ 5ನೇ ಬಾರಿ ಚಾಂಪಿಯನ್​ ಆಗುವ ತವಕದಲ್ಲಿದೆ.


ಇದನ್ನೂ ಓದಿ: IPL ಟೂರ್ನಿಗೂ ಮುನ್ನವೇ RCBಯಲ್ಲಿ ಎರಡು ಗುಂಪು! ಕಾರಣವೇನು ಗೊತ್ತಾ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights