FACT CHECK : ತಮಿಳುನಾಡು DCM ಉದಯನಿಧಿ ಸ್ನೇಹಿತನಿಂದ ಕೋಟ್ಯಾಂತರ ರೂಪಾಯಿ ಅಕ್ರಮ ಹಣ ವಶಪಡಿಸಿಕೊಳ್ಳಲಾಗಿದೆಯೇ?

ಇದು ತಮಿಳುನಾಡು ಮುಖ್ಯಮಂತ್ರಿ ಪುತ್ರ ಡಿಸಿಎಂ ಉದಯನಿಧಿ ಸ್ನೇಹಿತ ರಿತೀಶ್ ಆಕಾಶ್ ಗೋಡೌನ್ ಮೇಲೆ ದಾಳಿ ನಡೆಸಿ ಕೋಟ್ಯಂತರ ರೂಪಾಯಿ ಅಕ್ರಮ ಹಣವನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ಉದಯನಿಧಿ ಸ್ಟಾಲಿನ್ ಅವರ ಸ್ನೇಹಿತ ರಿತೀಶ್ ಆಕಾಶ್ ಅವರ ಗೋಡೌನ್‌ನಿಂದ ಚುನಾವಣಾ ಸಮಯದಲ್ಲಿ ಕೋಟ್ಯಾಂತರ ರೂ. ಗಳನ್ನು ಜಾರಿ ನಿರ್ದೇಶನಾಲಯ (ED) ವಶಪಡಿಸಿಕೊಂಡಿದೆ ಎಂದು ಪೋಸ್ಟ್‌ಗಳು ಹೇಳುತ್ತವೆ. ಯಂತ್ರಗಳನ್ನು ಬಳಸಿ ಹಣವನ್ನು ಎಣಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರವ ವಿಡಿಯೋ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಇದೇ ರೀತಿಯ ದೃಶ್ಯವನ್ನು ಒಳಗೊಂಡ ವರದಿಯನ್ನು ಸಿಎನ್‌ಎನ್ ನ್ಯೂಸ್ 18 ಹಂಚಿಕೊಂಡಿರುವುದು ಕಂಡುಬಂದಿದೆ. ‘ಕೋಲ್ಕತ್ತಾದಲ್ಲಿ ಇಡಿ ಮೆಗಾ ದಾಳಿ ನಡೆಸಿ 18 ಕೋಟಿ ರೂ. ವಶಪಡಿಸಿಕೊಂಡಿದೆ’ ಎಂಬ ಶೀರ್ಷಿಕೆಯೊಂದಿಗೆ ನ್ಯೂಸ್ 18 ಸೆಪ್ಟೆಂಬರ್ 11, 2022 ರಂದು ಮಾಡಿರುವ ವರದಿ ಲಭ್ಯವಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಮತ್ತಷ್ಟು ಸರ್ಚ್ ಮಾಡಿದಾಗ, ಇಂಡಿಯಾ ಟುಡೇ ಮತ್ತು ಎನ್‌ಡಿಟಿವಿಯಂತಹ ಮಾಧ್ಯಮಗಳು ಮಾಡಿದ ವರದಿ ಲಭ್ಯವಾಗಿದೆ.

ಈ ವರದಿಗಳ ಪ್ರಕಾರ, ಕೋಲ್ಕತ್ತಾದ ಗಾರ್ಡನ್ ರೀಚ್ ಪ್ರದೇಶದಲ್ಲಿ ‘ಇ-ನಗೆಟ್ಸ್’ ಎಂಬ ಗೇಮಿಂಗ್ ಆ್ಯಪ್ ನಡೆಸುತ್ತಿದ್ದ ಆಮಿರ್ ಖಾನ್ ಅವರ ಮನೆಗಳು ಮತ್ತು ಸಂಸ್ಥೆಗಳ ಮೇಲೆ ದಾಳಿ ನಡೆಸಲಾಯಿತು. ದಾಳಿಯ ಸಮಯದಲ್ಲಿ 17.32 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ತಿಳಿಸಿದೆ. ಮೊಬೈಲ್ ಗೇಮಿಂಗ್ ಆ್ಯಪ್ ಮೂಲಕ ಹಣವನ್ನು ಸಂಗ್ರಹಿಸಲಾಗಿದೆ. ಈ ಪ್ರಕರಣವು 2021 ರಲ್ಲಿ ಕೋಲ್ಕತ್ತಾ ಪೊಲೀಸರು ಇ-ನಗೆಟ್ಸ್ ಎಂಬ ಕಂಪನಿ ಮತ್ತು ಅದರ ಪ್ರವರ್ತಕರ ವಿರುದ್ಧ ಸಲ್ಲಿಸಿದ ಎಫ್‌ಐಆರ್ ಅನ್ನು ಆಧರಿಸಿದೆ.

ಈ ಸಂಬಂಧವಿಲ್ಲ ವಿಡಿಯೋವನ್ನು ಉದಯನಿಧಿ ಸ್ಟಾಲಿನ್‌ ಗೆ ಲಿಂಕ್ ಮಾಡುವಲ್ಲಿ BJP ಕೂಡ ಹಿಂದೆ ಉಳಿದಿರಲಿಲ್ಲ. ಈ ತಪ್ಪಾದ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ  BJP ಸಾರ್ವಜನಿಕವಾಗಿ ಬೆತ್ತಲಾಗಿತ್ತು. ಹಾಗಾಗಿ ವೈರಲ್ ಆಗಿರುವ ವಿಡಿಯೋಗೂ ಉದಯನಿಧಿ ಸ್ಟಾಲಿನ್‌ಗೂ ಯಾವ ರೀತಿಯಲ್ಲೂ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2022ರಲ್ಲಿ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಗೇಮಿಂಗ್ ಆ್ಯಪ್ ನಡೆಸುತ್ತಿದ್ದ ಅಡಗುತಾಣದ ಮೇಲೆ ನಡೆದ ದಾಳಿಯ ವೇಳೆ ವಶಪಡಿಸಿಕೊಂಡ ಅಕ್ರಮ ಹಣದ ಪ್ರಕರಣ ಎಂಬುದು ಸ್ಪಷ್ಟವಾಗಿದೆ. ತಮಿಳುನಾಡಿನಲ್ಲಿ ನಡೆದ ಚುನಾವಣೆ ಹಿನ್ನಲೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಮಿಸ್‌ಲೀಡ್‌ ಮಾಡಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.


ಇದನ್ನು ಓದಿರಿ : FACT CHECK : ಪಂಚ ರಾಜ್ಯ ಚುನಾವಣೆ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆಯಾಗಲಿದೆಯೇ?


ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights