ಕೇರಳದಲ್ಲಿ ಕಂಪ್ಲೀಟ್ ಲಾಕ್ ಡೌನ್ : ಒಂದು ವಾರ ಸಂಪೂರ್ಣ ಬಂದ್..!

ನೆರ ರಾಜ್ಯ ಕೇರಳದಲ್ಲಿ ಕಂಪ್ಲೀಟ್ ಲಾಕ್ ಡೌನ್ ಮಾಡಿ ಸಿಎಂ ಪಿಣರಾಯಿ ವಿಜಯನ್ ಆದೇಶ ಹೊರಡಿಸಿದ್ದಾರೆ. ಮೇ8 ರಿಂದ 16ರವೆರೆಗೆ ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ.

ಕೇರಳದಲ್ಲಿ ಬುಧವಾರ ಅತಿ ಹೆಚ್ಚು ಏಕದಿನ ಸ್ಪೈಕ್ ದಾಖಲಾಗಿದ್ದು, 41,000 ಕ್ಕೂ ಹೆಚ್ಚು ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಕೇರಳ ಸಿಎಂ ಕಚೇರಿ ಗುರುವಾರ ಮಾಡಿದ ಟ್ವೀಟ್‌ನಲ್ಲಿ, “ಸಿಎಂ ನಿರ್ದೇಶನದಂತೆ, ಇಡೀ ಕೇರಳ ರಾಜ್ಯವು ಮೇ 8 ರಂದು ಬೆಳಿಗ್ಗೆ 6 ರಿಂದ ಮೇ 16 ರವರೆಗೆ ಲಾಕ್‌ಡೌನ್ ಆಗಲಿದೆ”

ಬುಧವಾರ, ಕೇರಳದಲ್ಲಿ ಇದುವರೆಗಿನ ಅತಿ ಹೆಚ್ಚು ಏಕದಿನ ಸ್ಪೈಕ್‌ನಲ್ಲಿ 41,953 ತಾಜಾ ಕೊರೊನಾವೈರಸ್ ಪ್ರಕರಣಗಳು ದಾಖಲಾಗಿವೆ. ಈವರೆಗೆ ಒಟ್ಟು 17,43,932 ಪ್ರಕರಣಗಳು ದಾಖಲಾಗಿದ್ದು, 23,106 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ, 13.62 ಲಕ್ಷ ಜನ ಚೇತರಿಸಿಕೊಂಡಿದ್ದಾರೆ.

ಹೀಗಾಗಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇರಳದ ಪರಿಸ್ಥಿತಿ ಗಂಭೀರವಾಗಿದೆ. ಕೋವಿಡ್ ಉಲ್ಬಣವನ್ನು ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights