ಮಲ್ಯ, ಚೋಕ್ಸಿ, ನೀರವ್ ಮೋದಿಯಿಂದ ವಶಪಡಿಸಿಕೊಂಡ 9,371 ಕೋಟಿ ರೂ. ಆಸ್ತಿ ಬ್ಯಾಂಕುಗಳಿಗೆ ವರ್ಗ: ಇಡಿ

ಪರಾರಿಯಾದ ಉದ್ಯಮಿ ವಿಜಯ್ ಮಲ್ಯ, ಮೆಹುಲ್ ಚೋಕ್ಸಿ ಮತ್ತು ನೀರವ್ ಮೋದಿ ಮಾಡಿದ ಆರ್ಥಿಕ ವಂಚನೆಯಿಂದಾಗಿ ನಷ್ಟ ಅನುಭವಿಸಿದ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ 9,371.17 ಕೋಟಿ ರೂ.ಗಳ ಆಸ್ತಿಯನ್ನು ಜಾರಿ ನಿರ್ದೇಶನಾಲಯ ವರ್ಗಾಯಿಸಿದೆ.

ಈ ಮೂವರು ವಂಚಕರಿಂದ 18,170.02 ಕೋಟಿ ರೂಗಳ (ಬ್ಯಾಂಕುಗಳ ಒಟ್ಟು ನಷ್ಟದ 80.45%) ಆಸ್ತಿಯನ್ನು ಪಿಎಂಎಲ್‌ಎ ಅಡಿಯಲ್ಲಿ ಇಡಿ ವಶಪಡಿಸಿಕೊಂಡಿದೆ. ಈ ಪೈಕಿ, ಒಂದು ಭಾಗ (9,371.17 ಕೋಟಿ ರೂ)ದ ಆಸ್ತಿಯನ್ನು ಸರ್ಕಾರಿ ಬ್ಯಾಂಕುಗಳು ಮತ್ತು ಸರ್ಕಾರಕ್ಕೆ ವರ್ಗಾಯಿಸಿದೆ.

ಷೇರುಗಳ ಮಾರಾಟದಿಂದ 800 ಕೋಟಿ ರೂ.ಗಳ ಹೆಚ್ಚಿನ ಹಣವು ಜೂನ್ 25 ರೊಳಗೆ ದೊರೆಯುತ್ತದೆ ಎಂದು ನಿರೀಕ್ಷಿಸಲಾಗಿರುವುದಾಗಿ ಕೇಂದ್ರ ತನಿಖಾ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಮುಂಬೈನ ವಿಶೇಷ ಮನಿ ಲಾಂಡರಿಂಗ್ ಕಾಯ್ದೆ (ಪಿಎಂಎಲ್‌ಎ) ಯ ಆದೇಶದ ಪ್ರಕಾರ ಸಂಸ್ಥೆ ಲಗತ್ತಿಸಲಾದ ಷೇರುಗಳನ್ನು (ಸುಮಾರು 6,600 ಕೋಟಿ ರೂ.) ಎಸ್‌ಬಿಐ ನೇತೃತ್ವದ ಒಕ್ಕೂಟ ಬ್ಯಾಂಕುಗಳಿಗೆ ವರ್ಗಾಯಿಸಿದೆ ಎಂದು ಅದು ಹೇಳಿದೆ.

“ಇಂದು, ಎಸ್‌ಬಿಐ ನೇತೃತ್ವದ ಒಕ್ಕೂಟದ ಪರವಾಗಿ ಡಿಆರ್‌ಟಿ ಯುನೈಟೆಡ್ ಬ್ರೂವರೀಸ್ ಲಿಮಿಟೆಡ್‌ನ ಷೇರುಗಳನ್ನು 5,824.50 ಕೋಟಿ ರೂ.ಗಳಿಗೆ ಮಾರಾಟ ಮಾಡಲಾಗಿದೆ” ಎಂದು ಇಡಿ ತಿಳಿಸಿದೆ.

ಇದನ್ನೂ ಓದಿ: ವಂಚನೆ ಆರೋಪಿ ವಜ್ರ ವ್ಯಾಪಾರಿ ಚೋಕ್ಸಿ; ಭಾರತಕ್ಕೆ ನೇರ ಹಸ್ತಾಂತರ ಸಾಧ್ಯವಿಲ್ಲ: ಡೊಮಿನಿಕಾ ಪ್ರಧಾನಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights