IPL ಟೂರ್ನಿಗೂ ಮುನ್ನವೇ RCBಯಲ್ಲಿ ಎರಡು ಗುಂಪು! ಕಾರಣವೇನು ಗೊತ್ತಾ?

ಆರ್‌ಸಿಬಿ ತಂಡದಲ್ಲೇ ಇದೀಗ ಎರಡು ಪ್ರತ್ಯೇಕ ತಂಡಗಳಾಗಿವೆ. ಅಂದ್ರೆ, ಆರ್‌ಸಿಬಿಯಲ್ಲಿ ಈಗ ಕೇವಲ ವಿರಾಟ್ ಕೊಹ್ಲಿ ಮಾತ್ರ ನಾಯಕನಲ್ಲ. ಆರ್‌ಸಿಬಿ ತಂಡದ ಒಂದು ಗುಂಪು ಡಿವಿಲಿಯರ್ಸ್ ಜೊತೆ ಇದ್ರೆ, ಮತ್ತೊಂದು ಗ್ರೂಪ್ ವಿರಾಟ್ ಜೊತೆ ಸೇರಿಕೊಂಡಿದೆ.

ಆರ್‌ಸಿಬಿಯಲ್ಲಿ ಎರಡು ಟೀಮ್ ಆಗಿರೋದಂತೂ ನಿಜ, ಆದ್ರೆ, ಅದು ಪ್ರಾಕ್ಟೀಸ್‌ ಫುಟ್ಬಾಲ್ ಮ್ಯಾಚ್‌ಗಾಗಿ.  ಇದ್ರಲ್ಲಿ ಒಂದು ತಂಡದ ಹೆಸರು ಹಾಟ್ ಡಾಗ್ಸ್ ಮತ್ತು ಕೂಲ್‌ ಕ್ಯಾಟ್ಸ್ ಹೆಸರಿನ ಗುಂಪುಗಳು. ಹಾಟ್ ಡಾಗ್ಸ್ ತಂಡವನ್ನ ವಿರಾಟ್ ಕೊಹ್ಲಿ ಮುನ್ನಡೆಸಿದ್ರೆ, ಕೂಲ್ ಕ್ಯಾಟ್ಸ್ ತಂಡವನ್ನ ಎಬಿಡಿ ಮುನ್ನಡೆಸುತ್ತಾರೆ.

ಕಳೆಡ ಆರೇಳು ವರ್ಷಗಳಿಂದಲೂ ಇದು ನಡೆದುಕೊಂಡು ಬಂದಿದೆ.  ಈ ವಿಷ್ಯವನ್ನ ಸ್ವತಃ ಆರ್‌ಸಿಬಿ ಸ್ಟ್ರೆಂತ್‌ ಅಂಡ್ ಕಂಡೀಷನಿಂಗ್ ಕೋಚ್ ಆಗಿರುವ ಎಸ್. ಬಾಸು ಅವರು ತಿಳಿಸಿದ್ದಾರೆ. ಇನ್ನೂ ಈ ಪಂದ್ಯದ ವೇಳೆ, ತಂಡದ ಫಿಸಿಯೋ ಆಗಿರುವಂತಹ ಯೆವಾನ್ ಸ್ಪಿಚ್ಲಿ ಅವರು ರೆಫ್ರಿ ಆಗಿ ಕಾರ್ಯ ನಿರ್ವಹಿಸುತ್ತಾರೆ. ಆಟದ ವೇಳೆ ಯಾರಾದ್ರೂ, ರಫ್ ಟ್ಯಾಪಿಂಗ್ ಮಾಡಿದ್ರೆ, ದುರ್ವರ್ತನೆ ತೋರಿದ್ರೆ, ಅವರಿಗೆ ಎಲ್ಲೋ ಕಾರ್ಡ್ ಮತ್ತು ರೆಡ್ ಕಾರ್ಡ್ ತೋರಿಸ್ತಾರೆ. ಅಷ್ಟೇ ಅಲ್ಲದೇ, ನಂತರದ ಫುಟ್ಬಾಲ್ ಮ್ಯಾಚ್‌ನಿಂದ ಅವರನ್ನ ಹೊರಗಿಡ್ತಾರೆ.

ಐಪಿಎಲ್‌ ಆರಂಭಕ್ಕೂ ಮುನ್ನವೇ ಆರ್‌ಸಿಬಿ ತಂಡ ಸಖತ್ ಜೋಷ್‌ನಲ್ಲಿ ಕಾಣಿಸಿಕೊಳ್ತಿದೆ. ಹಾಗಂತ ಫುಟ್ಬಾಲ್ ತುಂಬಾನೆ ರಿಸ್ಕಿ ಗೇಮ್, ಇಲ್ಲಿ ಇಂಜುರೀಸ್ ಹೆಚ್ಚಾಗಿ ಆಗುತ್ತವೇ. ಹೀಗಾಗಿ ಆಟಗಾರರು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಿದೆ.


ಇದನ್ನೂ ಓದಿ: IPL 2020 ಪಂದ್ಯಗಳನ್ನು ಯಾವ ಚಾನೆಲ್‌ಗಳಲ್ಲಿ ವೀಕ್ಷಿಸಬಹುದು? ಕನ್ನಡ ಚಾನೆಲ್‌ನಲ್ಲೂ ಪ್ರಸಾರ! ಡೀಟೇಲ್ಸ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights