ಫ್ಯಾಕ್ಟರಿ ಬಾಯ್ಲರ್​ ಸ್ಫೋಟ : ಇಬ್ಬರು ಕಾರ್ಮಿಕರು ಸಾವು

ಫ್ಯಾಕ್ಟರಿ ಬಾಯ್ಲರ್​ ಸ್ಫೋಟಗೊಂಡ ಪರಿಣಾಮ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ಬೆಂಗಳೂರು ಹೊರವಲಯ ದೊಡ್ಡಬಿದರು ಕಲ್ಲಿನಲ್ಲಿ ನಡೆದಿದೆ. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಘಟನೆ ನಡೆದಿದೆ ಎನ್ನಲಾಗಿದ್ದು,  ಮೃತ ದುರ್ದೈವಿಗಳನ್ನು ಶ್ರೀಕಂಠ ಮತ್ತು ರಮೇಶ್ ಎಂದು ಗುರುತಿಸಲಾಗಿದೆ.

ಜೀನ್ಸ್ ಪ್ಯಾಂಟ್ ವಾಶ್ ಮಾಡುವ ಫ್ಯಾಕ್ಟರಿ ಇದಾಗಿದೆ. ಸೆಕೆಂಡ್ ಶಿಫ್ಟ್ ನಲ್ಲಿದ್ದ ಮೂವರು ಫ್ಯಾಕ್ಟರಿ ಒಳಗಡೆ ಕೆಲಸ ಮಾಡುತ್ತಿದ್ದರು. ಬಾಯ್ಲರ್ ವರ್ಕ್ ಮಾಡುತ್ತಿಲ್ಲ ಅಂತ ನೋಡೋದಕ್ಕೆ ಹೋದಾಗ ಇದ್ದಕ್ಕಿದ್ದ ಹಾಗೇ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಫ್ಯಾಕ್ಟರಿ ಪಕ್ಕದ ಎರಡು ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ ಎನ್ನಲಾಗಿದೆ.

ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ಸಾಗಿಸುವ ವೇಳೆ ಇಬ್ಬರು ಸಾವನ್ನಪ್ಪಿದ್ದು, ಓರ್ವ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ಪೊಲೀಸರು ಮತ್ತು ಪೀಣ್ಯ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತ ದೇಹಗಳನ್ನ ಆಸ್ಪತ್ರೆಗೆ ರವಾನಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights