ನೆರೆಯ ರಾಜ್ಯ ಕೇರಳದಂತೆ ಕರ್ನಾಟಕದಲ್ಲೂ ಕಂಪ್ಲೀಟ್ ಲಾಕ್ ಡೌನ್ ಸುಳಿವು…!

ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದರೂ ಇನ್ನೂ ಕೂಡ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ. ಕರ್ನಾಟಕದಲ್ಲಿ ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿನಿತ್ಯ 20 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಹೀಗಿದ್ದರೂ ಸಂಪೂರ್ಣ ಲಾಕ್ ಡೌನ್ ಮಾಡಲು ಮೀನಾಮೇಶ ಎಣಿಸುತ್ತಿದೆ.

ಕರ್ನಾಟಕಕ್ಕೆ ಹೋಲಿಸಿದರೆ ಕೇರಳದ ಆರೋಗ್ಯ ಸ್ಥಿತಿ ಉತ್ತಮವಾಗಿದೆ. ಆದರೂ ಮುಂದಾಗುವ ಅನಾಹುತ ಬಗ್ಗೆ ಮುನ್ನೆಚ್ಚರಿಕೆ ವಹಿಸಿದ ಸಿಎಂ ಕೇರಳದಲ್ಲಿ ಕಂಪ್ಲೀಟ್ ಲಾಕ್ ಡೌನ್ ಮಾಡಲಾಗಿದೆ.

ಕರ್ನಾಟಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಜೂನ್ 11ರವರೆಗೆ 31 ಲಕ್ಷ ಕ್ಕೇರುತ್ತದೆ ಎಂದು ತಜ್ಞರು ಲೆಕ್ಕಚಾರ ಮಾಡಿದ್ದಾರೆ. ಅಂದರೆ ದಿನಕ್ಕೆ ಹೆಚ್ಚು ಕಡಿಮೆ 70 ಸಾವಿರ ಪ್ರಕರಣಗಳು ದಾಖಲಾಗುತ್ತವೆ. ಒಂದು ವೇಳೆ ಸಂಪೂರ್ಣ ಲಾಕ್ ಡೌನ್ ಮಾಡಿದರೆ ಸೋಂಕಿತರ ಸಂಖ್ಯೆ 8 ಲಕ್ಷಕ್ಕಿಳಿಯುತ್ತದೆ. ಲಾಕ್ ಡೌನ್ ಮಾಡದೇ ಹೋದರೆ 31 ಲಕ್ಕಕ್ಕೇರುತ್ತದೆ ಎಂದು ಅಂದಾಜಿಸಲಾಗಿದೆ.

ಹೀಗಾಗಿ ಕರ್ನಾಟಕದಲ್ಲೂ ಕಂಪ್ಲೀಟ್ ಲಾಕ್ ಡೌನ್ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಮಾತನಾಡಿದ ಹೆಚ್ ವಿಶ್ವನಾಥ್ , ” ಸಂಪೂರ್ಣ ಲಾಕ್ ಡೌನ್ ಗಾಗಿ ನಾನು ಕಳೆದ 2 ತಿಂಗಳಿನಿಂದ ಒತ್ತಾಯಿಸುತ್ತಿದ್ದೇನೆ. ಆದರೆ ಇವರು ಅರ್ಧಬರ್ಧ ಲಾಕ್ ಡೌನ್ ಮಾಡಿಕೊಂಡು ಕುಳಿತಿದ್ದಾರೆ. ಮಂತ್ರಿಗಳು, ಎಂಎಲ್ ಎ ಗಳು ಕಾರ್ಮೆಂಟ್ಸ್ ರಿಯಲ್ ಎಸ್ಟೇಟ್ ಕಿರಾಕಿಗಳು ಆಗಿದ್ದಾರೆ. ಸಂಪೂರ್ಣ ಲಾಕ್ ಡೌನ್ ಮಾಡುವುದರಿಂದ ಅವರಿಗೆ ಲಾಸ್ ಆಗುತ್ತೆ” ಎಂದಿದ್ದಾರೆ.

ಇನ್ನೂ ಲಾಕ್ ಡೌನ್ ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪರೋಕ್ಷ ಒತ್ತಾಯ ಮಾಡಿದ್ದಾರೆ, ” ಗಂಭೀರವಾಗಿ ತಜ್ಞರ ಸಲಹೆಯನ್ನು ಪರಿಗಣಿಸಿ ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.”

ಹಾಗಾದ್ರೆ ಬೆಂಗಳೂರು ಸೇರಿ ರಾಜ್ಯದಲ್ಲಿ ಕಂಪ್ಲೀಟ್ ಲಾಕ್ ಡೌನ್ ಆಗುತ್ತಾ? ಅನ್ನೋ ಪ್ರಶ್ನೆ ಮೂಡಿದೆ. ಮುಂದಿನ ಲಾಕ್ ಡೌನ್ ನಲ್ಲಿ ಹಾಲು, ಹಣ್ಣು, ದಿನಸಿ ಖರೀದಿಗೂ ಟೈಟ್ ಸೆಕ್ಯೂರಿಟಿ ಇದ್ದು ಕಂಪ್ಲೀಟ್ ಬಂದ್ ಆಗೋ ಸಾಧ್ಯತೆ ಇದೆ.

ದಿನದಿಂದ ದಿನಕ್ಕೆ ಬೆಂಗಳೂರಿನಲ್ಲಿ ಕೊರೊನಾ ಅರ್ಭಟ ಹೆಚ್ಚಾಗುತ್ತಿದೆ. ನಿಜವಾಗಿಯೋ ನಿರೀಕ್ಷೆ ಮಾಡಿದಂತೆ ಕರ್ಫ್ಯೂ ಆಗುತ್ತಿಲ್ಲ. ಸರ್ಕಾರ ಒಂದೇ ಪ್ರಯತ್ನದಿಂದ ಕೊರೊನಾ ಹೋಗೋದಿಲ್ಲ. ಜನಸಾಮಾನ್ಯರು ಸಹಕಾರ ಕೊಡಬೇಕು ಎಂದು ಆರೋಗ್ಯ ಸಚಿವ ಕೆ ಸುಧಾಕರ್ ಮನವಿ ಮಾಡಿದ್ದಾರೆ.

 

 

 

 

 

 

Spread the love

Leave a Reply

Your email address will not be published. Required fields are marked *