ಬಿಗ್‌ಬಾಸ್ 2ನೇ ಇನ್ನಿಂಗ್ಸ್: ಹಲವು ಕುತೂಹಲಗಳನ್ನು ಹುಟ್ಟು ಹಾಕಿದೆ ಇಂದಿನ ಎಪಿಸೋಡ್!
ಬಿಗ್‌ಬಾಸ್‌ನ ಯಾವ ಆವೃತ್ತಿಯಲ್ಲಿಯೂ ಇಲ್ಲದ ಸೆಕೆಂಡ್ ಇನ್ನಿಂಗ್ಸ್ ಈ ಬಾರಿಯ ಬಿಗ್‌ಬಾಸ್‌ನಲ್ಲಿ ನಡೆಯುತ್ತಿದೆ. ಕೊರೊನಾ 2ನೇ ಅಲೆ ತೀವ್ರ ಸ್ವರೂಪ ಪಡೆದುಕೊಂಡ ಕಾರಣಕ್ಕಾಗಿ ಲಾಕ್‌ಡೌನ್ ಜಾರಿಯಾದ ನಂತರ ಬಿಗ್‌ಬಾಸ್‌ನ 8ನೇ ಸೀಸನ್ ಅರ್ಧಕ್ಕೆ ನಿಂತು ಹೋಗಿತ್ತು. ಇದೀಗ ಕೊರೊನಾ ಇಳಿಯುತ್ತಿದ್ದಂತೆ ಎರಡನೇ ಇನ್ನಿಂಗ್ಸ್ ಆರಂಭವಾಗುತ್ತಿದೆ. ಇದು ಹಲವು ಕೂತುಹಲಗಳಿಗೆ ಕಾರಣವಾಗಿದೆ.
ಈಗಾಗಲೇ ಬಿಗ್‌ಬಾಸ್‌ನ ಒಟ್ಟು ದಿನಗಳ ಪೈಕಿ, 70% ದಿನಗಳನ್ನು ಮುಗಿಸಿದ್ದ ಸ್ಪರ್ಧಿಗಳು ಮನೆಯಲ್ಲಿ ಕುಳಿತು ಇಷ್ಟುದಿನ ಎಪಿಸೋಡ್‌ಗಳನ್ನು ನೋಡಿಕೊಂಡು ಬಂದಿರುತ್ತಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಅವರ ವರಸೆ ಹೇಗಿರಲಿದೆ ಎಂಬುದು ಕುತೂಹಲಕಾರಿ.
ಸದ್ಯ ಬುಧವಾರ ಸಂಜೆಯಿಂದ ಎರಡನೇ ಇನ್ನಿಂಗ್ಸ್ ಪ್ರಸಾರವಾಗಲಿದೆ. ಸ್ಪರ್ಧಿಸಿಗಳನ್ನು ಕಾರ್ಯಕ್ರಮದ ಹೋಸ್ಟ್ ಕಿಚ್ಚ ಸುದೀಪ್ ಮಾತನಾಡಿಸಿಯೇ ಕಳುಹಿಸಿಕೊಟ್ಟರು.. ಮೊದಲ ಇನ್ನಿಂಗ್ಸ್‌ನ ಮಾತುಕತೆಗೆ ಹೋಲಿಸಿದರೆ ಈ ಬಾರಿಯ ಮಾತುಕತೆ ಬಹಳ ಭಿನ್ನವಾಗಿತ್ತು.. ಒಬ್ಬೊಬ್ಬರು ನೀಡಿದ ಉತ್ತರಗಳೂ ಮನೆಯೊಳಗೆ ಸೃಷ್ಟಿಯಾಗಲಿರುವ ಹೊಸ ಸ್ಪರ್ಧಾತ್ಮಕ ವಾತಾವರಣಕ್ಕೆ ದಿಕ್ಸೂಚಿಯಾಗಿದ್ದವು. ಎರಡನೇ ಇನ್ನಿಂಗ್ಸ್‌ಗೆ ಸುದೀಪ್ ಕೂಡಾ ವಿಶಿಷ್ಟತೆಯ ಜೊತೆಗೇ ಆಗಮಿಸಿದ್ದಾರೆ. ಅವರ ಲುಕ್ ಪ್ರತಿ ಎಪಿಸೋಡಿಗೂ ಭಿನ್ನ. ಅದರ ಜೊತೆಗೆ ವಿಶಿಷ್ಟ ಪಂಚಿಂಗ್ ಕಿವಿಮಾತುಗಳು ಮೊದಲ ದಿನ ಮಹಾಸಂಚಿಕೆಯ ವಿಶೇಷ.
ಸ್ಪರ್ಧಿಗಳು ತಮ್ಮದೇ ರೀತಿಯ ಆಟಕ್ಕೆ ಸಿದ್ಧರಾದರೆ ಬಿಗ್‌ಬಾಸ್ ಅವರದೇ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳದೆ ಇರುತ್ತಾರೆಯೇ? ಅವರ ಸಿದ್ಧತೆಯೂ ವಿಶೇಷವಾಗಿತ್ತು. ಮನೆಯೊಳಗೆ ಹೋಗುವಾಗಲೇ ಒಂದೊಂದು ಟಾಸ್ಕ್. ಹೋದ ಕೂಡಲೇ ಇನ್ನೊಂದು ಅಚ್ಚರಿ, ಒಂದು ಸ್ಫೋಟಕ ನಾಮಿನೇಷನ್- ಹೀಗೆ ಮೊದಲ ದಿನದ ಮಹಾ ಸಂಚಿಕೆ ಮೊದಲೇ ಹೇಳಿದಂತೆ ಎಲ್ಲ ವಿಧದಲ್ಲಿಯೂ ಒಂದು ಥ್ರಿಲ್ಲರ್ ಅಗಿದೆ.
ಇದನ್ನೂ ಓದಿ: ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರ ಹಣ 20,700 ಕೋಟಿಗೆ ಏರಿಕೆ; 13 ವರ್ಷಗಳಲ್ಲಿಯೇ ಅಧಿಕ ಮೊತ್ತ!