Fact Check: ವಿಶ್ವದ ವಿದ್ಯಾವಂತರಲ್ಲಿ ರಾಹುಲ್‌ಗಾಂಧಿ 7ನೇ ನಾಯಕ ಎಂಬುದು ಸತ್ಯವೇ?

ಫೋರ್ಬ್ಸ್‌ ವರದಿ ಮಾಡಿರುವ ‘ವಿಶ್ವದ ಅತ್ಯಂತ ವಿದ್ಯಾವಂತ ನಾಯಕರ’ ಪಟ್ಟಿಯಲ್ಲಿ ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ ಏಳನೇ ಸ್ಥಾನದಲ್ಲಿದ್ದಾರೆ ಎಂದು ಒಂದು ಪೋಸ್ಟ್ ಸಾಮಾಜಿಕ ಜಾಲತಾಣದಗಳಲ್ಲಿ ವೈರಲ್ ಆಗಿದೆ. ಹಾಗಾದರೆ ಪೋರ್ಬ್ಸ್ ವಿಶ್ವದ ಅತ್ಯಂತ ವಿದ್ಯಾವಂತ ನಾಯಕರ ಪಟ್ಟಿಯನ್ನು ಮಾಡಿದೆಯೇ..? ಅದರಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಏಳನೇ ಸ್ಥಾನ ಪಡೆದಿದ್ದಾರೆಯೇ?? ಸತ್ಯಾಂಶವನ್ನು ಪರಿಶೀಲಿಸೋಣ.

ಪ್ರತಿಪಾದನೆ: ಫೋರ್ಬ್ಸ್‌ನ ‘ವಿಶ್ವದ ಹೆಚ್ಚು ವಿದ್ಯಾವಂತ ನಾಯಕರು’ ಪಟ್ಟಿಯಲ್ಲಿ ರಾಹುಲ್ ಗಾಂಧಿ ಏಳನೇ ಸ್ಥಾನದಲ್ಲಿದ್ದಾರೆ.

ಸತ್ಯ: ವಿಶ್ವ ನಾಯಕರ ಶಿಕ್ಷಣದ ಬಗ್ಗೆ ಫೋರ್ಬ್ಸ್ ಎಂದಿಗೂ ಸಮೀಕ್ಷೆ ನಡೆಸಿಲ್ಲ. ರಾಹುಲ್ ಗಾಂಧಿಯನ್ನು ವಿಶ್ವದ 7ನೇ ಹೆಚ್ಚು ವಿದ್ಯಾವಂತ ನಾಯಕ ಎಂದು ಸಾಬೀತುಪಡಿಸಲು ಯಾವುದೇ ವಿಶ್ವಾಸಾರ್ಹ ಪುರಾವೆಗಳಿಲ್ಲ. ಆದ್ದರಿಂದ, ವೈರಲ್ ಆಗುತ್ತಿರುವ ಪೋಸ್ಟ್‌ಗಳಲ್ಲಿ ಸತ್ಯಾಂಶವಿಲ್ಲ.

ಈ ಕುರಿತು ಸತ್ಯಾಸತ್ಯತೆ ತಿಳಿಯಲು ಫೋರ್ಬ್ಸ್ ವೆಬ್‌ಸೈಟ್‌ನಲ್ಲಿ‘ವಿಶ್ವದ ಅತ್ಯಂತ ವಿದ್ಯಾವಂತ ನಾಯಕರ’ ಪಟ್ಟಿಯನ್ನು ಹುಡುಕಿದಾಗ, ಫೋರ್ಬ್ಸ್ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾದ ಸಮೀಕ್ಷೆಯ ಪಟ್ಟಿಗಳಲ್ಲಿ ಅಂತಹ ಯಾವುದೇ ಪಟ್ಟಿ ಕಂಡುಬಂದಿಲ್ಲ. ಫೋರ್ಬ್ಸ್ ಕಂಪನಿ ವಿಶ್ವ ನಾಯಕರ ಶೈಕ್ಷಣಿಕ ಅರ್ಹತೆಗಳ ಬಗ್ಗೆ ಯಾವುದೇ ಸಮೀಕ್ಷೆ ಮಾಡಿಲ್ಲ.

ಅಮೆಥಿ ಸಂಸದೀಯ ಕ್ಷೇತ್ರಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ, ರಾಹುಲ್ ಗಾಂಧಿ ತಮ್ಮ ಶೈಕ್ಷಣಿಕ ಅರ್ಹತೆಗಳನ್ನು ಫ್ಲೋರಿಡಾದ ರೋಲಿನ್ಸ್ ಕಾಲೇಜಿನಿಂದ ‘ಬ್ಯಾಚುಲರ್ ಆಫ್ ಆರ್ಟ್ಸ್’ ಎಂದು ಉಲ್ಲೇಖಿಸಿ ನಂತರ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಟ್ರಿನಿಟಿ ಕಾಲೇಜಿನಿಂದ ಎಂ.ಫಿಲ್ (ಅಭಿವೃದ್ಧಿ ಅಧ್ಯಯನ) ಮುಗಿಸಿದರು ಎಂಬ ಮಾಹಿತಿ ನೀಡಿದ್ದಾರೆ.

ರಾಹುಲ್ ಗಾಂಧಿಯನ್ನು ವಿಶ್ವದ ಏಳನೇ ಹೆಚ್ಚು ವಿದ್ಯಾವಂತ ನಾಯಕ ಎಂದು ಸಾಬೀತುಪಡಿಸಲು ಯಾವುದೇ ವಿಶ್ವಾಸಾರ್ಹ ಮೂಲಗಳಿಲ್ಲ. ಜೊತೆಗೆ ಫೋರ್ಬ್ಸ್ ರಾಹುಲ್ ಗಾಂಧಿಯನ್ನು ವಿಶ್ವದ ಏಳನೇ ಹೆಚ್ಚು ವಿದ್ಯಾವಂತ ನಾಯಕ ಎಂದು ಪಟ್ಟಿ ಮಾಡಿಲ್ಲ.


ಇದನ್ನೂ ಓದಿ: ಜಮ್ಮುಕಾಶ್ಮೀರ: ವಿಶೇಷ ಸ್ಥಾನಮಾನವನ್ನು ಮರಳಿ ತರಲು ಪ್ರಾದೇಶಿಕ ಪಕ್ಷಗಳ ಮೈತ್ರಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights