New year gift from Govt : ರೈಲು, ಸಿಲಿಂಡರ್, ಬನ್ನೇರುಘಟ್ಟ ಪಾರ್ಕ್‌ ಎಂಟ್ರಿ ತುಟ್ಟಿ…

2019ಕ್ಕೆ ಬೈಬೈ ಹೇಳಿದ ಜನಸಾಮಾನ್ಯನಿಜೆ 2020ರ ಮೊದಲ ದಿನದಿಂದಲೇ ಬದುಕು ದುಬಾರಿಯಾಗಿದೆ. ರೈಲು ಪ್ರಯಾಣ, ಗ್ಯಾಸ್ ಸಲಿಲಂಡರ್‍ ಜೊತೆಗೆ ಬನ್ನೇರುಘಟ್ಟ ಉದ್ಯಾನವನದ ಪ್ರವೇಶವೂ ತುಟ್ಟಿಯಾಗಿದೆ.

ನಷ್ಟ ಸರಿದೂಗಿಸಿಕೊಳ್ಳುವ ಪ್ರಯತ್ನವಾಗಿ ಭಾರತೀಯ ರೈಲ್ವೆಯು ಪ್ರತಿ ಕಿಲೋಮಿಟರ್‌ಗೆ ಒಂದರಿಂದ ನಾಲ್ಕು ಪೈಸೆಯಷ್ಟರ ಪ್ರಯಾಣ ದರವನ್ನು ಏರಿಸಿದ ಬೆನ್ನಲ್ಲಿಯೇ ಸಬ್ಸಿಡಿ ರಹಿತ ಗ್ಯಾಸ್‌ ಸಿಲಿಂಡರ್‍ ಬೆಲೆಯೂ ತಲಾ 19 ರೂಗಳಷ್ಟು ಏರಿಕೆಯಾಗಿದೆ.

ಇದೇ ರೀತಿ ಸಾವಿರಾರು ಜನ ಭೇಟಿ ನೀಡುವ ಬನ್ನೇರುಘಟ್ಟದ ರಾಷ್ಟ್ರೀಯ ಉದ್ಯಾನವನದ ಪ್ರವೇಶ ಶುಲ್ಕವನ್ನು 20 ರೂ ಏರಿಸಲಾಗಿದೆ. ಎಲ್ಲ ಬಗೆಯ ಸಫಾರಿ ಮತ್ತಿತರ ಪ್ರದೇಶಗಳ ಪ್ರವೇಶ ದರವೂ ಇದೇ ಪ್ರಮಾಣದಲ್ಲಿ ಏರಿಕೆ ಕಂಡಿದೆ.

ಎಲ್ಲ ಏಸಿ ಕ್ಲಾಸ್ ಗಳಿಗೆ ಪ್ರಯಾಣಿಸುವ ಪ್ರತಿ ಕಿಲೋಮೀಟರ್ ಗೆ ನಾಲ್ಕು ಪೈಸೆ ಏರಿಕೆಯಾದರೇ, ನಾನ್ ಏಸಿ ಹಾಗೂ ಮೀಸಲು ಅಲ್ಲದ ವಿಭಾಗದಲ್ಲಿ ಪ್ರತಿ ಕಿಲೋಮೀಟರ್ ಗೆ ಒಂದು ಪೈಸೆ ಏರಿಕೆಯಾಗಲಿದೆ. ಇನ್ನು ದೂರ ಪ್ರಯಾಣದ ಮೇಲ್/ಎಕ್ಸ್ ಪ್ರೆಸ್ ರೈಲುಗಳಿಗೆ ಪ್ರತಿ ಕಿಲೋಮೀಟರ್ ಗೆ ಎರಡು ಪೈಸೆ ಏರಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights