ಕೋವಾಕ್ಸಿನ್ ಲಸಿಕೆ ಖರೀದಿ ದರ ನಿಗದಿ; ರಾಜ್ಯ ಸರ್ಕಾರಗಳಿಗೆ 600, ಖಾಸಗೀ ಆಸ್ಪತ್ರೆಗಳಿಗೆ 1,200 ರೂ!
ಕೊರೊನಾ ವೈರಸ್ ವಿರುದ್ದ ನೀಡಲಾಗುತ್ತಿರುವ ಕೋವಾಕ್ಸಿನ್ ಲಸಿಕೆ ಖರೀದಿಗೆ ಉತ್ಪಾದನಾ ಕಂಪನಿಯಾದ ಭಾರತ್ ಬಯೋಟೆಕ್ ದರ ನಿಗದಿ ಮಾಡಲಾಗಿದೆ. ಲಸಿಕೆಯ ದರವು ರಾಜ್ಯ ಸರ್ಕಾರಗಳಿಗೆ 600 ರೂ. ಹಾಗೂ ಖಾಸಗಿ ಆಸ್ಪತ್ರೆಗಳಿಗೆ 1,200 ರೂ. ಇರಲಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ವ್ಯಾಕ್ಸಿನ್‌ನ ರಫ್ತಿಗಾಗಿ ಕಂಪನಿಗೆ 15 ಡಾಲರ್ ನಿಂದ 20 ರವರೆಗೆ ವೆಚ್ಚವಾಗಲಿದೆ ಎಂದೂ ತಿಳಿಸಿದೆ.
ದೇಶದ ಇನ್ನೊಂದು ಲಸಿಕೆ ತಯಾರಕ ಸಂಸ್ಥೆ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತನ್ನ ಕೋವಿಶೀಲ್ಡ್ ಲಸಿಕೆಯನ್ನು ರಾಜ್ಯಗಳಿಗೆ 400 ರೂ.ಗೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ 600 ರೂ.ಗೆ ಮಾರಾಟ ಮಾಡಲಿದೆ.
” ಇತರ ಲಸಿಕೆಗಳತ್ತ ಶೋಧನಾ ಪಯಣದಲ್ಲಿ ವೆಚ್ಚವನ್ನು ವಶಪಡಿಸಿಕೊಳ್ಳುವುದು ಅತ್ಯಗತ್ಯ … ಜಗತ್ತಿಗೆ ಕೈಗೆಟುಕುವ, ಆದರೆ ವಿಶ್ವದರ್ಜೆಯ ಆರೋಗ್ಯ ಪರಿಹಾರಗಳನ್ನು ಒದಗಿಸುವುದು ಕಳೆದ 25 ವರ್ಷಗಳಿಂದ ನಮ್ಮ ಪ್ರಮುಖ ಉದ್ದೇಶವಾಗಿತ್ತು” ಎಂದು ಭಾರತ್ ಬಯೋಟೆಕ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಂ. ಎಲಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭಾರತದ ಹೊಸ ಸುತ್ತಿನ ವ್ಯಾಕ್ಸಿನೇಷನ್ ಅಭಿಯಾನ ಮೇ 1 ರಿಂದ ಪ್ರಾರಂಭವಾಗಲಿದ್ದು, ಈ ಬಾರಿ 18 ವರ್ಷಕ್ಕಿಂತ ಮೇಲ್ಪಟ್ಟವರು ಲಸಿಕೆ ತೆಗೆದುಕೊಳ್ಳಬಹುದು.
ಇದನ್ನೂ ಓದಿ: ರಾಷ್ಟ್ರ ರಾಜಧಾನಿಗೆ ಮತ್ತೊಂದು ಶಾಕ್; ಲಾಕ್‌ಡೌನ್ ಒಂದು ವಾರ ವಿಸ್ತರಣೆ ಸಾಧ್ಯತೆ!