ತಿಂಗಳಾದರೂ ಇನ್ನೂ ಸಿಕ್ಕಿಲ್ಲ 5000 ಪರಿಹಾರ : ಆಟೋ, ಕ್ಯಾಬ್ ಚಾಲಕರ ಆಕ್ರೋಶ!

ರಾಜ್ಯ ಸರ್ಕಾರ ಕೊರೊನಾ ಲಾಕ್ ಡೌನ್ ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಚಾಲಕರಿಗೆ ಸಹಾಯವಾಗಲು ಘೋಷಿಸಿದ 5000 ಪರಿಹಾರ ಧನ ತಿಂಗಳಾದರೂ ಚಾಲಕರ ಕೈ ಸೇರದ ಕಾರಣ ಮೈಸೂರಿನಲ್ಲಿ ಆಟೋ ಹಾಗೂ ಕ್ಯಾಬ್ ಚಾಲಕರು ಆಕ್ರೋಶ ಹೊರಹಾಕಿದ್ದಾರೆ.

ಹೌದು… ಚಾಲಕರಕ ನೆರವಿಗೆ ನಿಂತ ಸರ್ಕಾರ ಹಲವಾರು ದಾಖಲಾತಿಗಳನ್ನು ಕೇಳುವ ಮೂಲಕ ಪರಿಹಾರ ಧನ ನೀಡುವಲು ಸುಖಾ ಸುಮ್ಮನೇ ತಡ ಮಾಡುತ್ತಿದೆ. ಹೀಗಾಗಿ ಸಂಕಷ್ಟದ ಸಮಯದಲ್ಲಿ ತಕ್ಕ ಮಟ್ಟಿನ ದಾಖಲಾತಿಗಳನ್ನು ಪಡೆದು ಬಹುಬೇಗ ಪರಿಹಾರ ನೀಡಬೇಕೆಂದು ಚಾಲಕರು ಒತ್ತಾಯಿಸಿದ್ದಾರೆ. ಸಹಾಯ ಹಣ ಪಡೆಯಲು ಅರ್ಜಿಯನ್ನ ಸಲ್ಲಿಸಿದ ಸಾವಿರಾರು ಆಟೋ ಹಾಗೂ ಕ್ಯಾಬ್ ಚಾಲಕರಿಗೆ ಹಣ ಸಿಗುವುದಿರಲಿ ಆ ಬಗ್ಗೆ ಯಾವ ಮಾಹಿತಿ ಕೂಡ ಸಿಗುತ್ತಿಲ್ಲ. ಹೀಗಾಗಿ ಮೊದಲೇ ಸಂಕಷ್ಟದಲ್ಲಿರುವ ಚಾಲಕರಿಗೆ ಬದುಕು ಕಟ್ಟಿಕೊಳ್ಳುವ  ಭಯ ಶುರುವಾಗಿದೆ.

ಅರ್ಜಿ ಹಾಕಿದ ಆಟೋ ಮತ್ತು ಕ್ಯಾಬ್ ಚಾಲಕರು ಎದುರು ನೋಡುತ್ತಿದ್ದಾರೆ. ಪರಿಹಾರ ಘೋಷಣೆ ಮಾಡುವೆ ವೇಳೆ ಯಾವುದೇ ಷರತ್ತುಗಳ ಬಗ್ಗೆ ಮಾಹಿತಿ ನೀಡದ ಸರ್ಕಾರ ಎಲ್ಲಾ ಆಟೋ ಹಾಗೂ ಕ್ಯಾಬ್ ಚಾಲಕರಿಗೆ ಪರಿಹಾರ ಘೋಷಿಸಿದೆ. ಸದ್ಯ ಏಕಾಏಕಿ ಷರತ್ತುಗಳನ್ನು ವಿಧಿಸುತ್ತಿರುವುದು ಚಾಲಕರ ಆಕ್ರೋಶ ಹಾಗೂ ನಿರಾಸೆಗೆ ಕಾರಣವಾಗಿದೆ. ವಾಹನದ ಮಾಲೀಕನೆ ಚಾಲಕನಾಗಿದ್ದರೆ ಮಾತ್ರ ಪರಿಹಾರ ಧನ ಲಭ್ಯವಾಗೋದು, ಕೇವಲ ಚಾಲಕನಾದರೆ 5000 ಪರಿಹಾರ ಧನ ಸಿಗೋಲ್ಲ. ಹಾಗಿದ್ದರೆ ಬಾಡಿಗೆ ಆಟೋ ಚಾಲಕರ ಗತಿ ಏನು..? ವಾಹನ ಬಾಡಿಗೆ ಪಡೆದ ಯಾವೊಬ್ಬ ಚಾಲಕನಿಗೂ ಈ ಯೋಜನೆಯ ಹಣ ಸಿಗಲ್ಲ ಅಂತ ಆರೋಪ ಕೇಳಿ ಬಂದಿದೆ. ಕೊರೊನಾ ಲಾಕ್ ಡೌನ್ ನಿಂದಾಗಿ ಪ್ರಯಾಣಿಕರು ಸಿಗದೇ, ಸಿಕ್ಕರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಹೀಗಾಗಿ ಚಾಲಕರ ಆರ್ಥಿಕ ಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಿದೆ.

ಹೀಗಿದ್ದರೂ ಷರತ್ತಿನನ್ವಯ ವಾಹನದ ಆರ್‌ಸಿ, ಚಾಲಕರ ಡಿಎಲ್, ಇನ್ಸುರೇನ್ಸ್ ಮೂಲಕ ಅರ್ಜಿ ದಾಖಲಿಸಿದರೂ ಚಾಲಕರಿಗೆ ತಿಂಗಳಾದರೂ ಪರಿಹಾರ ಹಣ ಕೈ ಸೇರಿಲ್ಲ. ಇನ್ನು ಕ್ಯಾಬ್‌ಗಳಿಗೆ ವಾಹನದ ಚಾರ್ಸಿ ನಂಬರ್ ಹಾಕಿದರೆ ಮಾತ್ರ ಓಟಿಪಿ ಬರೋದು. ಆದ್ರೆ ಚಾರ್ಸಿ ನಂಬರ್ ಅನ್ನು ಪೂರ್ಣಪ್ರಮಾಣದಲ್ಲಿ ಆನ್‌ಲೈನ್ ವೆಬ್‌ಸೈಟ್ ಸ್ವೀಕರಿಸುತ್ತಿಲ್ಲ. ಮೊದಲು ಪೋಸ್ಟ್ ಆಫೀಸ್‌ನಲ್ಲಿ ಅರ್ಜಿ ಹಾಕಿ ನಂತರ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುತ್ತಿರೋದು ಗೊಂದಲದ ವಾತಾವರಣ ನಿರ್ಮಾಣವಾಗಿದೆ.

ಸಾಂಸ್ಕೃತಿಕ ನಗರಿಯಲ್ಲಿ 25 ಸಾವಿರಕ್ಕೂ ಹೆಚ್ಚು ಆಟೋಗಳ ಓಡಾಟವಿದ್ದು, ಅರ್ಜಿ ಸಲ್ಲಿಸಿದ 20 ಸಾವಿರ ಫಲಾನುಭವಿಗಳಿಗೆ ಪರಿಹಾರ ಹಣ ಸಿಗದೆ ಕಾಯುತ್ತಲೇ ಇದ್ದಾರೆ. ಇನ್ನೂ 3000ಕ್ಕೂ ಹೆಚ್ಚು ಕ್ಯಾಬ್ ಡ್ರೈವರ್‌ಗಳು ಅರ್ಜಿ ಸಲ್ಲಿಸಿದ್ದು ಈವರೆಗೂ ಯಾರೋಬ್ಬರಿಗು ಹಣ ಬಂದಿಲ್ಲ. ಆರ್ಥಿಕ ಸಂಕಷ್ಟದಲ್ಲಿರುವ ಚಾಲಕರು ಜೀವನ ಸಾಗಿಸುವುದೇ ಕಷ್ಟವಾಗಿದ್ದು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights